ಅಮೆರಿಕದ 231 ವರ್ಷಗಳ ಇತಿಹಾಸದಲ್ಲೇ.. ಹೊಸ ದಾಖಲೆ ಸೃಷ್ಟಿಸಲು ‘ಶಿಕ್ಷಕಿ’ ಜಿಲ್ ಬೈಡನ್ ಸಜ್ಜು?!
ಅಮೆರಿಕದ 46ನೆ ಅಧ್ಯಕ್ಷರಾಗಿ ಅಧಿಕಾರದ ಗಾದಿ ಹಿಡಿಯಲು ಸಜ್ಜಾಗಿರುವ ಜೋ ಬೈಡನ್ ಪತ್ನಿ ಡಾ. ಜಿಲ್ ಬೈಡನ್ ಈಗಲೂ ಶಿಕ್ಷಕಿಯಾಗಿ ತಮ್ಮ ವೃತ್ತಿಯನ್ನು ಮುಂದುವರಿಸಲು ಕೈಗೊಂಡಿರುವ ನಿರ್ಧಾರ ಎಲ್ಲರ ಗಮನವನ್ನು ಸೆಳೆದಿದೆ. ಹೌದು, ಜಿಲ್ ಅವರ ಈ ಸ್ವಯಂ ನಿರ್ಧಾರ ಈಗ ದೇಶಾದ್ಯಂತ ಎಲ್ಲರ ಮೆಚ್ಚುಗೆ ಗಳಿಸಿದೆ. ಅಂದ ಹಾಗೆ, ಜಿಲ್ ಉತ್ತರ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಡಾ. ಜಿಲ್ ಬೈಡನ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅವರು ತನ್ನ ಶಿಕ್ಷಕ […]
ಅಮೆರಿಕದ 46ನೆ ಅಧ್ಯಕ್ಷರಾಗಿ ಅಧಿಕಾರದ ಗಾದಿ ಹಿಡಿಯಲು ಸಜ್ಜಾಗಿರುವ ಜೋ ಬೈಡನ್ ಪತ್ನಿ ಡಾ. ಜಿಲ್ ಬೈಡನ್ ಈಗಲೂ ಶಿಕ್ಷಕಿಯಾಗಿ ತಮ್ಮ ವೃತ್ತಿಯನ್ನು ಮುಂದುವರಿಸಲು ಕೈಗೊಂಡಿರುವ ನಿರ್ಧಾರ ಎಲ್ಲರ ಗಮನವನ್ನು ಸೆಳೆದಿದೆ. ಹೌದು, ಜಿಲ್ ಅವರ ಈ ಸ್ವಯಂ ನಿರ್ಧಾರ ಈಗ ದೇಶಾದ್ಯಂತ ಎಲ್ಲರ ಮೆಚ್ಚುಗೆ ಗಳಿಸಿದೆ. ಅಂದ ಹಾಗೆ, ಜಿಲ್ ಉತ್ತರ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಡಾ. ಜಿಲ್ ಬೈಡನ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅವರು ತನ್ನ ಶಿಕ್ಷಕ ವೃತ್ತಿಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದರು. ಜೊತೆಗೆ, ಸಂಬಳಕ್ಕಾಗಿ ದುಡಿಯುವ ಅಮೆರಿಕದ ಪ್ರಥಮ ಮಹಿಳೆಯಾಗುವ (First Lady) ಗೌರವ ನನಗೆ ದೊರೆತಿದೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದನ್ನು ನಾನು ಅತ್ಯಂತ ಪ್ರೀತಿಯಿಂದ ಕಾಣುತ್ತೇನೆ ಎಂದು ಸಹ ಹೇಳಿದರು.
ಶ್ವೇತ ಭವನಕ್ಕೆ ಹೋದರೂ ನಾನು ನನ್ನ ವೃತ್ತಿಯನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ಜಿಲ್ ಸಾರ್ವಜನಿಕರು ಶಿಕ್ಷಕರನ್ನು ಗೌರವಿಸಬೇಕು. ಅವರ ಕೊಡುಗೆಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಈ ವೃತ್ತಿಯನ್ನು ತೆಗೆದುಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಾನು ಬಯಸುತ್ತೇನೆ ಅಂತಾ ಹೇಳಿದರು.
ಅಮೆರಿಕದ 231 ವರ್ಷಗಳ ಇತಿಹಾಸದಲ್ಲಿ ಡಾ. ಬೈಡನ್ ತನ್ನದೇ ಆದ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಹೌದು, ತಮ್ಮ ಶಿಕ್ಷಕ ವೃತ್ತಿಯನ್ನು ಮುಂದುವರಿಸುವ ಮೂಲಕ ಇವರು ವೇತನ ಪಡೆಯುವ ಉದ್ಯೋಗ ಹೊಂದಿರುವ ಏಕೈಕ ಪ್ರಥಮ ಮಹಿಳೆ ಹಾಗೂ ಮೊದಲ ಡಾಕ್ಟರೆಟ್ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.