
ಲಂಡನ್, ಫೆಬ್ರವರಿ 19: ಬ್ರಿಟಿಷ್ ರಾಜ ಚಾರ್ಲ್ಸ್ III ಅವರ ಸಹೋದರ ಮತ್ತು ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್ ಬ್ಯಾಟನ್-ವಿಂಡ್ಸರ್ ಅವರನ್ನು ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಅನುಮಾನದ ಮೇಲೆ ಬಂಧಿಸಲಾಗಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ (Epstein files row) ಅವರೊಂದಿಗಿನ ಸಂಪರ್ಕಗಳ ತನಿಖೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ. ಮಾಜಿ ಯುಕೆ ರಾಜಕುಮಾರ 2010ರಲ್ಲಿ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರಿಗೆ ವ್ಯಾಪಾರ ವರದಿಗಳನ್ನು ಕಳುಹಿಸಿದ್ದಾರೆ ಎಂಬ ವರದಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಥೇಮ್ಸ್ ವ್ಯಾಲಿ ಪೊಲೀಸರು ತಿಳಿಸಿದ್ದಾರೆ.
“ತನಿಖೆಯ ಭಾಗವಾಗಿ ನಾವು ಇಂದು ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಅನುಮಾನದ ಮೇಲೆ ನಾರ್ಫೋಕ್‌ನಿಂದ 66 ವರ್ಷದ ಆ್ಯಂಡ್ರೂ ಮೌಂಟ್ ಬ್ಯಾಟನ್ ಅವರನ್ನು ಬಂಧಿಸಿದ್ದೇವೆ” ಎಂದು ಥೇಮ್ಸ್ ವ್ಯಾಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಔಪಚಾರಿಕವಾಗಿ ಮೂರ್ನಾಲ್ಕು ಬಾರಿ ಎಪ್ಸ್ಟೀನ್ ಭೇಟಿಯಾಗಿದ್ದೆ; ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಹರ್ದೀಪ್ ಪುರಿ ಸ್ಪಷ್ಟನೆ
ಕಳೆದ ವರ್ಷ ಪ್ರಿನ್ಸ್ ಎಂಬ ಬಿರುದನ್ನು ಕಳೆದುಕೊಂಡ ಮೌಂಟ್ ಬ್ಯಾಟನ್-ವಿಂಡ್ಸರ್, ಯುಕೆಯ ವಿಂಡ್ಸರ್‌ನಲ್ಲಿರುವ ತಮ್ಮ ಮನೆಯಿಂದ ನಾರ್ಫೋಕ್‌ನಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ಗೆ ಸ್ಥಳಾಂತರಗೊಂಡ ನಂತರ ಈ ಬಂಧನ ನಡೆದಿದೆ. ಕಿಂಗ್ ಚಾರ್ಲ್ಸ್ III ಅವರ ಕಿರಿಯ ಸಹೋದರ ವಿಂಡ್ಸರ್ ಎಸ್ಟೇಟ್‌ನಲ್ಲಿರುವ 30 ರೂಂಗಳ ರಾಯಲ್ ಲಾಡ್ಜ್‌ನಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದರು.
Thames Valley Police have opened an investigation into an offence of misconduct in public office.
A man in his sixties from Norfolk has been arrested and remains in police custody. As per national guidance we will not name the arrested man.
Read more: https://t.co/wehZDx4InV pic.twitter.com/b23l2KeOHG
— Thames Valley Police (@ThamesVP) February 19, 2026
ಇದನ್ನೂ ಓದಿ: ಎಪ್ಸ್ಟೀನ್ ಫೈಲ್ಸ್ ಒಳಗೆ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು: ಏನಿದು ಕರ್ಮಕಾಂಡ?
2019ರಲ್ಲಿ ಅಪ್ರಾಪ್ತ ಬಾಲಕಿಯರ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ವಿಚಾರಣೆಗಾಗಿ ಕಾಯುತ್ತಿರುವಾಗ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಎಪ್ಸ್ಟೀನ್‌ಗೆ ಸಂಬಂಧಿಸಿದ ಮೂರು ಮಿಲಿಯನ್ ಪುಟಗಳ ದಾಖಲೆಗಳನ್ನು ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸ್ವಲ್ಪ ಸಮಯದ ನಂತರ ಅವರು ರಾಯಲ್ ಲಾಡ್ಜ್‌ನಿಂದ ನಿರ್ಗಮಿಸಿದ್ದಾರೆ. ಈ ಹಿಂದೆ, ಮೌಂಟ್ ಬ್ಯಾಟನ್-ವಿಂಡ್ಸರ್ ವ್ಯಾಪಾರ ರಾಯಭಾರಿಯಾಗಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ತಮ್ಮ ಅಧಿಕೃತ ಕೆಲಸದಿಂದ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆಂದು ಬಿಬಿಸಿ ವರದಿ ಮಾಡಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ