Kashmir Unity Day: ದೇಶದಲ್ಲಿ ಹಸಿವು, ಬಡತನವಿದ್ದರೂ ಕಾಶ್ಮೀರ ಮಾತ್ರ ಬೇಕು: ಪಾಕಿಸ್ತಾನದ ಹೊಸ ಷಡ್ಯಂತ್ರ

|

Updated on: Feb 04, 2023 | 1:44 PM

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರತಿದಿನ ಹೊಸ ಹೊಸ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಇದೀಗ ಕಾಶ್ಮೀರ ಪ್ರತಿಭಟನೆ ಕುರಿತು ಹೊಸ ಟೂಲ್‌ಕಿಟ್ ಬಿಡುಗಡೆ ಮಾಡಿದೆ. ಫೆಬ್ರವರಿ 5 ರಂದು ಪಾಕಿಸ್ತಾನವು 'ಕಾಶ್ಮೀರ ಒಗ್ಗಟ್ಟಿನ ದಿನ'ವನ್ನು ಆಚರಿಸಲಿದೆ .

Kashmir Unity Day: ದೇಶದಲ್ಲಿ ಹಸಿವು, ಬಡತನವಿದ್ದರೂ ಕಾಶ್ಮೀರ ಮಾತ್ರ ಬೇಕು: ಪಾಕಿಸ್ತಾನದ ಹೊಸ ಷಡ್ಯಂತ್ರ
ಸಾಂದರ್ಭಿಕ ಚಿತ್ರ
Follow us on

ಭಾರತದ (india) ನೆರೆಯ ರಾಷ್ಟ್ರ ಪಾಕಿಸ್ತಾನವು ಪ್ರಸ್ತುತ ರಾಜಕೀಯ ಕ್ರಾಂತಿ, ಭಯೋತ್ಪಾದಕ ದಾಳಿ, ಹಸಿವು ಮತ್ತು ಬಡತನದಿಂದ ಬಳಲುತ್ತಿದೆ. ನಮ್ಮ ದೇಶವು ಸ್ಥಿರವಾಗಿಲ್ಲ ಆದರೆ ಕಾಶ್ಮೀರ ಮಾತ್ರ ಬೇಕು ಎಂದು ಹಠತೊಟ್ಟು ನಿಂತಿದೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರತಿದಿನ ಹೊಸ ಹೊಸ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಇದೀಗ ಕಾಶ್ಮೀರ ಪ್ರತಿಭಟನೆ ಕುರಿತು ಹೊಸ ಟೂಲ್‌ಕಿಟ್ ಬಿಡುಗಡೆ ಮಾಡಿದೆ. ಫೆಬ್ರವರಿ 5 ರಂದು ಪಾಕಿಸ್ತಾನವು ‘ಕಾಶ್ಮೀರ ಒಗ್ಗಟ್ಟಿನ ದಿನ‘ವನ್ನು (Kashmir Unity Day) ಆಚರಿಸಲಿದೆ . ಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಬೃಹತ್‌ ಮಟ್ಟದಲ್ಲಿ ರ್ಯಾಲಿ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಪಾಕಿಸ್ತಾನದ ಧಾರ್ಮಿಕ ಮತ್ತು ರಾಜಕೀಯ ಗುಂಪುಗಳು ಈ ದಿನವನ್ನು ಗುರುತಿಸಲು ಮೆರವಣಿಗೆಗಳು, ರ್ಯಾಲಿಗಳು, ಸಮ್ಮೇಳನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತವೆ. ಲಾಹೋರ್‌ನಲ್ಲಿ, ಜಮಾತ್-ಎ-ಇಸ್ಲಾಮಿ (ಜೆಐ) ಪಕ್ಷವು ಲಿಬರ್ಟಿ ಚೌಕ್‌ನಿಂದ ಪಂಜಾಬ್ ಅಸೆಂಬ್ಲಿ ಹಾಲ್‌ಗೆ ಮಧ್ಯಾಹ್ನ 1 ಗಂಟೆಗೆ ಮೆರವಣಿಗೆ ನಡೆಸಲಿದೆ. ಪಿಒಕೆಯಲ್ಲಿನ ಜಮಾತ್-ಎ-ಇಸ್ಲಾಮಿ ಕಾರ್ಯಕರ್ತರು ಪ್ರದೇಶದ ಒಳಗೆ ಮತ್ತು ಹೊರಗೆ ಪ್ರಮುಖ ಮಾರ್ಗಗಳಲ್ಲಿ ಮಾನವ ಸರಪಳಿ ರಚಿಸಲಿದ್ದಾರೆ.

ಇದನ್ನೂ ಓದಿ: Jammu-Kashmir: ತವಾಂಗ್ ಮುಖಾಮುಖಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಗಸ್ತು ಹೆಚ್ಚಿಸಿದ ಭದ್ರತಾ ಪಡೆ

ಸ್ಥಳೀಯ ಪ್ರೆಸ್ ಕ್ಲಬ್‌ಗಳು, ಸಾರ್ವಜನಿಕ ಸ್ಥಳಗಳು, ಪ್ರಮುಖ ಮಸೀದಿಗಳು, ಪ್ರಮುಖ ರಸ್ತೆಗಳು, ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳು ಮತ್ತು ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಬಳಿ ಇತರ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ರ್ಯಾಲಿಗಳು ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Sat, 4 February 23