Facebook ಉದ್ಯೋಗಿಗಳಿಗೆ ಮುಂದಿನ ವರ್ಷವೂ Work From Home!

ಕೊರೊನಾ ವೈರಸ್​ನಿಂದಾಗಿ ವಿಶ್ವದಾದ್ಯಂತ ಹಲವು ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ಇದರ ಮಧ್ಯೆ ಫೇಸ್​ಬುಕ್​ ಜಾಲತಾಣ ಸಂಸ್ಥೆಯು ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಅಂದರೆ ವರ್ಕ್​ ಫ್ರಮ್​ ಹೋಮ್​ ಮಾಡಲು ಸೂಚಿಸಿದೆ. ಹಾಗಾಗಿ, ಮುಂದಿನ ವರ್ಷದ ಅಂದ್ರೆ ಜುಲೈ 21ರ ವರೆಗೂ ಕಂಪನಿಯ ಸಿಬ್ಬಂದಿ ವರ್ಕ್​ ಫ್ರಂ ಹೋಂ ಮಾಡಲಿದ್ದಾರೆ. ಇದಲ್ಲದೆ, ಮನೆಯಿಂದಲೇ ಕೆಲಸ ಮಾಡಲು ಬೇಕಾದ ಅಗತ್ಯ ವಸ್ತುಗಳ ಖರೀದಿಗೆ 1 ಸಾವಿರ ಡಾಲರ್​ ಸಹ ನೀಡುವುದಾಗಿ ತಿಳಿಸಿದೆ. ಕೊರೊನಾ ವೈರಸ್​​ಗೆ ಲಾಮಾ ಮದ್ದು..? ಕೊರೊನಾಗೆ […]

Facebook ಉದ್ಯೋಗಿಗಳಿಗೆ ಮುಂದಿನ ವರ್ಷವೂ Work From Home!
Follow us
KUSHAL V
|

Updated on: Aug 08, 2020 | 2:08 PM

ಕೊರೊನಾ ವೈರಸ್​ನಿಂದಾಗಿ ವಿಶ್ವದಾದ್ಯಂತ ಹಲವು ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ಇದರ ಮಧ್ಯೆ ಫೇಸ್​ಬುಕ್​ ಜಾಲತಾಣ ಸಂಸ್ಥೆಯು ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಅಂದರೆ ವರ್ಕ್​ ಫ್ರಮ್​ ಹೋಮ್​ ಮಾಡಲು ಸೂಚಿಸಿದೆ.

ಹಾಗಾಗಿ, ಮುಂದಿನ ವರ್ಷದ ಅಂದ್ರೆ ಜುಲೈ 21ರ ವರೆಗೂ ಕಂಪನಿಯ ಸಿಬ್ಬಂದಿ ವರ್ಕ್​ ಫ್ರಂ ಹೋಂ ಮಾಡಲಿದ್ದಾರೆ. ಇದಲ್ಲದೆ, ಮನೆಯಿಂದಲೇ ಕೆಲಸ ಮಾಡಲು ಬೇಕಾದ ಅಗತ್ಯ ವಸ್ತುಗಳ ಖರೀದಿಗೆ 1 ಸಾವಿರ ಡಾಲರ್​ ಸಹ ನೀಡುವುದಾಗಿ ತಿಳಿಸಿದೆ.

ಕೊರೊನಾ ವೈರಸ್​​ಗೆ ಲಾಮಾ ಮದ್ದು..? ಕೊರೊನಾಗೆ ಮದ್ದಿಲ್ಲ ಅಂತಾ ಇಡೀ ವಿಶ್ವವೇ ವ್ಯಾಕ್ಸಿನ್ ಪತ್ತೆಯಲ್ಲಿ ತೊಡಗಿದೆ. ಆದ್ರೆ, ಪೆರು ದೇಶದಲ್ಲಿ ಮಾತ್ರ ಪ್ರಾಣಿಯೊಂದರ ದೇಹದಿಂದ ಕೊರೊನಾಗೆ ಮದ್ದು ಹುಡಕುವ ಕೆಲಸ ನಡೀತಿದೆ. ಹೌದು, ರಾಷ್ಟ್ರೀಯ ಆರೋಗ್ಯ ಸಂಸ್ಥೆ ಐಎನ್​ಎಸ್​ನಲ್ಲಿ ಲಾಮಾದಿಂದ ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಅನ್ನುವುದರ ಬಗ್ಗೆ ಸಂಶೋಧನೆ ನಡೆಸಲಾಗ್ತಿದೆ.

ಕೊರೊನಾ ‘ರಣಕೇಕೆ’ ಹೆಮ್ಮಾರಿ ಕೊರೊನಾ ವಿಶ್ವದಾದ್ಯಂತ ತನ್ನ ಕಬಂಧಬಾಹುಗಳನ್ನ ಚಾಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ದುಪ್ಪಟ್ಟಾಗ್ತಿದೆ. ವಿಶ್ವದಲ್ಲಿ ಸೋಂಕಿತರ ಸಂಖ್ಯೆ1,95,43,562ಕ್ಕೆ ಏರಿಕೆಯಾಗಿದ್ರೆ, ಸತ್ತವರ ಸಂಖ್ಯೆ 7,24,075ಕ್ಕೆ ಏರಿದೆ. ಸೋಂಕಿನಿಂದಾಗಿ ಇನ್ನೂ 62,73,920 ಜನರು ಚಿಕಿತ್ಸೆ ಪಡೆಯುತ್ತಿದ್ರೆ, 1,25,45,567 ಜನರು ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ 24 ಗಂಟೆಯಲ್ಲಿ, 1290 ಬಲಿ..! ಅಮೆರಿಕದಲ್ಲಿ ಕೊರೊನಾ ವೈರಸ್ ಅಟ್ಟಹಾಸಕ್ಕೆ ಕೊನೆಯೇ ಇಲ್ಲವಾಗಿದ್ದು, ದೇಶದಲ್ಲಿ ಸೋಂಕಿನ ಸುನಾಮಿಯೇ ಎದ್ದಿದೆ.ಕೇವಲ 24 ಗಂಟೆಗಳ ಅವಧಿಯಲ್ಲಿ 63,246 ಜನರಿಗೆ ವೈರಸ್ ಅಟ್ಯಾಕ್ ಆಗಿದ್ರೆ, 1290 ಜನರು ಹೆಮ್ಮಾರಿ ವೈರಸ್​ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50,95,524ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ ಈವರೆಗೂ 1,64,094 ಜನರು ಜೀವ ಕಳೆದುಕೊಂಡಿದ್ದಾರೆ.

ಬ್ರೆಜಿಲ್​ನಲ್ಲಿ ಮಾರಣಹೋಮ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ 29,67,064 ಜನರಿಗೆ ವೈರಸ್ ಅಟ್ಯಾಕ್ ಆಗಿದ್ರೆ, ಸಾವಿನ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ. 7,98,968 ಜನರು ವೈರಸ್​ನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ಕೊರೊನಾ ವಿರುದ್ಧ ಹೋರಾಡಿ 20,68,394 ಜನರು ಗುಣಮುಖರಾಗಿದ್ದಾರೆ. ಸ್ಮಶಾನದ ಬಳಿ ತೆರಳಿದ ಸಂಬಂಧಿಕರು ಹೂಗುಚ್ಛಗಳನ್ನ ನೀಡಿ ಕಂಬನಿ ಮಿಡಿದ್ರು.

ಆಫ್ರಿಕಾದಲ್ಲಿ ಸೋಂಕಿನ ತಲ್ಲಣ ಆಫ್ರಿಕಾದಲ್ಲಿ ಕೊರೊನಾ ಸೋಂಕಿನ ಅಬ್ಬರಕ್ಕೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದ್ದು, ಆಫ್ರಿಕಾದಲ್ಲಿ ಸೋಂಕಿನಿಂದಾಗಿ 22 ಸಾವಿರ ಜನರು ಜೀವ ಕಳೆದುಕೊಂಡಿದ್ರೆ, 6 ಲಕ್ಷದ 90 ಸಾವಿರ ಜನರು ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಆಫ್ರಿಕಾದಲ್ಲಿ ಅಷಟರ ಮಟ್ಟಿಗೆ ಸೋಂಕು ಇನ್ನೂ ತುತ್ತ ತುದಿ ತಲುಪಿಲ್ಲ ಅಂತಾ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸಿರಿಯಾ’ದಲ್ಲಿ ಕೊರೊನಾ ಸುಳಿ ಸಿರಿಯಾದಲ್ಲಿ ಕೊರೊನಾ ಸೋಂಕಿನ ಅಬ್ಬರ ಎಲ್ಲೆ ಮೀರಿ ಮುನ್ನುಗ್ಗತ್ತಲೇ ಇದ್ದು, ಸೋಂಕು ನಿರೀಕ್ಷೆಗೂ ಮೀರಿ ಹಬ್ಬುತ್ತಿದೆಯಂತೆ. ಸರ್ಕಾರ ಕೊವಿಡ್ ಟೆಸ್ಟ್ ಮಾಡುತ್ತಿರುವುದಕ್ಕಿಂತ ಹೆಚ್ಚಾಗಿ ವೈರಸ್ ಸ್ಪ್ರೆಡ್ ಆಗುತ್ತಿದೆ ಅಂತಾ ವೈದ್ಯರೂ ಕಳವಳ ವ್ಯಕ್ತಪಡಿಸಿದ್ದಾರೆ., ಹೀಗಾಗಿ, ಹಲವರು ಫೇಸ್​ಬುಕ್​ನ ಮೂಲಕ ಕೊರೊನಾ ಬಗ್ಗೆ ಸಲಹೆ ಕೇಳುತ್ತಿದ್ದಾರಂತೆ.

ಹಾಂಕಾಂಗ್​ನಲ್ಲಿ ಫ್ರೀ ಕೊವಿಡ್ ಟೆಸ್ಟ್..! ಹಾಂಕಾಂಗ್​ನಲ್ಲಿ ಕೊರೊನಾ ಸೋಂಕಿನಿಂದಾಗಿ ಸೋಂಕಿತರ ಸಂಖ್ಯೆ 3,850ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 46 ಜನರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ, ಸೋಂಕಿತರ ಪರೀಕ್ಷೆಗೆ ಮುಂದಾಗಿರುವ ಹಾಂಕಾಂಗ್ ಸರ್ಕಾರ, ಸ್ಥಳೀಯ ನಿವಾಸಿಗಳಿಗೆ ಮನೆ ಮನೆ ತೆರಳಿ ಉಚಿತವಾಗಿ ಕೊವಿಡ್ ಟೆಸ್ಟ್ ಮಾಡಲು ಮುಂದಾಗಿದೆ. ಸದ್ಯ ದೇಶದ ಸ್ಥಿತಿ ತುಂಬಾ ಜಠಿಲವಾಗಿದ್ದು, ವೈರಸ್​ನಿಂದ ಟೆನ್ಷನ್ ತಂದೊಡ್ಡಿದೆ.

ರಷ್ಯಾದಲ್ಲಿ ಕೊರೊನಾ ‘circus’! ರಷ್ಯಾದಲ್ಲಿ ಕ್ರೂರಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ 8,77,135ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದ 14 ಸಾವಿರ ಜನರು ಜೀವ ಕಳೆದುಕೊಂಡಿದ್ದಾರೆ. ವೈರಸ್​ ನಿಗ್ರಹಿಸಲು ಇಷ್ಟು ದಿನ ಲಾಕ್​ಡೌನ್ ವಿಧಿಸಲಾಗಿತ್ತು. ಆದ್ರೀಗ, ಕೊರೊನಾ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ, ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ಸರ್ಕಸ್​ ಕಂಪನಿಗಳನ್ನ ತೆರೆಯಲಾಗಿದೆ. ಜನರು ದೈಹಿಕ ಅಂತರವಿಲ್ಲದೇ ಸಕರ್ಸ್​​ನಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ರು.