Fact Check: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ಗೆ ಹೃದಯಾಘಾತವಾಗಿರುವ ವಿಡಿಯೋ ಎಲ್ಲೆಡೆ ವೈರಲ್, ಸತ್ಯವೇನು?

|

Updated on: May 14, 2023 | 11:48 AM

ತಮ್ಮ ಫಿಟ್​ನೆಸ್​ನಿಂದಲೇ ವಿಶ್ವಾದ್ಯಂತ ಪ್ರಸಿದ್ಧರಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೃದಯಾಘಾತವಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Fact Check: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ಗೆ ಹೃದಯಾಘಾತವಾಗಿರುವ ವಿಡಿಯೋ ಎಲ್ಲೆಡೆ ವೈರಲ್, ಸತ್ಯವೇನು?
ವ್ಲಾಡಿಮಿರ್ ಪುಟಿನ್
Follow us on

ತಮ್ಮ ಫಿಟ್​ನೆಸ್​ನಿಂದಲೇ ವಿಶ್ವಾದ್ಯಂತ ಪ್ರಸಿದ್ಧರಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೃದಯಾಘಾತವಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈಗಳು ನಡುಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ವ್ಲಾಡಿಮಿರ್ ಪುಟಿನ್ ಅವರ ಕೈ ತೀವ್ರವಾಗಿ ನಡುಗುತ್ತಿರುವುದು ಬಳಿಕ ನೆಲದ ಮೇಲೆ ಕುಸಿದು ಬೀಳುವುದನ್ನೂ ಗಮನಿಸಬಹುದು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ಕೆಟ್ಟಿದೆ ಹೃದಯಾಘಾತವಾಗಿದೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಆದರೆ ಆ ವಿಡಿಯೋ ಸತ್ಯವಲ್ಲ, ಅದನ್ನು ಎಐ ಟೆಕ್ನಾಲಜಿಯನ್ನು ಬಳಸಿ ಕ್ರಿಯೇಟ್​ ಮಾಡಿರುವಂಥದ್ದು ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಾಲಗೆ ಮರಗಟ್ಟಿದೆ, ದೃಷ್ಟಿ ಮಂದ; ವೈದ್ಯರಿಗೆ ಆತಂಕ: ವರದಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗಿನ ಭೇಟಿಯ ಸಮಯದಲ್ಲಿ ಟೇಬಲ್​ನ್ನು ಹಿಡಿದುಕೊಂಡೇ ಇರುವುದು ಕಂಡುಬಂದಿತ್ತು, ಅವರ ಬಲಗೈ ಹೆಬ್ಬೆರಳು ಮಾತ್ರ ಸ್ವಲ್ಪ ಚಲಿಸುತ್ತಿತ್ತು. ಮುಖವು ಊದಿಕೊಂಡಂತೆ ಗೋಚರಿಸುತ್ತಿತ್ತು.

ರಾತ್ರಿ ನಡೆದಿದ್ದ ಸಭೆಯೊಂದರಲ್ಲಿ ಪುಟಿನ್ ಕುಸಿದುಬಿದ್ದಿದ್ದರು ಎಂದು ಕೆಲವರು ಹೇಳಿದ್ದಾರೆ ಆದರೆ ಇದೆಲ್ಲವನ್ನೂ ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ. ಈ ಹಿಂದೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಎಐ ರಚಿತ ಫೋಟೊಗಳು ವೈರಲ್ ಆಗಿದ್ದವು ಅದರಲ್ಲಿ ಪೊಲೀಸ್​ ಡೊನಾಲ್ಡ್​ ಟ್ರಂಪ್ ಅವರನ್ನು ಬಂಧಿಸುತ್ತಿರುವಂತೆ ಬಿಂಬಿಸುವ ಚಿತ್ರವೂ ಇತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ