Fact Check: ಅಂತರಿಕ್ಷದಿಂದ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್ ಎಂದು ಹಳೆಯ ವಿಡಿಯೋ ವೈರಲ್

| Updated By: Vinay Bhat

Updated on: Mar 20, 2025 | 3:16 PM

Sunita Williams Fact Check: ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಜೂನ್ 2024 ರಲ್ಲಿ ವಿಲಿಯಮ್ಸ್ ತನ್ನ ಸಹೋದ್ಯೋಗಿಗಳೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದಾಗಿನದ್ದಾಗಿದೆ.

Fact Check: ಅಂತರಿಕ್ಷದಿಂದ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್ ಎಂದು ಹಳೆಯ ವಿಡಿಯೋ ವೈರಲ್
Sunita Willams Fact Check
Follow us on

ಬೆಂಗಳೂರು (ಮಾ. 20): ಕಳೆದ ವರ್ಷ ಜೂನ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಅವರ ಸಹೋದ್ಯೋಗಿಗಳು ಸುಮಾರು ಒಂಬತ್ತು ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಅವರನ್ನು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಏತನ್ಮಧ್ಯೆ, ಸುನೀತಾ ವಿಲಿಯಮ್ಸ್ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಬಾಹ್ಯಾಕಾಶ ನೌಕೆಯಲ್ಲಿ ಸಂತೋಷದಿಂದ ನೃತ್ಯ ಮಾಡುತ್ತಿರುವುದು ಕಾಣಬಹುದು. ಅವರೊಂದಿಗೆ ಮತ್ತೊಬ್ಬ ಗಗನಯಾತ್ರಿ ಸಹ ಇದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಅಂತರಿಕ್ಷದಿಂದ ಸುರಕ್ಷಿತವಾಗಿ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ರೋಹಿತ್ ಶರ್ಮಾಗೆ ನೀತಾ ಅಂಬಾನಿ ಬುಗಾಟಿ ಕಾರು ಗಿಫ್ಟ್ ನೀಡಿದ್ದು ನಿಜವೇ?
ಮಾರುಕಟ್ಟೆಗೆ ಬಂದಿವೆ ಹೊಸ 350 ರೂ. ನೋಟುಗಳು?: ವೈರಲ್ ಫೋಟೋದ ಸತ್ಯ ಏನು?
ಜಾಫರ್ ಎಕ್ಸ್ ಪ್ರೆಸ್ ರೈಲ್ ಹೈಜಾಕ್ ಎಂದು 2022ರ ವಿಡಿಯೋ ವೈರಲ್
ಏಪ್ರಿಲ್ 1, 2025 ರಿಂದ ಎಲ್ಲ ಬ್ಯಾಂಕ್​ಗಳ ಯುಪಿಐ ವಹಿವಾಟುಗಳು ಸ್ಥಗಿತ?

ಇದು 2024ರ ವಿಡಿಯೋ:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಜೂನ್ 2024 ರಲ್ಲಿ ವಿಲಿಯಮ್ಸ್ ತನ್ನ ಸಹೋದ್ಯೋಗಿಗಳೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದಾಗಿನದ್ದಾಗಿದೆ.

Fact Check: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾಗೆ ನೀತಾ ಅಂಬಾನಿ ಬುಗಾಟಿ ಕಾರು ನೀಡಿದ್ದು ನಿಜವೇ?

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಪ್ರಮುಖ ಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದಾಗ, ಇದೇ ವಿಡಿಯೋವನ್ನು ನಾಸಾ ಜೂನ್ 7, 2024 ರಂದು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನಾವು ಕಂಡಿಕೊಂಡಿದ್ದೇವೆ. ಇದಕ್ಕೆ ‘‘ನೀವು ಸ್ಟೇಷನ್​ಗೆ ಹಿಂತಿರುಗಿದಾಗ ಆ ಭಾವನೆ! #Starliner ಮೂಲಕ ಭೂಮಿಯಿಂದ ಮೊದಲ ಸಿಬ್ಬಂದಿ ಪ್ರಯಾಣ ಮಾಡಿದ ನಂತರ ಬುಚ್ ವಿಲ್ಮೋರ್ ಮತ್ತು ಸುನಿ ವಿಲಿಯಮ್ಸ್ ಅವರನ್ನು @Space_Station ಸಿಬ್ಬಂದಿ ಸ್ವಾಗತಿಸಿದ್ದಾರೆ’’ ಎಂದು ಶೀರ್ಷಿಕೆ ನೀಡಲಾಗದೆ.

 

ಹಾಗೆಯೆ ಬೋಯಿಂಗ್ ಸ್ಪೇಸ್​ನ ಅಧಿಕೃತ ಎಕ್ಸ್ ಹ್ಯಾಂಡಲ್, ಜೂನ್ 07, 2024 ರಂದು ಇದೇ ವೈರಲ್ ವೀಡಿಯೊವನ್ನು ಉತ್ತಮ ಕ್ವಾಲಿಟಿಯಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂತು.

ANI ಕೂಡ ಜೂನ್ 7, 2024 ರಂದು ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿದೆ. ಇಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವೀಡಿಯೊ ವಿಲಿಯಮ್ಸ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಂತರದ ವಿಡಿಯೋ. ವಿಲಿಯಮ್ಸ್ ಮತ್ತು ಅವರ ಸಿಬ್ಬಂದಿ ಬುಚ್ ವಿಲ್ಮೋರ್ ಜೂನ್ 6, 2024 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಸುರಕ್ಷಿತವಾಗಿ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. ಐಎಸ್‌ಎಸ್‌ನಲ್ಲಿರುವ ಎಕ್ಸ್‌ಪೆಡಿಶನ್ 71 ಸಿಬ್ಬಂದಿಯ ಏಳು ಗಗನಯಾತ್ರಿಗಳು ಬೋಯಿಂಗ್‌ನ ಹೊಸ ಕ್ಯಾಪ್ಸುಲ್‌ನಲ್ಲಿ ಹಾರಿದ ಮೊದಲ ಗಗನಯಾತ್ರಿಗಳಾದ ಸುನೀತಾ ಮತ್ತು ಬುಚ್ ಅವರನ್ನು ಸ್ವಾಗತಿಸಿದರು ಎಂಬ ಮಾಹಿತಿ ಇದರಲ್ಲಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಒಂದು ರೀತಿಯ ದೊಡ್ಡ ಬಾಹ್ಯಾಕಾಶ ನೌಕೆ ಆಗಿದೆ. ಇದು ಸುಮಾರು 403 ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಸುತ್ತ ಸುತ್ತುತ್ತಲೇ ಇರುತ್ತದೆ. ಈ ಸಮಯದಲ್ಲಿ, ಗಗನಯಾತ್ರಿಗಳು ಸಹ ಅದರಲ್ಲಿ ಇರುತ್ತಾರೆ. ಇದು ವಿಜ್ಞಾನ ಪ್ರಯೋಗಾಲಯವೂ ಆಗಿದ್ದು, ಗಗನಯಾತ್ರಿಗಳು ಅಲ್ಲಿಯೇ ಉಳಿದುಕೊಂಡು ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸುತ್ತಾರೆ.

ಇದು ವಿಲಿಯಮ್ಸ್ ಅವರ ಮೂರನೇ ಬಾಹ್ಯಾಕಾಶ ಪ್ರವಾಸವಾಗಿತ್ತು ಎಂಬುದು ಗಮನಾರ್ಹ. ಅವರು ಮತ್ತು ಅವರ ಸಿಬ್ಬಂದಿ ಬುಚ್ ವಿಲ್ಮೋರ್ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಎಂಟು ದಿನಗಳ ಜಂಟಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್ ಗೆ ಹೋದರು, ಆದರೆ ಕೆಲವು ತಾಂತ್ರಿಕ ದೋಷದಿಂದಾಗಿ, ಅವರು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡು ಸುಮಾರು ಒಂಬತ್ತು ತಿಂಗಳ ನಂತರ ಭೂಮಿಗೆ ಮರಳಿದರು.

ವಿಲಿಯಮ್ಸ್ ಭೂಮಿಗೆ ಹಿಂದಿರುಗಿದ ವಿಡಿಯೋವನ್ನು ನಾಸಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಿತು. ಫ್ಲೋರಿಡಾ ಕರಾವಳಿಯಲ್ಲಿ ಡ್ರ್ಯಾಗನ್ ಕ್ಯಾಪ್ಸುಲ್ ಯಶಸ್ವಿಯಾಗಿ ಇಳಿಯುವುದನ್ನು ಇಲ್ಲಿ ಕಾಣಬಹುದು. ಸುನೀತಾ ವಿಲಿಯಮ್ಸ್ ಅವರನ್ನು ಈ ವಿಡಿಯೋದಲ್ಲಿ 2 ಗಂಟೆ 8 ನಿಮಿಷಗಳಲ್ಲಿ ಕಾಣಬಹುದು.

ಇದರರ್ಥ ಜೂನ್ 2024 ರಲ್ಲಿ ಸುನೀತಾ ವಿಲಿಯಮ್ಸ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಂತರದ ವಿಡಿಯೋ ಈಗ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ