ಬಿಗಿಯಾದ ಜೀನ್ಸ್​ ಧರಿಸಿ ಬಂದ ಸಂಸದೆಯನ್ನು ಸಂಸತ್ತಿನಿಂದ ಹೊರಗೆ ಕಳಿಸಿದ ಸ್ಪೀಕರ್​; ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ  

ಕಂಡೆಸ್ಟೆರ್​ ಸಿಚ್ವಾಲೆ ಪ್ಯಾಂಟ್​-ಶರ್ಟ್​ ಹಾಕಿ ಬಂದಿದ್ದನ್ನು ನೋಡಿದ ಇನ್ನೊಬ್ಬ ಸಂಸದ ಹುಸೇನ್​ ಅಮರ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಗಿಯಾದ ಜೀನ್ಸ್​ ಧರಿಸಿ ಬಂದ ಸಂಸದೆಯನ್ನು ಸಂಸತ್ತಿನಿಂದ ಹೊರಗೆ ಕಳಿಸಿದ ಸ್ಪೀಕರ್​; ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ  
ಸಂಸತ್ತಿನಿಂದ ಹೊರಹೋಗುತ್ತಿರುವ ಸಂಸದೆ
Updated By: Lakshmi Hegde

Updated on: Jun 03, 2021 | 2:44 PM

ಪೂರ್ವ ಆಫ್ರಿಕಾದ ಟಾಂಜಾನಿಯಾ ದೇಶದ ಸಂಸತ್ತಿಗೆ ಬಿಗಿಯಾದ ಪ್ಯಾಂಟ್​-ಶರ್ಟ್​ ಧರಿಸಿ ಬಂದ ಸಂಸದೆಯನ್ನು ಹೊರಗೆ ಕಳಿಸಿದ ಸ್ಪೀಕರ್​ ವಿರುದ್ಧ ಮಹಿಳಾ ಜನಪ್ರತಿನಿಧಿಗಳು ತಿರುಗಿಬಿದ್ದಿದ್ದಾರೆ. ಸ್ಪೀಕರ್​ ಕೂಡಲೇ ಸಂಸದೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸದೆ ಕಂಡೆಸ್ಟೆರ್​ ಸಿಚ್ವಾಲೆ ಅವರು ಕಪ್ಪು ಬಣ್ಣದ ಜೀನ್ಸ್​ ಪ್ಯಾಂಟ್​ ಮತ್ತು ಹಳದಿ ಬಣ್ಣದ ಶಾರ್ಟ್​ ಟಾಪ್​ ಧರಿಸಿ ಸಂಸತ್ತಿಗೆ ಬಂದಿದ್ದರು. ಆದರೆ ಸ್ಪೀಕರ್​ ಅವರನ್ನು ಹೊರಗೆ ಕಳಿಸಿದ್ದು ಇದೀಗ ವಿವಾದ ಸೃಷ್ಟಿಸಿದೆ.

ಕಂಡೆಸ್ಟೆರ್​ ಸಿಚ್ವಾಲೆ ಪ್ಯಾಂಟ್​-ಶರ್ಟ್​ ಹಾಕಿ ಬಂದಿದ್ದನ್ನು ನೋಡಿದ ಇನ್ನೊಬ್ಬ ಸಂಸದ ಹುಸೇನ್​ ಅಮರ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸತ್ತು ಈ ಸಮಾಜದ ಪ್ರತಿಬಿಂಬಕವಾಗಿದೆ. ಮಹಿಳಾ ಜನಪ್ರತಿನಿಧಿಗಳು ಬಿಗಿಯಾದ ಜೀನ್ಸ್​ ಧರಿಸಿ ಇಲ್ಲಿ ಬರುವುದನ್ನು ನಿಷೇಧಿಸಲಾಗಿದೆ. ಆ ನಿಯಮವನ್ನು ಕಂಡೆಸ್ಟೆರ್​ ಸಿಚ್ವಾಲೆ ಉಲ್ಲಂಘಿಸಿದ್ದಾರೆ ಎಂದು ಹುಸೇನ್​ ಅಮರ್​ ಹೇಳಿದ್ದರು. ಅದಾದ ಬಳಿಕ ಸ್ಪೀಕರ್​ ಜಾಬ್​ ಎನ್​ಡುಗೈ ಆ ಸಂಸದೆಯನ್ನು ಹೊರಕಳಿಸಿದ್ದಾರೆ. ‘ನೀವು ಮೊದಲು ಸಂಸತ್ತಿನಿಂದ ಹೊರ ಹೋಗಿ, ಬೇರೆ ಉಡುಪು ಧರಿಸಿ ಬನ್ನಿ’ ಎಂದು ಹೇಳಿ ಕಳಿಸಿದ್ದಾರೆ.

ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾಬ್​ ಎನ್​ಡುಗಾಯ್​, ಮಹಿಳಾ ಪ್ರತಿನಿಧಿಗಳ ಉಡುಪಿನ ಬಗ್ಗೆ ದೂರು ಕೇಳುತ್ತಿರುವುದು ಇದೇ ಮೊದಲಲ್ಲ. ಇನ್ನು ಮುಂದೆ ಇಂಥ ಉಡುಪು ಧರಿಸಿ ಬರುವವರನ್ನು ಒಳಗೆ ಬಿಡಬೇಡಿ ಎಂದು ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಆದರೆ ಮಹಿಳಾ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಕೂಡಲೇ ಸಂಸದೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

Published On - 2:35 pm, Thu, 3 June 21