ಅರ್ಜೆಂಟೀನಾ ವೈಮಾನಿಕ ಪ್ರದರ್ಶನದಲ್ಲಿ ಫೈಟರ್ ಜೆಟ್ ಪತನ: ಇಬ್ಬರು ಪೈಲಟ್​​ಗಳು ಸಾವು

|

Updated on: Nov 16, 2023 | 4:11 PM

ಸೋವಿಯತ್ ಯುಗದ L29 ಡಾಲ್ಫಿನ್ ಮಿಲಿಟರಿ ತರಬೇತಿ ಜೆಟ್ ವಿಮಾನವು ತನ್ನ ಏರೋಬ್ಯಾಟಿಕ್ಸ್‌ನೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಕ್ಷಣಗಳ ನಂತರ ಪತನಗೊಂಡಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಅಪಘಾತವು ಜನನಿಬಿಡ ರಸ್ತೆಯ ಸಮೀಪದಲ್ಲಿ ಸಂಭವಿಸಿದೆ.

ಅರ್ಜೆಂಟೀನಾ ವೈಮಾನಿಕ ಪ್ರದರ್ಶನದಲ್ಲಿ ಫೈಟರ್ ಜೆಟ್ ಪತನ: ಇಬ್ಬರು ಪೈಲಟ್​​ಗಳು ಸಾವು
ಫೈಟರ್ ಜೆಟ್ ಪತನ
Follow us on

ಬ್ಯೂನಸ್ ಐರಿಸ್ ನವೆಂಬರ್ 16: ಅರ್ಜೆಂಟೀನಾದಲ್ಲಿ (Argentina) ಏರ್ ಶೋ ನಡೆಯುತ್ತಿದ್ದ ವೇಳೆ ಫೈಟರ್ ಜೆಟ್ (Fighter Jet) ಪತನಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವಿಗೀಡಾಗಿದ್ದಾರೆ. ಅರ್ಜೆಂಟೀನಾದ ಸಾಂಟಾ ಫೆ ಪ್ರಾಂತ್ಯದ ವಿಲ್ಲಾ ಕೆನಾಸ್‌ನಲ್ಲಿ ವೈಮಾನಿಕ ಪ್ರದರ್ಶನದ ವೇಳೆ ಅಪಘಾತ ಸಂಭವಿಸಿದೆ ಎಂದು ಸ್ಪ್ಯಾನಿಷ್ ಮಾಧ್ಯಮ ವರದಿ ಮಾಡಿದೆ. ಫೈಟರ್ ಜೆಟ್ ಅನ್ನು ನಿರ್ವಹಿಸುತ್ತಿದ್ದ ಪೈಲಟ್‌ಗಳಾದ ಗ್ಯಾಸ್ಟನ್ ವನೂಚಿ ಮತ್ತು ನಿಕೋಲಸ್ ಸ್ಕೇರ್ಸ್ ರಕ್ಷಣಾ ತಂಡವು ಘಟನಾ ಸ್ಥಳಕ್ಕೆ ತಲುಪುವ ಮೊದಲೇ ಸಾವಿಗೀಡಾಗಿದ್ದಾರೆ. ಪತನಗೊಳ್ಳುವ ಮುನ್ನ ಬಾನಂಗಲ್‌ನಲ್ಲಿ ನಡೆದ ಏರ್ ಶೋನ ಭಾಗವಾಗಿ ಜೆಟ್ ವೈಮಾನಿಕ ಸಾಹಸಗಳನ್ನು ಪ್ರದರ್ಶಿಸುತ್ತಿತ್ತು.

ಸೋವಿಯತ್ ಯುಗದ L29 ಡಾಲ್ಫಿನ್ ಮಿಲಿಟರಿ ತರಬೇತಿ ಜೆಟ್ ವಿಮಾನವು ತನ್ನ ಏರೋಬ್ಯಾಟಿಕ್ಸ್‌ನೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಕ್ಷಣಗಳ ನಂತರ ಪತನಗೊಂಡಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಅಪಘಾತವು ಜನನಿಬಿಡ ರಸ್ತೆಯ ಸಮೀಪದಲ್ಲಿ ಸಂಭವಿಸಿದೆ.

ವಿಲ್ಲಾ ಕ್ಯಾನಸ್‌ನ ಅಗ್ನಿಶಾಮಕ ಮುಖ್ಯಸ್ಥ ಹೊರಾಸಿಯೊ ಪೆರೇರಾ, ಏರ್ ಶೋ ವೀಕ್ಷಿಸಲು ಸಾರ್ವಜನಿಕರು ನೆರೆದಿದ್ದ ಸ್ಥಳದಿಂದ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಹೇಳಿದ್ದಾರೆ. ರಷ್ಯಾದ ಮಾಡೆಲ್ ಎಂದು ವರದಿಯಾಗಿರುವ ವಿಮಾನವು ತಿರುವು ತೆಗೆದುಕೊಂಡ ನಂತರ ಪತನವಾಗಿದೆ.

ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಭೀಕರ ಹಣದುಬ್ಬರ; ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ

ವಿಲ್ಲಾ ಕ್ಯಾನಸ್‌ನ ಮೇಯರ್ ನಾರ್ಬರ್ಟೊ ಗಿಜ್ಜಿ ವಿಮಾನ ಅಪಘಾತ ಬಗ್ಗೆ ಆಶ್ಚರ್ಯ ಮತ್ತು ಕಳವಳ ವ್ಯಕ್ತಪಡಿಸಿದರು. ಏರ್ ಶೋನ ಹಿಂದಿನ ಸಂಘಟನಾ ಸಂಸ್ಥೆಯಾದ ಅರ್ಜೆಂಟೀನಾದ ಏರ್ ಕ್ಲಬ್, ದುರಂತ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪೈಲಟ್‌ಗಳಿಗೆ ಸಂತಾಪ ಸೂಚಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Thu, 16 November 23