ಚೀನಾದ ಕಲ್ಲಿದ್ದಲು ಕಂಪನಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ, 11 ಸಾವು, 51 ಮಂದಿಗೆ ಗಾಯ
ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಟ್ಟಡವೊಂದರಲ್ಲಿ ಇಂದು (ನ.16) ಬೆಂಕಿ ಕಾಣಿಸಿಕೊಂಡು ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು 51 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾದ ಮಾಧ್ಯಮಗಳು ಹೇಳಿದೆ. ಶಾಂಕ್ಸಿ ಪ್ರಾಂತ್ಯದ ಲುಲಿಯಾಂಗ್ ನಗರದ ಲಿಶಿ ಜಿಲ್ಲೆಯಲ್ಲಿರುವ ಯೋಂಗ್ಜು ಕಲ್ಲಿದ್ದಲು ಕಂಪನಿಗೆ ಸೇರಿದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಳಿಗ್ಗೆ 6:50 ರ ಸುಮಾರಿಗೆ (ಬುಧವಾರ 2250 GMT) ಬೆಂಕಿ ಕಾಣಿಸಿಕೊಂಡಿದೆ.
ಉತ್ತರ ಚೀನಾದ (China) ಶಾಂಕ್ಸಿ ಪ್ರಾಂತ್ಯದ ಕಟ್ಟಡವೊಂದರಲ್ಲಿ ಇಂದು (ನ.16) ಬೆಂಕಿ ಕಾಣಿಸಿಕೊಂಡು ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು 51 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾದ ಮಾಧ್ಯಮಗಳು ಹೇಳಿದೆ. ಶಾಂಕ್ಸಿ ಪ್ರಾಂತ್ಯದ ಲುಲಿಯಾಂಗ್ ನಗರದ ಲಿಶಿ ಜಿಲ್ಲೆಯಲ್ಲಿರುವ ಯೋಂಗ್ಜು ಕಲ್ಲಿದ್ದಲು ಕಂಪನಿಗೆ ಸೇರಿದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಳಿಗ್ಗೆ 6:50 ರ ಸುಮಾರಿಗೆ (ಬುಧವಾರ 2250 GMT) ಬೆಂಕಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ ಇಲ್ಲಿಯವರೆಗೆ ಹನ್ನೊಂದು ಜನ ಸಾವನ್ನಪ್ಪಿದ್ದಾರೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ 63 ಜನರನ್ನು ಕಟ್ಟಡದಿಂದ ಹೊರಗೆ ಕರೆದುಕೊಂಡು ಬರಲಾಗಿದೆ. 51 ಜನರಿಗೆ ಗಾಯಗಳಾಗಿದ್ದು, ಅವರನ್ನು ಲುಲಿಯಾಂಗ್ ಫಸ್ಟ್ ಪೀಪಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಘಟನೆಯ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಚೀನಾದಲ್ಲಿ ಜಿಮ್‌ನ ಮೇಲ್ಛಾವಣಿ ಕುಸಿತ, 10 ಮಂದಿ ಸಾವು
ಇನ್ನು ಈ ಘಟನೆಯ ವಿಡಿಯೋವನ್ನು ಚೀನಾದ Weibo ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ದೊಡ್ಡ ಮಟ್ಟದ ಬೆಂಕಿ ಕಟ್ಟಡದಲ್ಲಿ ಕಾಣಿಸಿಕೊಂಡಿದೆ. ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮುವುದನ್ನು ಇದರಲ್ಲಿ ಕಾಣಬಹುದು. ಘಟನೆ ನಡೆದ ಸ್ಥಳಕ್ಕೆ ಚೀನಾ ಅಗ್ನಿಶಾಮಕ ದಳ ಧಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿಸಿದೆ.
ಅಸುರಕ್ಷತಾ ಮಾನದಂಡಗಳು ಮತ್ತು ಕಳಪೆ ಕಾಮಗಾರಿಯಿಂದ ಚೀನಾದಲ್ಲಿ ಕೈಗಾರಿಕಾ ಅಪಘಾತಗಳು ಸಾಮಾನ್ಯವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಜುಲೈನಲ್ಲಿ, ಚೀನಾದ ಈಶಾನ್ಯ ಭಾಗದ ಶಾಲೆಯ ಜಿಮ್‌ನ ಮೇಲ್ಛಾವಣಿ ಕುಸಿದು ಹನ್ನೊಂದು ಜನರು ಸಾವನ್ನಪ್ಪಿದರು. ಒಂದು ತಿಂಗಳ ಹಿಂದೆ, ವಾಯುವ್ಯ ಚೀನಾದಲ್ಲಿ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿ 31 ಜನರು ಸಾವನ್ನಪ್ಪಿದರು. ಹೀಗೆ ಅನೇಕ ಘಟನೆಗಳು ಚೀನಾದಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ