ಗಾಜಾದ ಅಲ್​ ಶಿಫಾ ಆಸ್ಪತ್ರೆಯಲ್ಲಿ ಸುರಂಗ ಪತ್ತೆ, ಒತ್ತೆಯಾಳುಗಳು ಅಲ್ಲೇ ಇರಬಹುದು: ಇಸ್ರೇಲ್

ಗಾಜಾದ ಅಲ್​ ಶಿಫಾ ಆಸ್ಪತ್ರೆಯಲ್ಲಿ ಹಮಾಸ್​ನ ಸುರಂಗ ಮಾರ್ಗವನ್ನು ಇಸ್ರೇಲ್ ಸೈನಿಕರು ಪತ್ತೆಹಚ್ಚಿದ್ದಾರೆ. ಆ ಸುರಂಗದಲ್ಲಿ ಒತ್ತೆಯಾಳುಗಳನ್ನು ಇರಿಸಿರಬಹುದು ಎಂದು ಅಂದಾಜಿಸಿದೆ, ಜತೆಗೆ ಸಾಕಷ್ಟು ಸಂಖ್ಯೆಯ ಬಾಂಬ್​, ಶಸ್ತ್ರಾಸ್ತ್ರಗಳು ಕೂಡ ಪತ್ತೆಯಾಗಿವೆ. ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದ ಹೊರವಲಯದಲ್ಲಿ ಸುರಂಗ ಪ್ರವೇಶವನ್ನು ಪತ್ತೆ ಮಾಡಿರುವುದಾಗಿ ಇಸ್ರೇಲಿ ಮಿಲಿಟರಿ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಗಾಜಾದ ಅಲ್​ ಶಿಫಾ ಆಸ್ಪತ್ರೆಯಲ್ಲಿ ಸುರಂಗ ಪತ್ತೆ, ಒತ್ತೆಯಾಳುಗಳು ಅಲ್ಲೇ ಇರಬಹುದು: ಇಸ್ರೇಲ್
ಆಸ್ಪತ್ರೆ, ಶಸ್ತ್ರಾಸ್ತ್ರಗಳುImage Credit source: NDTV
Follow us
ನಯನಾ ರಾಜೀವ್
|

Updated on: Nov 17, 2023 | 10:21 AM

ಗಾಜಾ(Gaza)ದ ಅಲ್​ ಶಿಫಾ ಆಸ್ಪತ್ರೆಯಲ್ಲಿ ಹಮಾಸ್(Hamas)​ನ ಸುರಂಗ ಮಾರ್ಗವನ್ನು ಇಸ್ರೇಲ್ ಸೈನಿಕರು ಪತ್ತೆಹಚ್ಚಿದ್ದಾರೆ. ಆ ಸುರಂಗದಲ್ಲಿ ಒತ್ತೆಯಾಳುಗಳನ್ನು ಇರಿಸಿರಬಹುದು ಎಂದು ಅಂದಾಜಿಸಿದೆ, ಜತೆಗೆ ಸಾಕಷ್ಟು ಸಂಖ್ಯೆಯ ಬಾಂಬ್​, ಶಸ್ತ್ರಾಸ್ತ್ರಗಳು ಕೂಡ ಪತ್ತೆಯಾಗಿವೆ. ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದ ಹೊರವಲಯದಲ್ಲಿ ಸುರಂಗ ಪ್ರವೇಶವನ್ನು ಪತ್ತೆ ಮಾಡಿರುವುದಾಗಿ ಇಸ್ರೇಲಿ ಮಿಲಿಟರಿ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಮಿಲಿಟರಿ ಉದ್ದೇಶಗಳಿಗಾಗಿ ಹಮಾಸ್ ಉಗ್ರರು ಈ ಅಲ್​ ಶಿಫಾ ಆಸ್ಪತ್ರೆಯನ್ನು ಬಳಕೆ ಮಾಡುತ್ತಿದ್ದರು. ಹಮಾಸ್ ಹೋರಾಟಗಾರರು ಶಿಫಾ ಆಸ್ಪತ್ರೆಯೊಳಗೆ ಅಡಗಿಕೊಂಡು ಅಲ್ಲಿನ ರೋಗಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಇಸ್ರೇಲ್ ಶಂಕಿಸಿದೆ.

ಇದರೊಂದಿಗೆ ಹಮಾಸ್ ಆಸ್ಪತ್ರೆಯನ್ನು ಕಮಾಂಡ್ ಸೆಂಟರ್ ಆಗಿ ಪರಿವರ್ತಿಸಿದೆ ಮತ್ತು ತನ್ನ ಭಯೋತ್ಪಾದಕರನ್ನು ರಕ್ಷಿಸಲು ರೋಗಿಗಳು, ಸಿಬ್ಬಂದಿ ಮತ್ತು ನಾಗರಿಕರನ್ನು ಬಳಸುತ್ತಿದೆ ಎಂದು ಇಸ್ರೇಲ್ ಹೇಳುತ್ತದೆ.

ಹಾಗೆಯೇ ಒತ್ತೆಯಾಳುಗಳನ್ನು ಅದೇ ಆಸ್ಪತ್ರೆಯಲ್ಲೇ ಇರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ. ಅಕ್ಟೋಬರ್ 7 ರಂದು ಹಮಾಶ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು, ಘಟನೆಯಲ್ಲಿ 1,400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ: ಗಾಜಾ ಪ್ರದೇಶವನ್ನು ಖಾಲಿ ಮಾಡಲು ಇಸ್ರೇಲ್​ ಕೊಟ್ಟಿದ್ದ ಗಡುವು ಮುಗಿಯುತ್ತಿದ್ದಂತೆ 10 ಲಕ್ಷ ಮಂದಿ ಪಲಾಯನ

ಅದಕ್ಕೆ ಪ್ರತಿಯಾಗಿ ಇಸ್ರೇಲ್ ಹಮಾಸ್​ನನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ದಾಳಿ ನಡೆಸುತ್ತದೆ. ಈ ದಾಳಿಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದಾಳಿ ಆರಂಭಿಸುವುದಕ್ಕೂ ಮುನ್ನ ಅಲ್ಲಿನ ಜನತೆಗೆ ಗಾಜಾ ಬಿಟ್ಟು ಹೊರ ನಡೆಯುವಂತೆ ಇಸ್ರೇಲ್ ಸೂಚಿಸಿತ್ತು, ಹೇಳಿದ ಮೇಲೆಯೂ ಗಾಜಾ ಬಿಟ್ಟು ಹೋಗದವರನ್ನು ನಾವು ಭಯೋತ್ಪಾದಕರು ಎಂದು ಪರಿಗಣಿಸಿ, ದಾಳಿ ಮುಂದುವರೆಸುತ್ತೇವೆ ಎಂದು ಇಸ್ರೇಲ್ ಹೇಳಿತ್ತು.

ಯುದ್ಧವನ್ನು ನಾವು ಪ್ರಾರಂಭಿಸಿಲ್ಲ, ಆದರೆ ಅಂತ್ಯ ನಮ್ಮಿಂದಲೇ ಆಗಲಿದೆ, ಹಮಾಸ್​ನನ್ನು ಹತ್ತಿಕ್ಕುವವರೆಗೂ ಯುದ್ಧವನ್ನು ನಿಲ್ಲಿಸುವ ಮಾತಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ