ಅರ್ಜೆಂಟೀನಾದಲ್ಲಿ ಭೀಕರ ಹಣದುಬ್ಬರ; ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ

Argentina Inflation: ಅಭಿವೃದ್ಧಿಶೀಲ ದೇಶವೆನಿಸಿದ ಅರ್ಜೆಂಟೀನಾದಲ್ಲಿ ಈಗ ಶೇ. 40ರಷ್ಟು ಜನರು ಬಡತನಕ್ಕೆ ಸಿಲುಕಿದ್ದಾರೆ. ಅಲ್ಲೀಗ ಜವಳಿ ಉದ್ಯಮವೇ ಸ್ಥಗಿತಗೊಂಡಂತಿದೆ. ಹೊಸ ಉಡುಪುಗಳ ಮಾರಾಟ ಬಹಳ ಕಡಿಮೆ ಆಗಿದೆ. ಸೆಕೆಂಡ್ ಹ್ಯಾಂಡ್ ಉಡುಪುಗಳ ಮಾರುಕಟ್ಟೆ ಗಿಜಿಗಿಜಿಗುಡುತ್ತಿದೆ. ಜನರು ತಮ್ಮ ಹಳೆಯ ಉಡುಪುಗಳನ್ನು, ಅದರಲ್ಲೂ ಜೀನ್ಸ್ ಬಟ್ಟೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ.

ಅರ್ಜೆಂಟೀನಾದಲ್ಲಿ ಭೀಕರ ಹಣದುಬ್ಬರ; ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ
ಅರ್ಜೆಂಟೀನಾ
Follow us
|

Updated on: Nov 14, 2023 | 4:27 PM

ಬ್ಯೂನಸ್ ಐರೆಸ್, ನವೆಂಬರ್ 14: ದಕ್ಷಿಣ ಅಮೆರಿಕ ಖಂಡದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಅರ್ಜೆಂಟೀನಾ ಈಗ ಹಣದುಬ್ಬರದ (Inflation in Argentina) ಸುಳಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಗೊಳಿಸುತ್ತಿದೆ. ಸೆಪ್ಟೆಂಬರ್​ನಲ್ಲಿ ಅರ್ಜೆಂಟೀನಾದ ಹಣದುಬ್ಬರ ಬರೋಬ್ಬರಿ ಶೇ. 138ಕ್ಕೂ ಹೆಚ್ಚಿತ್ತು. ಈ ಅಕ್ಟೋಬರ್​ನಲ್ಲಿ ಶೇ. 143ರಷ್ಟಾಗಿದೆ. ಇಂಥ ಸ್ಥಿತಿಯಲ್ಲಿ ಅರ್ಜೆಂಟೀನಾದ ಜನರು ಸಾಮಾನ್ಯ ಜೀವನ ನಡೆಸುವುದೇ ದುಬಾರಿಯಾಗಿದೆ. ತಮ್ಮ ಹಳೆಯ ಬಟ್ಟೆ ಮಾರಿ ಜೀವನ ನಡೆಸಬೇಕಾದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ.

ಅಭಿವೃದ್ಧಿಶೀಲ ದೇಶವೆನಿಸಿದ ಅರ್ಜೆಂಟೀನಾದಲ್ಲಿ ಈಗ ಶೇ. 40ರಷ್ಟು ಜನರು ಬಡತನಕ್ಕೆ ಸಿಲುಕಿದ್ದಾರೆ. ಅಲ್ಲೀಗ ಜವಳಿ ಉದ್ಯಮವೇ ಸ್ಥಗಿತಗೊಂಡಂತಿದೆ. ಹೊಸ ಉಡುಪುಗಳ ಮಾರಾಟ ಬಹಳ ಕಡಿಮೆ ಆಗಿದೆ. ಸೆಕೆಂಡ್ ಹ್ಯಾಂಡ್ ಉಡುಪುಗಳ ಮಾರುಕಟ್ಟೆ ಗಿಜಿಗಿಜಿಗುಡುತ್ತಿದೆ. ಜನರು ತಮ್ಮ ಹಳೆಯ ಉಡುಪುಗಳನ್ನು, ಅದರಲ್ಲೂ ಜೀನ್ಸ್ ಬಟ್ಟೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ. ಹೊಸ ಬಟ್ಟೆ ಖರೀದಿಸಲು ಸಾಧ್ಯವಿಲ್ಲದ ಜನರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಬಂದು ಹಳೆಯ ಉಡುಪುಗಳನ್ನು ಪಡೆದು ಹೋಗುತ್ತಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತಿವೆ. ಅರ್ಜೆಂಟೀನಾ ಮೊದಲ ದಕ್ಷಿಣ ಅಮೆರಿಕನ್ ದೇಶಗಳ ಜನರಿಗೆ ಜೀನ್ಸ್ ಎನ್ನುವುದು ಬಹಳ ಅಚ್ಚುಮೆಚ್ಚಿನ ಉಡುಪು.

ಇದನ್ನೂ ಓದಿ: Rule Changes: ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್​ನಲ್ಲಿ 7 ಬದಲಾವಣೆಗಳು; ಯಾವ್ಯಾವುವು, ಇಲ್ಲಿದೆ ವಿವರ

ಅರ್ಜೆಂಟೀನಾದಲ್ಲಿ ಯಾಕಿಷ್ಟು ಬೆಲೆ ಏರಿಕೆ?

ಅರ್ಜೆಂಟೀನಾ ಕೆಲವಾರು ವರ್ಷಗಳಿಂದಲೂ ಬೆಲೆ ಏರಿಕೆಯಿಂದ ಬಸವಳಿದಿದೆ. ಆರ್ಥಿಕ ತಜ್ಞರ ಪ್ರಕಾರ ಅಲ್ಲಿನ ಸರ್ಕಾರ ಅವಶ್ಯಕತೆಗಿಂತ ಹೆಚ್ಚು ನೋಟುಗಳನ್ನು ಮುದ್ರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪಿಸೋ ಕರೆನ್ಸಿ ಮೌಲ್ಯ ಗಣನೀಯವಾಗಿ ಕುಸಿಯುತ್ತಿದೆ. ಕಳೆದ 10 ವರ್ಷಗಳಿಂದ ಅರ್ಜೆಂಟೀನಾ ಕರೆನ್ಸಿ ಮಹಾಕುಸಿತ ಅನುಭವಿಸಿದೆ. 2013ರಲ್ಲಿ ಒಂದು ಅಮೆರಿಕನ್ ಡಾಲರ್​ಗೆ 6 ಪೆಸೋ ಬೆಲೆ ಇತ್ತು. ಈಗ ಒಂದು ಡಾಲರ್​ಗೆ ಬರೋಬ್ಬರಿ 350 ಪೆಸೋ ಆಗಿದೆ. ಅಂದರೆ 10 ವರ್ಷದಲ್ಲಿ ಯಾವ ಪರಿ ಕುಸಿತ ಆಗಿರಬಹುದು ಊಹಿಸಿ.

ಅತಿಹೆಚ್ಚು ಹಣದುಬ್ಬರ ಇರುವ 5 ದೇಶಗಳು

ವೆನುಜುವೆಲಾ ಮತ್ತು ಜಿಂಬಾಬ್ವೆ ಬಿಟ್ಟರೆ ಅತಿಹೆಚ್ಚು ಹಣದುಬ್ಬರ ಇರುವುದು ಅರ್ಜೆಂಟೀನಾದಲ್ಲೇ. ಇಲ್ಲಿದೆ ಟಾಪ್-5 ಹಣದುಬ್ಬರ ದೇಶಗಳ ಪಟ್ಟಿ

  1. ವೆನಿಜುವೆಲಾ: ಶೇ. 400ಕ್ಕೂ ಹೆಚ್ಚು
  2. ಜಿಂಬಾಬ್ವೆ: ಶೇ. 172
  3. ಅರ್ಜೆಂಟೀನಾ: ಶೇ. 143
  4. ಸೂಡಾನ್: ಶೇ. 71.6
  5. ಟರ್ಕಿ: ಶೇ 47.8

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ