Children’s Day: ಮಕ್ಕಳ ದಿನಾಚರಣೆಯಂದು ಜೀವನಕ್ಕೆ ಅಗತ್ಯವಾದ ಹಣಕಾಸು ವಿಚಾರಗಳು

Financial Advice: ಮಕ್ಕಳಿಗೆ ಹಣದ ಬೆಲೆ ಗೊತ್ತಾಗಬೇಕು. ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಹಣಕಾಸು ಶಿಕ್ಷಣವೂ ಮುಖ್ಯವೆಂಬುದನ್ನು ಪೋಷಕರು ಕಂಡುಕೊಳ್ಳಬೇಕು. ಈ ಬಗ್ಗೆ ಮಕ್ಕಳ ದಿನಾಚರಣೆಯಂದು ಅರಿವು ಮೂಡಿಸಲು ಒಂದು ಪುಟ್ಟ ಪ್ರಯತ್ನ ಇದು. ಮಕ್ಕಳ ಹಣಕಾಸು ಭದ್ರತೆಗೆ ಅಡಿಪಾಯ ಹಾಕುವ ಕೆಲ ಉಪಾಯಗಳು ಇಲ್ಲಿವೆ...

Children's Day: ಮಕ್ಕಳ ದಿನಾಚರಣೆಯಂದು ಜೀವನಕ್ಕೆ ಅಗತ್ಯವಾದ ಹಣಕಾಸು ವಿಚಾರಗಳು
ಮಕ್ಕಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 14, 2023 | 1:42 PM

ಇಂದು ನವೆಂಬರ್ 14, ಮಕ್ಕಳ ದಿನಾಚರಣೆ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂದು ಹೇಳಲಾಗುತ್ತದೆ. ಇವತ್ತು ಪ್ರಬಲ ಸಮಾಜ ನಿರ್ಮಾಣವಾಗಬೇಕಾದರೆ ಉದ್ದಿಮೆಗಳು (business) ಪ್ರಬಲಗೊಳ್ಳಬೇಕು. ಹೆಚ್ಚೆಚ್ಚು ಜನರು ಉದ್ದಿಮೆದಾರರಾಗಿ ಬೆಳಗಬೇಕು. ಇದಾಗಬೇಕಾದರೆ ಚಿಕ್ಕ ವಯಸ್ಸಿನಿಂದಲೇ ಹಣಕಾಸು ಅರಿವು ಮೂಡಬೇಕು. ಮಕ್ಕಳಿಗೆ ಹಣದ ಬೆಲೆ ಗೊತ್ತಾಗಬೇಕು. ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಹಣಕಾಸು ಶಿಕ್ಷಣವೂ (financial awareness) ಮುಖ್ಯವೆಂಬುದನ್ನು ಪೋಷಕರು ಕಂಡುಕೊಳ್ಳಬೇಕು. ಈ ಬಗ್ಗೆ ಮಕ್ಕಳ ದಿನಾಚರಣೆಯಂದು (Children’s Day) ಅರಿವು ಮೂಡಿಸಲು ಒಂದು ಪುಟ್ಟ ಪ್ರಯತ್ನ ಇದು. ಮಕ್ಕಳ ಹಣಕಾಸು ಭದ್ರತೆಗೆ ಅಡಿಪಾಯ ಹಾಕುವ ಕೆಲ ಉಪಾಯಗಳು ಇಲ್ಲಿವೆ…

ಮಕ್ಕಳಿಗೆ ಹಣಕಾಸು ಶಿಕ್ಷಣ

ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಉಳಿತಾಯ, ಬಜೆಟ್, ಹೂಡಿಕೆ ಇತ್ಯಾದಿ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಮಗು ತನಗೆ ಸಿಗುವ ಸೀಮಿತ ಹಣದಲ್ಲಿ ಆಟಿಕೆ ಇತ್ಯಾದಿಯನ್ನು ತಾನೇ ಖರೀದಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಪೋಷಕರು ಉತ್ತೇಜನ ನೀಡಬೇಕು. ಆಗ ಮಗುವಿಗೆ ಹಣದ ಬೆಲೆ ಗೊತ್ತಾಗುತ್ತದೆ.

ಮಕ್ಕಳಿಗೆ ಉಳಿತಾಯ ಖಾತೆ

ಮಕ್ಕಳಿಗೆ ಉಳಿತಾಯ ಮನೋಭಾವ ಬೆಳೆಯಲು ವಿವಿಧ ಮಾರ್ಗೋಪಾಯಗಳಿವೆ. ಅದರಲ್ಲಿ ಬ್ಯಾಂಕು ಎಫ್​ಡಿ, ಆರ್​ಡಿ ಇತ್ಯಾದಿಗಳೂ ಒಳಗೊಳ್ಳುತ್ತವೆ. ಹೈಸ್ಕೂಲ್, ಕಾಲೇಜು ಮೆಟ್ಟಿಲು ಹತ್ತಿದ ಬಳಿಕ ಮ್ಯುಚುವಲ್ ಫಂಡ್ ಇತ್ಯಾದಿಯನ್ನು ಪರಿಚಯಿಸಬಹುದು.

ಇದನ್ನೂ ಓದಿ: ನಿಮ್ಮಲ್ಲಿ 10 ಲಕ್ಷ ರೂ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? ಇಲ್ಲಿವೆ ನಾಲ್ಕು ಆಯ್ಕೆಗಳು

ಮಕ್ಕಳ ಶಿಕ್ಷಣಕ್ಕೆ ಹಣಕಾಸು ವ್ಯವಸ್ಥೆ

ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಇವತ್ತು ಶಿಕ್ಷಣ ವೆಚ್ಚ ಬಹಳ ದುಬಾರಿ. ಹೀಗಾಗಿ, ಇದಕ್ಕೆಂದೇ ಪ್ರತ್ಯೇಕ ಬಜೆಟ್ ಎತ್ತಿ ಇಡುವುದು ಅನಿವಾರ್ಯ. ಅದಕ್ಕಾಗೆಂದೇ ಎಫ್​ಡಿ, ಎಸ್​ಐಪಿ ಇತ್ಯಾದಿಯನ್ನು ನೀವು ಆರಂಭಿಸಬಹುದು. ಪಿಪಿಎಫ್ ಸ್ಕೀಮ್​ಗಳನ್ನು ಅವಲೋಕಿಸಬಹುದು. ಹೆಣ್ಮಗುವಾದರೆ ಸುಕನ್ಯಾ ಸಮೃದ್ಧಿ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ವರ್ಷಕ್ಕೊಮ್ಮೆ ಫೀಸ್ ಕಟ್ಟುವುದಾದರೆ ಆರ್​ಡಿ ತೆರೆಯಬಹುದು. ಅಥವಾ ಎಫ್​ಡಿಯನ್ನಾದರೂ ಇಡಬಹುದು.

ಉನ್ನತ ಶಿಕ್ಷಣಕ್ಕಾದರೆ ದೀರ್ಘಾವಧಿ ಹೂಡಿಕೆ ಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಮೊದಲೇ ಮ್ಯುಚುವಲ್ ಫಂಡ್ ಎಸ್​ಐಪಿ ಆರಂಭಿಸುವುದು ಉತ್ತಮ.

ಮಕ್ಕಳಿಗೆ ತಿಳಿದಿರಬೇಕು ದೀರ್ಘಾವಧಿ ಹೂಡಿಕೆಯ ಮಹತ್ವ

ಒಂದು ಹಣಕಾಸು ಯೋಜನೆ ದೀರ್ಘವಾದಷ್ಟೂ ರಿಟರ್ನ್ ಹೆಚ್ಚಿರುತ್ತದೆ. ಅದರಲ್ಲೂ ಎಸ್​ಐಪಿಯಂತಹ ಮಾಸಿಕ ಹೂಡಿಕೆ ಸ್ಕೀಮ್​ಗಳು ವರ್ಷದಿಂದ ವರ್ಷಕ್ಕೆ ಹಣ ಹೆಚ್ಚಿಸುತ್ತಾ ಹೋಗುತ್ತವೆ. ಉದಾಹರಣೆಗೆ ಶೇ. 12ರಷ್ಟು ವಾರ್ಷಿಕ ರಿಟರ್ನ್ ನೀಡುವ ಎಸ್​ಐಪಿಯನ್ನು ನೀವು ಆಯ್ದುಕೊಂಡು ತಿಂಗಳಿಗೆ 10,000 ರೂ ಹೂಡಿಕೆ ಮಾಡಿದರೆ 10 ವರ್ಷದಲ್ಲಿ ನಿಮಗೆ ಸಿಗುವ ರಿಟರ್ನ್ 23 ಲಕ್ಷಕ್ಕೂ ಹೆಚ್ಚಿರುತ್ತದೆ. ಅದೇ ನೀವು 20 ವರ್ಷ ಕಾಲ ಮುಂದುವರಿಸಿದರೆ ಹೆಚ್ಚೂಕಡಿಮೆ 1 ಕೋಟಿ ರೂ ಆಗುತ್ತದೆ. ಇದು ಪವರ್ ಆಫ್ ಕಾಂಪೌಂಡಿಂಗ್. ಮಕ್ಕಳಿಗೆ ಇದರ ಅರಿವಿರಬೇಕು. ಅವರು ಓದಿ ಕೆಲಸಕ್ಕೆ ಸೇರಿ ಸಂಪಾದನೆ ಮಾಡತೊಡಗಿದಾಗ ದೀರ್ಘಾವಧಿ ಹೂಡಿಕೆಗೆ ಪ್ಲಾನ್ ಮಾಡಲು ಸಹಾಯವಾಗುತ್ತದೆ.

ಹೂಡಿಕೆ ವಿಸ್ತಾರದ ಬಗ್ಗೆ ತಿಳಿದಿರಬೇಕು

ನಮ್ಮೆಲ್ಲಾ ಉಳಿತಾಯ ಹಣವನ್ನು ಒಂದೇ ತೆರನಾದ ಹೂಡಿಕೆಗೆ ತೊಡಗಿಸುವುದು ಉತ್ತಮವಲ್ಲ. ಉದಾಹರಣೆಗೆ, ಎಲ್ಲಾ ಹಣವನ್ನೂ ಈಕ್ವಿಟಿಗಳ ಮೇಲೆಯೇ ಹಾಕಿದರೆ ಬಹಳ ರಿಸ್ಕಿ ಆಗುತ್ತದೆ. ನಿಶ್ಚಿತ ರಿಟರ್ನ್ ಕೊಡುವ ಎಫ್​ಡಿ, ಆರ್​ಡಿ ಇತ್ಯಾದಿಗಳಿವೆ. ಶೇ. 10ಕ್ಕಿಂತಲೂ ಹೆಚ್ಚು ವೇಗದಲ್ಲಿ ಮೌಲ್ಯ ವರ್ಧಿಸುವ ಚಿನ್ನ ಇದೆ. ಸರ್ಕಾರದಿಂದ ನಡೆಸಲಾಗುವ ಪಿಪಿಎಫ್, ಎನ್​ಪಿಎಸ್ ಇತ್ಯಾದಿ ಸ್ಕೀಮ್​ಗಳಿವೆ. ಕೆಲ ಆರೋಗ್ಯ ಮತ್ತು ಜೀವ ವಿಮೆಗಳಿವೆ. ಇವೆಲ್ಲಾ ಯೋಜನೆಗಳಲ್ಲೂ ನೀವು ಹೂಡಿಕೆ ಮಾಡಿದರೆ ರಿಸ್ಕ್ ಸಾಧ್ಯತೆ ಇರುವುದಿಲ್ಲ. ನಿಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ನಿಮ್ಮ ಹೂಡಿಕೆಗಳನ್ನು ವಿಸ್ತರಿಸಬಹುದು.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ನಲ್ಲಿ ಹಣ ಹಾಕಿದರೆ ಗ್ಯಾರಂಟಿ ಲಾಭ ಬರುತ್ತದೆಂಬುದು ಭ್ರಮೆ; ಹೂಡಿಕೆಗೆ ಮುಂಚೆ ಕೆಲ ವಿಚಾರಗಳು ತಿಳಿದಿರಲಿ

ಫ್ಯಾಮಿಲಿ ಇನ್ಷೂರೆನ್ಸ್ ಮುಖ್ಯ…

ನಿಮ್ಮ ಕಚೇರಿಯಿಂದ ಇನ್ಷೂರೆನ್ಸ್ ಇರಬಹುದು. ಇದರ ಜೊತೆಗೆ ನೀವೂ ಕೂಡ ವೈಯಕ್ತಿಕವಾಗಿ ನಿಮಗೆ ಹಾಗೂ ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ಹೆಲ್ತ್ ಇನ್ಷೂರೆನ್ಸ್ ಮಾಡಿಸುವುದು ಇವತ್ತಿನ ಕಾಲಕ್ಕೆ ಬಹಳ ಅಗತ್ಯ. ಹಾಗೆಯೇ, ಜೀವ ವಿಮೆ ಕೂಡ ಬಹಳ ಮುಖ್ಯ. ಅನಿರೀಕ್ಷಿತವಾಗಿ ನೀವು ನಿಧನ ಹೊಂದಿದಲ್ಲಿ ನಿಮ್ಮ ಕುಟುಂಬಕ್ಕೆ ಹಣಕಾಸು ಭದ್ರತೆ ಸಿಗಲು ಅದು ಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Tue, 14 November 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ