
ಟೆಲ್ ಅವೀವ್, ಅಕ್ಟೋಬರ್ 1: ಫ್ಲೈದುಬೈ ವಿಮಾನವು ದುಬೈನಿಂದ ಇಸ್ರೇಲ್ಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಇಬ್ಬರು ಪೈಲಟ್‌ಗಳ ನಡುವೆ ನಡೆದ ವಾಗ್ವಾದದಲ್ಲಿ ಪೈಲಟ್ ಸ್ಮಿತ್‌ಗೆ ಮತ್ತೊಬ್ಬ ಪೈಲಟ್ ಕುತ್ತಿಗೆ, ಕೈಗೆ ಬಲವಾಗಿ ಇರಿದಿದ್ದರು. ಅದ್ಹೇಗೋ ಆತನಿಗೆ ತಿಳಿಯದಂತೆ ಸ್ಮಿತ್ ತುರ್ತು ಸಂದೇಶವನ್ನು ವಿಮಾನಯಾನ ಸಂಸ್ಥೆಗೆ ರವಾನಿಸಿದ್ದರು. ಅದಾದ ಬಳಿಕ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರು ಒಳಗೆ ಬರುವಂತೆ ಮಾಡಿ ಕೊನೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೈಲಟ್‌ಗೆ ರಕ್ತಸ್ರಾವವಾಗುತ್ತಿತ್ತು, ಆದರೆ 170 ಮಂದಿ ಪ್ರಯಾಣಿಕರ ಪೈಕಿ ಅಲ್ಲಿದ್ದಿದ್ದು ಒಬ್ಬರೇ ವೈದ್ಯ ಅದೂ ದಂತವೈದ್ಯ. ಕಾಕ್‌ಪಿಟ್ ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ್ದ ನಾಲ್ವರು ಪ್ರಯಾಣಿಕರಲ್ಲಿ ಈ ದಂತವೈದ್ಯರು ಕೂಡಾ ಇದ್ದರು.
ಧೃತಿಗೆಡದೆ ಇಸ್ರೇಲಿ ದಂತವೈದ್ಯ ಮುಸೇವ್ ಶೋಟಾ, ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಸೌದಿ ಅರೇಬಿಯಾದ ತಬೂಕ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದಾಗ ವೈದ್ಯಕೀಯ ತಂಡ ಚಿಕಿತ್ಸೆ ಮುಂದುವರೆಸಿತು.
ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಕಾಕ್‌ಪಿಟ್‌ನೊಳಗೆ ಕ್ಯಾಪ್ಟನ್ ಮತ್ತು ಸಹ-ಪೈಲಟ್ ನಡುವೆ ಗಂಭೀರ ಘರ್ಷಣೆ ನಡೆದಿದೆ. ವರದಿಗಳ ಪ್ರಕಾರ, ಓಮನ್ ಮೂಲದ ಸಹ-ಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಚ್ಚರ್ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಪ್ರಮಾಣದಲ್ಲಿ ರಕ್ತ ಕಳೆದುಕೊಂಡಿದ್ದರು. ತೀವ್ರ ಗಾಯಗಳ ನಡುವೆಯೂ ಕ್ಯಾಪ್ಟನ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಸಾಧ್ಯವಾಯಿತು.
ಮತ್ತಷ್ಟು ಓದಿ: ತಬುಕ್‌ನಲ್ಲಿ ಸಿಲುಕಿದ ಇಸ್ರೇಲಿ ಪ್ರಯಾಣಿಕರ ಏರ್‌ಲಿಫ್ಟ್‌ಗೆ ಬ್ರೇಕ್: ಮಿಲಿಟರಿ ವಿಮಾನ ಹಾರಾಟಕ್ಕೆ ಅವಕಾಶವಿಲ್ಲ ಎಂದ ಸೌದಿ ಅರೇಬಿಯಾ
ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಇತರ ಪೈಲಟ್‌ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಕಡೆಗೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ 174 ಪ್ರಯಾಣಿಕರು ಸುರಕ್ಷಿತವಾಗಿ ಉಳಿದರು. ವಿಮಾನದಲ್ಲಿ ಪ್ರಯಾಣಿಕರ ಪೈಕಿ ಇಬ್ಬರು ಪೈಲಟ್ಗಳಿದ್ದ ಕಾರಣ ಅವರೇ ವಿಮಾನವನ್ನು ಕೆಳಗಿಳಿಸಲು ನೆರವಾದರು.
ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯ ಮುಸೇವ್ ಶೋಟಾ ಗಾಯಗೊಂಡ ಪೈಲಟ್‌ಗೆ ಮೊದಲ ಚಿಕಿತ್ಸೆ ನೀಡಿದವರಲ್ಲಿ ಪ್ರಮುಖರಾಗಿದ್ದರು. ಅವರ ಪ್ರಕಾರ, ಮಚ್ಚರ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ ರಕ್ತಸ್ರಾವವನ್ನು ನಿಯಂತ್ರಿಸಲು ಅವರು ಪ್ರಯತ್ನಿಸಿದರು. ಪೈಲಟ್ ಪ್ರಜ್ಞೆಯಲ್ಲಿದ್ದು, ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದರು ಎಂದು ದಂತವೈದ್ಯರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಕ್ಯಾಪ್ಟನ್ ಮಚ್ಚರ್ ಅವರನ್ನು ತಬೂಕ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರಂಭಿಕ ಮಾಹಿತಿಯಲ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಕುತ್ತಿಗೆ ಹಾಗೂ ಕೈಯಿಂದ ತುಂಬಾ ರಕ್ತಸ್ರಾವವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ವಿಮಾನವು ತುರ್ತು ಪರಿಸ್ಥಿತಿಯಲ್ಲಿ ತಬೂಕ್‌ನಲ್ಲಿ ಇಳಿದ ಬಳಿಕ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸುತ್ತಿದ್ದಾರೆ. ದಾಳಿಯ ಉದ್ದೇಶದ ಬಗ್ಗೆ ಅಂತಿಮ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆಯಲ್ಲಿ ಕ್ಯಾಪ್ಟನ್ ಮಚ್ಚರ್ ಮಾತ್ರವಲ್ಲದೆ, ಗಾಯಗೊಂಡ ಪೈಲಟ್‌ಗೆ ಚಿಕಿತ್ಸೆ ನೀಡಿದ ದಂತವೈದ್ಯ, ಕಾಕ್‌ಪಿಟ್‌ಗೆ ತೆರಳಿ ಸಹಾಯ ಮಾಡಿದ ಪ್ರಯಾಣಿಕರು ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದ ಇತರ ಪೈಲಟ್‌ಗಳ ಪಾತ್ರವೂ ಪ್ರಮುಖವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ