ಅಪರೂಪದ ಘಟನೆ: ಮಹಿಳೆಯ ಯಕೃತ್ತಿನಲ್ಲಿ ಪತ್ತೆಯಾದ ಭ್ರೂಣ

| Updated By: Pavitra Bhat Jigalemane

Updated on: Dec 19, 2021 | 12:57 PM

ಕೆನಡಾದ 33 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗರ್ಭಕೋಶದ ಬದಲಾಗಿ ಲಿವರ್​ನಲ್ಲಿ ಭ್ರೂಣ ಬೆಳವಣಿಗೆಯಾಗುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ.

ಅಪರೂಪದ ಘಟನೆ: ಮಹಿಳೆಯ ಯಕೃತ್ತಿನಲ್ಲಿ ಪತ್ತೆಯಾದ ಭ್ರೂಣ
ಡಾ.ಮೈಕಲ್​ ನಾರ್ವೆ
Follow us on

ಕೆನಡಾ: ಗರ್ಭಕೋಶದಲ್ಲಿ ಬ್ರೂಣದ ಬೆಳವಣಿಗೆಯಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಮಹಿಳೆಗೆ ಯಕೃತ್ತಿನಲ್ಲಿ ಭ್ರೂಣ ಬೆಳವಣಿಗೆಯಾದ ಕುರಿತು ವೈದ್ಯರೊಬ್ಬರು ತಿಳಿಸಿದ್ದಾರೆ. ಕೆನಡಾದ 33 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗರ್ಭಕೋಶದ ಬದಲಾಗಿ ಲಿವರ್​ನಲ್ಲಿ ಭ್ರೂಣ ಬೆಳವಣಿಗೆಯಾಗುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಕೆನಡಾದ ಮ್ಯಾನಿಟೋಬಾದ ಮಕ್ಕಳ ಆಸ್ಪತ್ರೆಯ ವೈದ್ಯ ಮೈಕಲ್​ ನಾರ್ವೆ ಅವರು ಈ ಅಪರೂಪದ ಪ್ರಕರಣದ ಕುರಿತು ವಿವರಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ನನ್ನ ವೈದ್ಯ ವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಯಕೃತ್ತಿನಲ್ಲಿ ಭ್ರೂಣ ಬೆಳವಣಿಗೆಯಾಗಿರುವುದನ್ನು ನೋಡಿದ್ದೇನೆ. ಇದು ಅತ್ಯಂತ ವಿರಳ ಕೇಸ್​ ಎಂದು ಹೇಳಿದ್ದಾರೆ.

ಈ ಅಪರೂಪದ ಪ್ರಕರಣದ ಬಗ್ಗೆ ವಿವರಿಸಿದ ಅವರು, ಕೆಲವೊಮ್ಮೆ ಗರ್ಭಾಶಯಕ್ಕೆ ಹೋಗುವ ಬದಲು ಮೊಟ್ಟೆಯು ಬೇರೆಡೆಗೆ ಹೋಗಿ ಸಿಲುಕಿಕೊಳ್ಳುತ್ತದೆ. ಆಗ ಈ ರೀತಿಯ ಗರ್ಭಧಾರಣೆಯಾಗುವ ಸಂಭವವಿರುತ್ತದೆ. ಈ ಪ್ರಕರಣದಲ್ಲಿ ಮೊಟ್ಟೆಯು ಫಾಲೋಫಿಯನ್​ ಟ್ಯೂಬ್​ನ್​ನಲ್ಲಿ ಸಿಲುಕಿಕೊಂಡಿದ್ದು, ಅಲ್ಲಿಯೇ ಬೆಳೆಯಲು ಆರಂಭವಾಗಿದೆ. ಕೆಲವೊಮ್ಮೆ ಗರ್ಭಕಂಠದ ಮೇಲೆಯೂ ಬ್ರೂಣದ ಬೆಳವಣಿಯಾಗುತ್ತದೆ. ಸಾಮಾನ್ಯವಾಗಿ ಮೊಟ್ಟೆ ಮತ್ತು ವೀರ್ಯವು ಒಂದುಗೂಡಿದ ಬಳಿಕ ಅಂಡಾಶಯದ ಮಾರ್ಗದಿಂದ ಕಿಬ್ಬೊಟ್ಟೆಯ ಒಳಪದರದ ಅಂಗಾಂಶದಲ್ಲಿ ಸೇರಿಕೊಳ್ಳುತ್ತದೆ. ಆದರೆ ಮಹಿಳೆಗೆ ಅಂಡಾಣು ಮತ್ತು ವೀರ್ಯವು ಪಿತ್ತಜನಕಾಂಗದವರೆಗೆ ಹೋಗುವಾಗ ಗಾಯವಾಗಿದೆ. ಹೀಗಾಗಿ ಯಕೃತ್ತಿನಲ್ಲಿ ಸಿಲುಕಿಕೊಂಡು ಅಲ್ಲಿಯೇ ಭ್ರೂಣದ ಬೆಳವಣಿಗೆಯಾಗಿದೆ. ಇದುವರೆಗೆ ಜಗತ್ತಿನಲ್ಲಿ 1994 ರಿಂದ 1999ರವರೆಗೆ ಈ ರೀತಿಯ ಯಕೃತ್ತಿನಲ್ಲಿ ಭ್ರೂಣ ಬೆಳವಣಿಗೆಯಾದ ಅಪರೂಪದ 14 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಮುಂದುವರೆದು ಮಾತನಾಡಿ, ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಹೊಟ್ಟೆಯಲ್ಲಿ ಗರ್ಭಕೋಶವನ್ನು ಮಾತ್ರ ನೋಡುತ್ತವೆ. ಎಂದಿಗೂ ಯಕೃತ್ತನ್ನು ನೋಡುವುದಿಲ್ಲ. ಇದು ನನ್ನ ಬಳಿ ಬಂದ ಮೊದಲ ಪ್ರಕರಣ. ಸದ್ಯ ಶಸ್ತ್ರಚಿಕಿತ್ಸೆಯ ಮೂಲಕ ಯಕೃತ್ತಿನಲ್ಲಿರುವ ಭ್ರೂಣವನ್ನು ಹೊರತೆಗೆಯಲಾಗಿದ್ದು, ಮಹಿಳೆಯನ್ನು ಬದುಕಿಸಲಾಗಿದೆ. ಆದರೆ ಭ್ರೂಣ ವನ್ನು ಉಳಿಸಲಾಗಿಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:

Typhoon Rai: ಫಿಲಿಪೈನ್ಸ್​ನಲ್ಲಿ ರೈ ಚಂಡಮಾರುತದ ಅಟ್ಟಹಾಸ; 75 ಜನ ಸಾವು, ಹೈ ಅಲರ್ಟ್​ ಘೋಷಣೆ

Omicron: ಬ್ರಿಟನ್​ನಲ್ಲಿ ತೀವ್ರವಾಗಿ ಹರಡುತ್ತಿರುವ ಒಮಿಕ್ರಾನ್; 25,000 ತಲುಪಿದ ಸೋಂಕಿತರ ಸಂಖ್ಯೆ

Published On - 12:54 pm, Sun, 19 December 21