Typhoon Rai: ಫಿಲಿಪೈನ್ಸ್​ನಲ್ಲಿ ರೈ ಚಂಡಮಾರುತದ ಅಟ್ಟಹಾಸ; 75 ಜನ ಸಾವು, ಹೈ ಅಲರ್ಟ್​ ಘೋಷಣೆ

Typhoon Rai: ಫಿಲಿಪೈನ್ಸ್​ನಲ್ಲಿ ರೈ ಚಂಡಮಾರುತದ ಅಟ್ಟಹಾಸ; 75 ಜನ ಸಾವು, ಹೈ ಅಲರ್ಟ್​ ಘೋಷಣೆ
ರೈ ಚಂಡಮಾರುತ

Philippines Typhoon: ಈ ಪ್ರಬಲ ಚಂಡಮಾರುತ ಅಪ್ಪಳಿಸುವ ಮೊದಲೇ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

TV9kannada Web Team

| Edited By: Sushma Chakre

Dec 19, 2021 | 10:33 AM

ಮನಿಲಾ: ಫಿಲಿಪೈನ್ಸ್​ನಲ್ಲಿ ಪ್ರಬಲ ರೈ ಚಂಡಮಾರುತ ಅಪ್ಪಳಿಸಿದ್ದು, ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಈ ವರ್ಷ ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಪ್ರಬಲ ಚಂಡಮಾರುತದಲ್ಲಿ ಕನಿಷ್ಠ 75 ಜನರು ಸಾವನ್ನಪ್ಪಿದ್ದಾರೆ. ತೀವ್ರ ಹಾನಿಗೊಳಗಾದ ದ್ವೀಪಗಳಿಗೆ ನೀರು ಮತ್ತು ಆಹಾರವನ್ನು ತಲುಪಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಚಂಡಮಾರುತದ ಪ್ರಭಾವದಿಂದ ಭಾರೀ ಗಾಳಿಯಿಂದ ಮನೆಯ ಚಾವಣಿಗಳು ಹಾರಿದ್ದು, ಪ್ರವಾಹದಲ್ಲಿ ಗ್ರಾಮಗಳು ಮುಳುಗಿ ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಬಲ ಚಂಡಮಾರುತ ಅಪ್ಪಳಿಸುವ ಮೊದಲೇ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಮತ್ತು ಮಧ್ಯದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಮೊಬೈಲ್ ನೆಟ್‌ವರ್ಕ್ ಇಲ್ಲದೆ ಜನ ಸಂಪರ್ಕ ಕಳೆದುಕೊಂಡಿದ್ದಾರೆ.

ಫಿಲಿಪೈನ್ಸ್​ನ ಜನಪ್ರಿಯ ಪ್ರವಾಸಿ ತಾಣವಾಗಿರುವ ಬೋಹೋಲ್‌ನ ಗವರ್ನರ್ ಆರ್ಥರ್ ಯಾಪ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಾನಿಗೊಳಗಾದ ದ್ವೀಪದ ಮೇಯರ್‌ಗಳು ತಮ್ಮ ಪಟ್ಟಣಗಳಲ್ಲಿ 49 ಜನ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ರೈ ಟೈಫೂನ್ (ಚಂಡಮಾರುತ) ದ್ವೀಪಸಮೂಹದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳನ್ನು ಧ್ವಂಸಗೊಳಿಸಿದ್ದರಿಂದ 3,00,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳು ಮತ್ತು ಬೀಚ್‌ಫ್ರಂಟ್ ರೆಸಾರ್ಟ್‌ಗಳನ್ನು ತೊರೆದಿದ್ದಾರೆ.

ಕಳೆದ ದಶಕಗಳಲ್ಲಿ ಫಿಲಿಪೈನ್ಸ್​ಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಇದಾಗಿದೆ. 18 ಸಾವಿರಕ್ಕೂ ಹೆಚ್ಚು ಮಿಲಿಟರಿ, ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳಿಗೆ ತಲುಪಿದ್ದಾರೆ.

ಗಂಟೆಗೆ 195 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸೂಪರ್ ಟೈಫೂನ್ ಆಗಿ ಗುರುವಾರ ಚಂಡಮಾರುತವು ಫಿಲಿಪೈನ್ಸ್​ಗೆ ಅಪ್ಪಳಿಸಿದೆ. ಪ್ರವಾಹ ಪೀಡಿತ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಅಲ್ಲಿ ಕೆಲವು ನಿವಾಸಿಗಳನ್ನು ಅವರ ಮೇಲ್ಛಾವಣಿಯಿಂದ ರಕ್ಷಿಸಲಾಯಿತು. ವಿಶಾಲವಾದ ದ್ವೀಪಸಮೂಹದ ಕೆಟ್ಟ ಪೀಡಿತ ಪ್ರದೇಶಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಸಹಾಯ ಮಾಡಲು ಸಾವಿರಾರು ಮಿಲಿಟರಿ, ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಚಂಡಮಾರುತದಿಂದ ಸರಕುಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಸಾಗಿಸುವ ಫಿಲಿಪೈನ್ ನೌಕಾಪಡೆಯ ಹಡಗು ಸೋಮವಾರ ಬೋಹೋಲ್‌ಗೆ ಹೊರಡಲಿದೆ.

ಇದನ್ನೂ ಓದಿ: ಅಮೇರಿಕಾ: ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು; 80ಕ್ಕೂ ಅಧಿಕ ಜನರ ದುರ್ಮರಣ

Cyclone Jawad: ಜವಾದ್​ ಚಂಡಮಾರುತದಿಂದ ಒಡಿಶಾದಲ್ಲಿ ವಿಪರೀತ ಮಳೆ; ಆಂಧ್ರದ ಕರಾವಳಿ ತೀರಗಳಿಂದ 54 ಸಾವಿರ ಜನರ ಸ್ಥಳಾಂತರ

Follow us on

Related Stories

Most Read Stories

Click on your DTH Provider to Add TV9 Kannada