ಮೂವರು ಪತ್ನಿಯರು, ಇದು ಎಂಟನೇ ಮಗು; 58ನೇ ವಯಸ್ಸಿನಲ್ಲಿ ಅಪ್ಪನಾಗಲಿದ್ದಾರೆ ಬೋರಿಸ್ ಜಾನ್ಸನ್
ಮೇ 2021 ರಲ್ಲಿ ವಿವಾಹವಾದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಮೂರು ವರ್ಷದ ವಿಲ್ಫ್ ಮತ್ತು ಎರಡು ವರ್ಷದ ರೋಮಿ. ವಿಲ್ಫ್ ಏಪ್ರಿಲ್ 2020 ರಲ್ಲಿ ಜನಿಸಿದರೆ, ರೋಮಿ ಡಿಸೆಂಬರ್ 2021 ರಲ್ಲಿ ಜನಿಸಿದರು. ಇದು ಬೋರಿಸ್ ಜಾನ್ಸನ್ ಅವರ ಮೂರನೇ ಮದುವೆಯಾಗಿದೆ.
ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಅವರ ಪತ್ನಿ ಕ್ಯಾರಿ ಜಾನ್ಸನ್ (Carrie Johnson) ತಾನು ಮೂರನೇ ಮಗುವಿನ ತಾಯಿಯಾಗಲಿದ್ದೇನೆ ಎಂದಿದ್ದು, ಕೆಲವೇ ದಿನಗಳಲ್ಲಿ ಹೆರಿಗೆ ಆಗಲಿದೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ನಲ್ಲಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಕೈ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೆಲವೇ ವಾರಗಳಲ್ಲಿ ಹೊಸ ತಂಡದ ಸದಸ್ಯರು ಆಗಮಿಸುತ್ತಿದ್ದಾರೆ. ಕಳೆದ 8 ತಿಂಗಳುಗಳಿಂದ ನಾನು ಸಾಕಷ್ಟು ದಣಿದಿದ್ದೇನೆ. ಪುಟ್ಟ ಪಾಪುವಿಗಾಗಿ ಕಾಯುತ್ತಿದ್ದೇನೆ. ವಿಲ್ಫ್ ಮತ್ತೆ ದೊಡ್ಡ ಸಹೋದರನಾಗಲು ಉತ್ಸುಕನಾಗಿದ್ದು ಆ ಬಗ್ಗೆಯೇ ಮಾತನಾಡುತ್ತಿರುತ್ತಾನೆ. ಏನು ಬರಲಿದೆ ಎಂಬ ಸುಳಿವು ರೋಮಿಗೆ ಇದೆ ಎಂದು ಭಾವಿಸಬೇಡಿ…ಶೀಘ್ರದಲ್ಲೇ ಅವಳಿಗೆ ಗೊತ್ತಾಗಲಿದೆ ಎಂದು ಬರೆದಿದ್ದಾರೆ.
ಇಂಡಿಪೆಂಡೆಂಟ್ ಪ್ರಕಾರ, 35 ವರ್ಷದ ಮಿಸ್ ಜಾನ್ಸನ್ ಬ್ರಿಟಿಷ್ ಮಾಧ್ಯಮ ಸಲಹೆಗಾರರಾಗಿದ್ದಾರೆ ಮತ್ತು ಕನ್ಸರ್ವೇಟಿವ್ ಪಕ್ಷದ ಮಾಧ್ಯಮ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸಾಗರ ಸಂರಕ್ಷಣಾ ಚಾರಿಟಿಯಾದ ಓಷಿಯಾನಾಗೆ ಹಿರಿಯ ಸಲಹೆಗಾರರಾಗಿದ್ದಾರೆ. ಮೇ 2021 ರಲ್ಲಿ ವಿವಾಹವಾದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಮೂರು ವರ್ಷದ ವಿಲ್ಫ್ ಮತ್ತು ಎರಡು ವರ್ಷದ ರೋಮಿ. ವಿಲ್ಫ್ ಏಪ್ರಿಲ್ 2020 ರಲ್ಲಿ ಜನಿಸಿದರೆ, ರೋಮಿ ಡಿಸೆಂಬರ್ 2021 ರಲ್ಲಿ ಜನಿಸಿದರು. ಇದು ಬೋರಿಸ್ ಜಾನ್ಸನ್ ಅವರ ಮೂರನೇ ಮದುವೆಯಾಗಿದೆ.
View this post on Instagram
ಡೌನಿಂಗ್ ಸ್ಟ್ರೀಟ್‌ನಲ್ಲಿ ವಾಸಿಸದೆ ಇರುವಾಗ ದಂಪತಿಗಳು ಮಗುವನ್ನು ಸ್ವಾಗತಿಸಿದ್ದು ಇದೇ ಮೊದಲು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾನ್ಸನ್ ಅವರನ್ನು ಅವರದ್ದೇ ಸರ್ಕಾರ ಹೊರಹಾಕಿದ ನಂತರ ಅವರು ಡೌನಿಂಗ್ ಸ್ಟ್ರೀಟ್ ತೊರೆದಿದ್ದರು.
ಈ ಪಾಪು ಜಾನ್ಸನ್ ಅವರ ಎಂಟನೇ ಮಗು. ಬೋರಿಸ್ ಜಾನ್ಸನ್ ಅವರು ಮರೀನಾ ವೀಲರ್ ಜತೆಗಿನ ದಾಂಪತ್ಯದಲ್ಲಿ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಬಿಬಿಸಿ ಪ್ರಕಾರ ಕಲಾ ಸಲಹೆಗಾರ್ತಿ ಹೆಲೆನ್ ಮ್ಯಾಕಿನ್‌ಟೈರ್ ಅವರೊಂದಿಗಿನ ಸಂಬಂಧದಿಂದ ಅವರು ಒಂದು ಮಗುವನ್ನು ಹೊಂದಿದ್ದಾರೆ. ಆದರೆ, ಅವರು ನಿಖರ ಸಂಖ್ಯೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಅವರು ತಮ್ಮ ಮೊದಲ ಪತ್ನಿ ಅಲ್ಲೆಗ್ರಾ ಮೊಸ್ಟಿನ್-ಓವನ್ ಜತೆಗಿನ ದಾಂಪತ್ಯದಲ್ಲಿ ಮಕ್ಕಳನ್ನು ಹೊಂದಿರಲಿಲ್ಲ.
ಇದನ್ನೂ ಓದಿ: Russia-Ukraine War: ಉಕ್ರೇನ್ ರಾಜಧಾನಿಯ ಮೇಲೆ ರಷ್ಯಾ ದಾಳಿ, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಬೆಂಕಿ
ಗಾರ್ಡಿಯನ್‌ನ ಪ್ರಕಾರ 3.8 ಮಿಲಿಯನ್ ಪೌಂಡ್‌ಗಳ ಮೌಲ್ಯದ ಆಕ್ಸ್‌ಫರ್ಡ್‌ಶೈರ್‌ನಲ್ಲಿ ಒಂಬತ್ತು ಬೆಡ್ ರೂಂ ಇರುವ ಮಹಲನ್ನು ಬೋರಿಸ್ ಖರೀದಿಸಿದ್ದರು. ತನ್ನ ಪಿತೃತ್ವದ ಪ್ರೀತಿಯ ಬಗ್ಗೆ ಮಾತನಾಡುತ್ತಾ, 58 ವರ್ಷ ವಯಸ್ಸಿನ ಬೋರಿಸ್, 2021 ರಲ್ಲಿ ಸ್ಕೈ ನ್ಯೂಸ್ ಗೆ ಈ ರೀತಿ ಹೇಳಿದ್ದರು. ಇದು ತುಂಬಾ ಕಷ್ಟದ ಕೆಲಸ, ಆದರೆ ನಾನು ಅದನ್ನು ಪ್ರೀತಿಸುತ್ತೇನೆ, ನಾನು ಅದನ್ನು ಸಂಪೂರ್ಣವಾಗಿ ಇಷ್ಟಪಡುತ್ತೇನೆ.ನಾನು ಹಲವಾರು ನ್ಯಾಪಿ ಬದಲಿಸುತ್ತೇನೆ ಎಂಬುದನ್ನು ನಿಮಗೆ ತಿಳಿಸುತ್ತಿದ್ದೇನೆ ಎಂದಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ