Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಸುಪ್ರೀಂ ಆದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವನ್ನು "ಕಾನೂನುಬಾಹಿರ" ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ.

Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಸುಪ್ರೀಂ ಆದೇಶ
Imran Khan

Updated on: May 11, 2023 | 7:13 PM

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವನ್ನು “ಕಾನೂನುಬಾಹಿರ” ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ. ಇಮ್ರಾನ್ ಖಾನ್ ಅವರನ್ನು ಬುಧವಾರದಂದು (ಮೇ10) ಬಂಧನ ಮಾಡಲಾಗಿತ್ತು. ಅವರನ್ನು “ತಕ್ಷಣ” ಬಿಡುಗಡೆ ಮಾಡುವಂತೆ ಆದೇಶಿಸಿದೆ. ಅವರನ್ನು ನಾಳೆ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ARY NEWS ಮತ್ತು ಜಿಯೋ ಟಿವಿ ವರದಿ ಮಾಡಿದೆ. ಇಬ್ರಾನ್ ಖಾನ್ ಅವರನ್ನು ಇಂದು ಸುಪ್ರೀಂ ಕೋರ್ಟ್‌ಗೆ ಹಾಜರುಪಡಿಸಲಾಗಿದೆ, ಇಬ್ರಾನ್ ಖಾನ್ ಬಂಧನ ಕಾನೂನುಬಾಹಿರ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರ ತ್ರಿಸದಸ್ಯ ಪೀಠವು ಆದೇಶವನ್ನು ಹೊರಡಿಸಿದೆ.

ಜಾಮೀನಿಗಾಗಿ ಇಬ್ರಾನ್ ಖಾನ್ ಅವರ ಅರ್ಜಿ ಸಲ್ಲಿಸಿದ್ದರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಜಿ ಪ್ರಧಾನಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಬಂಧಿಸಿದ್ದಕ್ಕಾಗಿ NAB ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಹಾಜರಾಗಲು ಬಂದಿದ್ದರು, ಅವರನ್ನು ಆ ರೀತಿಯಲ್ಲಿ ಬಂಧಿಸಿದ್ದು ಸರಿಯಲ್ಲ ಎಂದು ಹೇಳಿದೆ.

ಹೈಕೋಟ್​​​ ನ್ಯಾಯಮೂರ್ತಿಗಳ ಅನುಮತಿಯಿಲ್ಲದೆ ನ್ಯಾಯಾಲಯದ ಆವರಣದಿಂದ ಒಬ್ಬ ವ್ಯಕ್ತಿಯನ್ನು ಬಂಧಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಂಡಿಯಲ್ ಹೇಳಿದ್ದಾರೆ. “ಒಬ್ಬ ವ್ಯಕ್ತಿಯು ನ್ಯಾಯಾಲಯಕ್ಕೆ ಶರಣಾದರೆ, ಅವರನ್ನು ಬಂಧಿಸುವುದರ ಅರ್ಥವೇನು?” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಎನ್‌ಎಬಿ ಕಸ್ಟಡಿಯಲ್ಲಿ ತನಗೆ ಚಿತ್ರಹಿಂಸೆ ನೀಡಲಾಗಿದೆ ಮತ್ತು ವಾಶ್‌ರೂಮ್ ಅನ್ನು ಬಳಸಲು ಸಹ ಅನುಮತಿ ನೀಡಿಲ್ಲ ಎಂದು ಇಬ್ರಾನ್​​ ಖಾನ್ ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿ ಒಬ್ಬ ಜನಪ್ರಿಯ ಮಾಜಿ ಕ್ರಿಕೆಟ್ ಸೂಪರ್‌ಸ್ಟಾರ್​​ಗೆ ಹೃದಯಾಘಾತವಾಗುವ ಇಂಜೆಕ್ಷನ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

Published On - 6:44 pm, Thu, 11 May 23