ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್​​ಗೆ ಕೊರೊನಾ ಪಾಸಿಟಿವ್​

|

Updated on: Dec 17, 2020 | 3:49 PM

ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್​ಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗಾಗಿ, ಮ್ಯಾಕ್ರನ್ ಒಂದು ವಾರ ಐಸೋಲೇಷನ್​ಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.

ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್​​ಗೆ ಕೊರೊನಾ ಪಾಸಿಟಿವ್​
ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್
Follow us on

ಕೇವಲ ಜನಸಾಮಾನ್ಯರಲ್ಲದೆ ಜಗತ್ತಿನ ವಿವಿಧ ದೇಶಗಳ ಅಧ್ಯಕ್ಷರು ಹಾಗೂ ಪ್ರಧಾನಿಗಳು ಕೊರೊನಾ ಸೋಂಕಿಗೆ ತುತ್ತಾಗುತ್ತಿರುವುದು ಕಂಡು ಬರುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ಗೆ ಈ ಹಿಂದೆ ಕೊರೊನಾ ಪಾಸಿಟಿವ್​ ಎಂದು ವರದಿಯಾಗಿತ್ತು.

ಇದೀಗ, ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್​​ಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗಾಗಿ, ಮ್ಯಾಕ್ರೋನ್ ಒಂದು ವಾರ ಐಸೋಲೇಷನ್​ಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಂದ ಹಾಗೆ, ಕಳೆದ ಕೆಲವು ದಿನಗಳ ಹಿಂದೆ ಆಫ್ರಿಕಾದ ಎಸ್ವಾಟಿನಿಯ ಪ್ರಧಾನ ಮಂತ್ರಿ ಆಂಬ್ರೋಸ್​ ದ್ಲಾಮಿನಿ ಸೋಂಕಿಗೆ ಕೊನೆಯುಸಿರೆಳೆದಿದ್ದರು.

ಮೊದಲ 30 ಕೋಟಿ ಮಂದಿಗೆ ಲಸಿಕೆ: ಪ್ರತಿ ಭಾರತೀಯ 100 ರೂ ಖರ್ಚು ಮಾಡಬೇಕು.. ಲಸಿಕೆಗೆ ಬಳಕೆಯಾಗುತ್ತಾ PM Cares Fund? ಲೆಕ್ಕಾಚಾರ ಏನು?