ದೊಡ್ಡಣ್ಣನಿಗೆ ಬೆಂಬಿಡದೆ ಕಾಡಿದೆ ಕೊರೊನಾ: ಒಂದೇ ದಿನ 2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ
ಅಮೆರಿಕದಲ್ಲಿ ಒಂದೇ ದಿನ 2 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದೆ. ಅಮೆರಿಕದಲ್ಲಿ ನಿನ್ನೆ 2,45,000 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು ನಿನ್ನೆ ಒಂದೇ ದಿನವೇ ಕೊರೊನಾಗೆ 3,600 ಜನ ಬಲಿಯಾಗಿದ್ದಾರೆ.
ವಿಶ್ವದ ದೊಡ್ಡಣ್ಣನಿಗೆ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ. ದಿನೇದಿನೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ಅಮೆರಿಕದಲ್ಲಿ ಸದ್ಯ 1.5 ಕೋಟಿಗಿಂತ ಅಧಿಕ ಕೇಸ್ಗಳು ಪತ್ತೆಯಾಗಿದೆ.
ಇದೀಗ, ಅಮೆರಿಕದಲ್ಲಿ ಒಂದೇ ದಿನ 2 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದೆ. ಅಮೆರಿಕದಲ್ಲಿ ನಿನ್ನೆ 2,45,000 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು ನಿನ್ನೆ ಒಂದೇ ದಿನವೇ ಕೊರೊನಾಗೆ 3,600 ಜನ ಬಲಿಯಾಗಿದ್ದಾರೆ.
ಕೊವಿಡ್-19: ರಾಜ್ಯದಲ್ಲಿಂದು 10 ಸಾವು ಮತ್ತು 1,236 ಹೊಸ ಪ್ರಕರಣಗಳು