ಇಸ್ರೇಲ್​​ಗೆ ಭೇಟಿ ನೀಡಿದ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್

|

Updated on: Oct 24, 2023 | 12:48 PM

ಇಸ್ರೇಲ್​​ ಮೇಲೆ ಅಕ್ಟೋಬರ್​​​ 7ರಂದು ದಾಳಿ ಮಾಡಿದ ಹಮಾಸ್​​​ ಕೃತ್ಯವನ್ನು ಹಲವು ದೇಶಗಳು ಖಂಡಿಸಿದೆ. ಈ ಪೈಕಿ ಫ್ರೆಂಚ್​​ ಕೂಡ ಒಂದು. ಇಸ್ರೇಲ್​​​ಗೆ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಂಪೂರ್ಣ ಬೆಂಬಲ ನೀಡಿದರು. ಇದೀಗ ಯುದ್ಧ ಭೂಮಿ ಇಸ್ರೇಲ್​​ಗೆ​​​ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭೇಟಿ ನೀಡಿದ್ದಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬೈಡನ್​​ ಭೇಟಿ ನೀಡಿದ್ದರು. ನಂತರ ಬ್ರಿಟನ್​​ ಪ್ರಧಾನಿ ರಿಷಿ ಸುನಕ್ ಅವರು ಕೂಡ ಭೇಟಿ ನೀಡಿದ್ದರು.

ಇಸ್ರೇಲ್​​ಗೆ ಭೇಟಿ ನೀಡಿದ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್
ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಸ್ರೇಲ್​​ಗೆ ಭೇಟಿ
Follow us on

ಇಸ್ರೇಲ್​​ (Israel) ಮೇಲೆ ಅಕ್ಟೋಬರ್​​​ 7ರಂದು ದಾಳಿ ಮಾಡಿದ ಹಮಾಸ್​​​ ಕೃತ್ಯವನ್ನು ಹಲವು ದೇಶಗಳು ಖಂಡಿಸಿದೆ. ಈ ಪೈಕಿ ಫ್ರೆಂಚ್​​ ಕೂಡ ಒಂದು. ಇಸ್ರೇಲ್​​​ಗೆ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಸಂಪೂರ್ಣ ಬೆಂಬಲ ನೀಡಿದರು. ಇದೀಗ ಯುದ್ಧ ಭೂಮಿ ಇಸ್ರೇಲ್​​ಗೆ​​​ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭೇಟಿ ನೀಡಿದ್ದಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬೈಡನ್​​ ಭೇಟಿ ನೀಡಿದ್ದರು. ನಂತರ ಬ್ರಿಟನ್​​ ಪ್ರಧಾನಿ ರಿಷಿ ಸುನಕ್ ಅವರು ಕೂಡ ಭೇಟಿ ನೀಡಿದ್ದರು. ಇದೀಗ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಸ್ರೇಲ್​​ನ ಟೆಲ್ ಅವಿವ್‌ಗೆ ಆಗಮಿಸಿದ್ದಾರೆ.

ಇಸ್ರೇಲ್​​ ಅಧಿಕಾರಗಳ ವರದಿ ಪ್ರಕಾರ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುದ್ಧದ ಎರಡು ವಾರಗಳ ನಂತರ ಇಸ್ರೇಲ್​​​ಗೆ ಭೇಟಿ ನೀಡಿದ್ದಾರೆ. ಹಮಾಸ್​​ ಉಗ್ರರು ಗಾಜಾಪಟ್ಟಿ ಮೇಲೆ ದಾಳಿ ಮಾಡಿದಾಗ 1,400 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಫ್ರೆಂಚ್​​ನ 30 ನಾಗರಿಕರು ಇದ್ದರು ಎಂದು ಹೇಳಲಾಗಿದೆ. ಈ ದಾಳಿಯ ನಂತರ ಫ್ರೆಂಚ್​​​ ಇಸ್ರೇಲ್​​ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಜತೆಗೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಸ್ರೇಲ್​​ ಭೇಟಿ ನೀಡಲಿದ್ದಾರೆ ಎಂದು ಫ್ರೆಂಚ್ ಪ್ರೆಸಿಡೆನ್ಸಿ ಹೇಳಿತ್ತು.

ಹಮಾಸ್​​ ಪ್ರಕಾರ ಇಸ್ರೇಲ್​​ ನಡೆಸಿದ ದಾಳಿಯಿಂದ 5,000 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಹೆಚ್ಚಿವರು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗಿದೆ. ಇನ್ನು ಇಸ್ರೇಲ್​​ ವಶದಲ್ಲಿರುವ ಗಾಜಾ ಪಟ್ಟಿಯ 2.4 ಮಿಲಿಯನ್ ಜನರು ನೀರು, ಆಹಾರ, ವಿದ್ಯುತ್ ಮತ್ತು ಇತರ ಮೂಲಭೂತ ಸರಬರಾಜುಗಳಿಂದ ವಂಚಿತರಾಗಿದ್ದಾರೆ. ಇದೀಗ ಅವರಿಗೆ ಮಾನವೀಯತೆ ದೃಷ್ಟಿಯಿಂದ ಕೆಲವೊಂದು ಸಹಾಯವನ್ನು ಮಾಡಲು ಫ್ರೆಂಚ್​​ ಮುಂದಾಗಿದೆ.

ಇದನ್ನೂ ಓದಿ: ವರಸೆ ಬದಲಿಸಿದ ಚೀನಾ, ಇಸ್ರೇಲ್​​​ಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ

ಮ್ಯಾಕ್ರನ್ ಮತ್ತು ನೆತನ್ಯಾಹು ಮಧ್ಯಾಹ್ನ 1:00 ಗಂಟೆಗೆ (1000 GMT) ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಸ್ರೇಲ್​​ ಅಧ್ಯಕ್ಷ ಸೇರಿದಂತೆ ವಿರೋಧ ಪಕ್ಷದ ನಾಯಕರಾದ ಬೆನ್ನಿ ಗ್ಯಾಂಟ್ಜ್ ಮತ್ತು ಯೈರ್ ಲ್ಯಾಪಿಡ್ ಅವರನ್ನು ಜೆರುಸಲೆಮ್‌ನಲ್ಲಿ ಭೇಟಿಯಾಗಲಿದ್ದಾರೆ. ಇದರ ಜತೆಗೆ ಹಮಾಸ್​​​ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಫ್ರೆಂಚ್​​ ನಾಗರಿಕರು ಹಾಗೂ ಫ್ರೆಂಚ್​​​ – ಇಸ್ರೇಲ್​​ ಒತ್ತೆಯಾಳುಗಳಾಗಿರುವವರ ಕುಟುಂಬದವರವನ್ನು ಭೇಟಿ ಮಾಡಲಿದ್ದಾರೆ.

ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಸ್ರೇಲ್​​ಗೆ ಭೇಟಿ ವಿಡಿಯೋ ಇಲ್ಲಿದೆ ನೋಡಿ

ಇನ್ನು ಎಮ್ಯಾನುಯೆಲ್ ಮ್ಯಾಕ್ರೋನ್ ಫೆಲೆಸ್ತೀನ್ ಅಧ್ಯಕ್ಷ ಮಹ್ಮದ್ ಅಬ್ಬಾಸ್, ಜೋರ್ಡಾನ್ ರಾಜ ಅಬ್ದುಲ್ಲಾ II, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮತ್ತು ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಇಸ್ರೇಲ್​​ಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಭೇಟಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:47 pm, Tue, 24 October 23