ಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5

|

Updated on: Jun 09, 2023 | 2:15 PM

ವಾಂಗ್ ಎಂಬ ಹುಡುಗಿಯ ತಾಯಿ ತನ್ನ ಬ್ಯಾಂಕ್ ಖಾತೆ ಚೆಕ್ ಮಾಡಿದಾಗ ಅದರಲ್ಲಿ ಉಳಿದದ್ದು 0.5 ಯುವಾನ್ (ಸುಮಾರು ರೂ. 5).ಹಣ ಕಳೆದುಕೊಂಡು ಆಘಾತಕ್ಕೊಳಗಾದ ಆ ತಾಯಿ, ಮಗಳು ಯಾವ ರೀತಿಯಲ್ಲಿ ಹಣ ಖರ್ಚು ಮಾಡಿದ್ದಾಳೆ ಎಂದು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪುಟಗಳನ್ನು ತೋರಿಸಿರುವ ವಿಡಿಯೊ ವೈರಲ್ ಆಗಿದೆ

ಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5
ಪ್ರಾತಿನಿಧಿಕ ಚಿತ್ರ
Follow us on

ಚೀನಾದಲ್ಲಿ (China) 13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಗೇಮಿಂಗ್‌ಗಾಗಿ (online game) 449,500 ಯುವಾನ್ (ಅಂದಾಜು ರೂ 52,19,809) ಖರ್ಚು ಮಾಡಿದ್ದು ಅಮ್ಮನ ಬ್ಯಾಂಕ್ ಖಾತೆಯನ್ನೇ (Bank Account) ಖಾಲಿ ಮಾಡಿಬಿಟ್ಟಿದ್ದಾಳೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ನ ಪ್ರಕಾರ, ಶಾಲೆಯ ಸಮಯದಲ್ಲಿ ಆಕೆಯ ಅತಿಯಾದ ಫೋನ್ ಬಳಕೆಯನ್ನು ಬಾಲಕಿಯ ಶಿಕ್ಷಕರು ಗಮನಿಸಿದ್ದರು. ಈ ಬಾಲಕಿ ಪೇ-ಟು-ಪ್ಲೇ ಆಟವಾಡುತ್ತಿರಬಹುದು ಎಂದು ಶಂಕಿಸಿ ಆತಂಕಗೊಂಡ ಶಿಕ್ಷಕಿ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯ ತಾಯಿ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಮಗಳು ಉಳಿತಾಯದ ಹಣವನ್ನು ಪೋಲು ಮಾಡಿರುವ ಸಂಗತಿ ಗೊತ್ತಾಗಿದೆ.

ವಾಂಗ್ ಎಂಬ ಹುಡುಗಿಯ ತಾಯಿ ತನ್ನ ಬ್ಯಾಂಕ್ ಖಾತೆ ಚೆಕ್ ಮಾಡಿದಾಗ ಅದರಲ್ಲಿ ಉಳಿದದ್ದು 0.5 ಯುವಾನ್ (ಸುಮಾರು ರೂ. 5).ಹಣ ಕಳೆದುಕೊಂಡು ಆಘಾತಕ್ಕೊಳಗಾದ ಆ ತಾಯಿ, ಮಗಳು ಯಾವ ರೀತಿಯಲ್ಲಿ ಹಣ ಖರ್ಚು ಮಾಡಿದ್ದಾಳೆ ಎಂದು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪುಟಗಳನ್ನು ತೋರಿಸಿರುವ ವಿಡಿಯೊ ವೈರಲ್ ಆಗಿದೆ .ಹುಡುಗಿಯ ತಂದೆ ಈ ಬಗ್ಗೆ ಮಗಳಲ್ಲಿ ವಿಚಾರಿಸಿದಾಗ ತಾನು ಆಟಗಳನ್ನು ಖರೀದಿಸಲು 120,000 ಯುವಾನ್ (ಅಂದಾಜು ರೂ 13,93,828) ಮತ್ತು ಹೆಚ್ಚುವರಿ 210,000 ಯುವಾನ್ (ಸುಮಾರು ರೂ 24,39,340) ಖರ್ಚು ಮಾಡಿದ್ದನ್ನು ಆಕೆ ಒಪ್ಪಿಕೊಂಡಳು. ಇದಲ್ಲದೆ, ಅವಳು ತನ್ನ ಕನಿಷ್ಠ 10 ಸಹಪಾಠಿಗಳಿಗೆ ಆಟಗಳನ್ನು ಖರೀದಿಸಲು ಮತ್ತೊಂದು 100,000 ಯುವಾನ್ (ಸುಮಾರು 11,61,590 ರೂ.) ಬಳಸಿರುವುದಾಗಿ ಹೇಳಿದ್ದಾಳೆ.

ಇಷ್ಟವಿಲ್ಲದಿದ್ದರೂ ಸಹಪಾಠಿಗಳ ಆಟಗಳಿಗೆ ಹಣ ನೀಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಹಣ ಮತ್ತು ಅದರ ಮೂಲದ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ ಎಂದು ಹೇಳಿಕೊಂಡ ಆಕೆ ಮನೆಯಲ್ಲಿ ಡೆಬಿಟ್ ಕಾರ್ಡ್ ಸಿಕ್ಕಾಗ ಅದನ್ನು ತನ್ನ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಮಾಡಿದ್ದೆ. ಅಮ್ಮನ ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಗೊತ್ತಿತ್ತು, ಇದನ್ನು ಅಮ್ಮನೇ ನನ್ನಲ್ಲಿ ಶೇರ್ ಮಾಡಿದ್ದರು ಎಂದಿದ್ದಾಳೆ ಬಾಲಕಿ. ತನ್ನ ಈ ಕೃತ್ಯಗಳನ್ನು ಮರೆಮಾಚಲು, ಹುಡುಗಿ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್ ಗೇಮ್‌ಗಳಿಗೆ ಸಂಬಂಧಿಸಿದ ಎಲ್ಲಾ ವಹಿವಾಟು ದಾಖಲೆಗಳನ್ನು ಅಳಿಸಿದ್ದಳು.

ಇದನ್ನೂ ಓದಿ: Cash Withdrawal: ಕಾರ್ಡ್ ಬೇಕಿಲ್ಲ, ಮೊಬೈಲ್​ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಈ  ಘಟಮೆ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದ್ದು, ಪರಿಸ್ಥಿತಿಗೆ ಯಾರು ಹೊಣೆಗಾರರಾಗಬೇಕು ಎಂಬ ಬಗ್ಗೆ ನೆಟಿಜನ್‌ಗಳು ವಿಭಿನ್ನ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

ಮೆಕ್‌ಗಿಲ್ ವಿಶ್ವವಿದ್ಯಾಲಯದ 2022 ರ ವಿಶ್ಲೇಷಣೆಯ ಪ್ರಕಾರ, ಚೀನಾದಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್ ವ್ಯಸನಿಗಳು ಇದ್ದಾರೆ. ಸೌದಿ ಅರೇಬಿಯಾ ಮತ್ತು ಮಲೇಷ್ಯಾ ನಂತರದ ಸ್ಥಾನದಲ್ಲಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Fri, 9 June 23