ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ ಬೋರಿಸ್ ಜಾನ್ಸನ್; ಬಲವಂತದ ಕ್ರಮ ಎಂದ ಬ್ರಿಟನ್ ಮಾಜಿ ಪ್ರಧಾನಿ
ಪಾರ್ಟಿಗೇಟ್ ಹಗರಣದಲ್ಲಿ ಈಗಾಗಲೇ ಜಾನ್ಸನ್ ವಿರುದ್ಧ ಸಂಸದೀಯ ಸಮಿತಿ ವರದಿ ಸಲ್ಲಿಸಿದ್ದು, ಅವರು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಪಾರ್ಟಿಗೇಟ್ ಹಗರಣಕ್ಕೆ ಸಂಬಂಧಿಸಿ ಬಲವಂತದಿಂದ ತಾವು ರಾಜೀನಾಮೆ ನೀಡುವಂತೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಸಂತೋಷಕೂಟಗಳನ್ನು ಆಯೋಜಿಸಿದ್ದ ಬಗ್ಗೆ ಜಾನ್ಸನ್ ಅವರು ಸಂಸತ್ಗೆ ತಪ್ಪು ಮಾಹಿತಿ ನೀಡಿದ್ದರು ಎಂಬ ಆರೋಪ ಅವರ ಮೇಲಿದೆ. ಇದು ಪಾರ್ಟಿಗೇಟ್ ಹಗರಣ ಎಂಬ ಹೆಸರಿನಲ್ಲಿ ಬ್ರಿಟನ್ನಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಪಾರ್ಟಿಗೇಟ್ ಹಗರಣದಲ್ಲಿ ಈಗಾಗಲೇ ಜಾನ್ಸನ್ ವಿರುದ್ಧ ಸಂಸದೀಯ ಸಮಿತಿ ವರದಿ ಸಲ್ಲಿಸಿದ್ದು, ಅವರು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ವರದಿ ಬಿಡುಗಡೆಗೂ ಮೊದಲೇ ಜಾನ್ಸನ್ ಅವರು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ನಾನು ಎಲ್ಲಿಯೂ ಸುಳ್ಳು ಹೇಳಿಲ್ಲ. ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದು ದೂರಿದ್ದಾರೆ.
ಆದರೆ, ಸದನದ ದಿಕ್ಕುತಪ್ಪಿಸುವ ಪ್ರಮಾದ ಎಸಗಿದ್ದಕ್ಕಾಗಿ ಬೋರಿಸ್ ಜಾನ್ಸನ್ ಅವರು ಮಾರ್ಚ್ನಲ್ಲಿ ಕ್ಷಮೆಯಾಚಿಸಿದ್ದರು.
2021 ರ ಏಪ್ರಿಲ್ನಲ್ಲಿ ಕೋವಿಡ್ಗೆ ಸಂಬಂಧಿಸಿದ ನಿಬಂಧನೆಗಳು ಇನ್ನೂ ಜಾರಿಯಲ್ಲಿದ್ದಾಗ ಬ್ರಿಟನನ್ನಿನ ರಾಜಕುಮಾರ ಫಿಲಿಪ್ ಅವರ ಅಂತ್ಯಸಂಸ್ಕಾರದ ಮುನ್ನಾದಿನ ಜಾನ್ಸನ್ ಅವರ ಸಿಬ್ಬಂದಿಯ ಪೈಕಿ ಕೆಲವರು ಡೌನಿಂಗ್ ಸ್ಟ್ರೀಟ್ ಕಚೇರಿಯಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ನಡೆದ ಪಾರ್ಟಿಯಲ್ಲಿ ರತಿಕ್ರೀಡೆ ನಡೆಸಿದ್ದರು ಎಂದು ಕೆಲವು ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿದ್ದವು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ