Donald Trump: ಸರ್ಕಾರದ ಗೌಪ್ಯ ದಾಖಲೆಗಳನ್ನು ಇಟ್ಟುಕೊಂಡ ಆರೋಪ, ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಸಂಕಷ್ಟ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವಿರುದ್ಧ ಸರ್ಕಾರದ ಗೌಪ್ಯ ದಾಖಲೆಗಳನ್ನು ಇಟ್ಟುಕೊಂಡಿರುವ ಆರೋಪ ಕೇಳಿಬಂದಿದೆ. ಅವರ ವಿರುದ್ದ ದೋಷಾರೋಪಣೆ ಹೊರಿಸಲಾಗಿದ್ದು, ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವಿರುದ್ಧ ಸರ್ಕಾರದ ಗೌಪ್ಯ ದಾಖಲೆಗಳನ್ನು ಇಟ್ಟುಕೊಂಡಿರುವ ಆರೋಪ ಕೇಳಿಬಂದಿದೆ. ಅವರ ವಿರುದ್ದ ದೋಷಾರೋಪಣೆ ಹೊರಿಸಲಾಗಿದ್ದು, ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದೆ. ಮುಂದಿನ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೂ ಮುನ್ನ ಅಮೆರಿಕದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ಇದು ಟ್ರಂಪ್‌ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಶ್ವೇತಭವನದಿಂದ ಹೊರಬಂದ ನಂತರವೂ ಟ್ರಂಪ್ ತಮ್ಮ ಬಳಿ ನೂರಾರು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸುಳ್ಳು ಹೇಳಿಕೆಗಳನ್ನೂ ನೀಡಿದ್ದಾರೆ. ತನಿಖಾ ಸಂಸ್ಥೆಗಳು ಟ್ರಂಪ್ ವಿರುದ್ಧ ಏಳು ಕೇಂದ್ರೀಯ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಟ್ರಂಪ್ ಮಾಜಿ ಅಧ್ಯಕ್ಷರಷ್ಟೇ ಅಲ್ಲ, 2024ರ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಗಾದಿಗೆ ಸ್ಪರ್ಧೆ ಮಾಡುವ ಮೂಲಕ ಅಧ್ಯಕ್ಷ ಜೋ ಬೈಡನ್ ಅವರನ್ನು ಎದುರಿಸಲು ಮುಂಚೂಣಿಯಲ್ಲಿದ್ದಾರೆ.
ಮತ್ತಷ್ಟು ಓದಿ: Stormy Daniels: ಮಾನನಷ್ಟ ಪ್ರಕರಣದಲ್ಲಿ ಸ್ಟಾರ್ಮಿ ಡೇನಿಯಲ್ಸ್ಗೆ ಮುಖಭಂಗ; ಡೊನಾಲ್ಡ್ ಟ್ರಂಪ್ ಕಾನೂನು ಶುಲ್ಕ ಪಾವತಿಸಲು ನೀಲಿಚಿತ್ರ ತಾರೆಗೆ ಕೋರ್ಟ್ ಆದೇಶ
ತಮ್ಮ ನಡುವಿನ ಸಂಬಂಧ ಬಹಿರಂಗಪಡಿಸದಂತೆ 2016ಕ್ಕೂ ಮುನ್ನ ಪೋರ್ನ್ ಸ್ಟಾರ್ಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ 30ಕ್ಕೂ ಹೆಚ್ಚು ಅಪರಾಧ ಆರೋಪಗಳನ್ನು ದಾಖಲಿಸಿದ ಎರಡು ತಿಂಗಳ ನಂತರ ಮತ್ತೊಂದು ಆರೋಪಹೊರಿಸಲಾಗಿದೆ.
ನಾನು ಅಮಾಯಕ ಎಂದ ಟ್ರಂಪ್ ಟ್ರಂಪ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮೈಮಿಯಲ್ಲಿರುವ ಫೆಡರಲ್ ಕೋರ್ಟ್ ಹೌಸ್ ಮುಂದೆ ಮಂಗಳವಾರ ಹಾಜರಾಗುವಂತೆ ನನಗೆ ಸಮನ್ಸ್ ನೀಡಲಾಗಿದೆ. ನಾನೊಬ್ಬ ಅಮಾಯಕ ಎಂದು ಟ್ರೂಥ್ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷರಿಗೆ ಇಂತಹದ್ದೊಂದು ಸಂಗತಿ ಸಂಭವಿಸಬಹುದು ಎಂದು ನಾನು ಎಂದಿಗೂ ಊಹಿಸಲಿಲ್ಲ ಎಂದಿದ್ದಾರೆ. ಇದು ನಿಜಕ್ಕೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಕರಾಳ ದಿನವಾಗಿದೆ. ದೇಶವು ಕುಸಿತದೆಡೆಗೆ ಸಾಗುತ್ತಿದೆ. ಆದರೆ, ಆದರೆ ನಾವು ಅಮೆರಿಕವನ್ನು ಮತ್ತೆ ಶೇಷ್ಠವನ್ನಾಗಿಸುತ್ತೇವೆ ಎಂದು ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಟ್ರಂಪ್ ಟಾಂಗ್ ನೀಡಿದ್ದಾರೆ.
ಟ್ರಂಪ್ ಈಗಾಗಲೇ ನ್ಯೂಯಾರ್ಕ್ನಲ್ಲಿ ಮತ್ತೊಂದು ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಇದೀಗ ಮತ್ತೊಂದು ಕ್ರಿಮಿನಲ್ ಪ್ರಕರಣ ಟ್ರಂಪ್ ಅವರನ್ನು ಸುತ್ತಿಕೊಂಡಿದೆ. ಈಗಾಗಲೇ 7 ಪ್ರಕರಣಗಳ ಸಂಬಂಧ ಮಂಗಳವಾರದ ಮೈಮಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಟ್ರಂಪ್‌ಗೆ ಸಮನ್ಸ್ ಜಾರಿ ಮಾಡಿರುವ ಸಂಗತಿಯನ್ನು ಅವರ ಕಾನೂನು ತಂಡ ಗಮನಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ