ಆಫ್ರಿಕಾ ಮೂಲದ ವ್ಯಕ್ತಿಯ ಹತ್ಯೆ ಬೆನ್ನಲ್ಲೇ ಅಮೆರಿಕದಲ್ಲಿ ಹೆಚ್ಚಾಯ್ತು ಜನಾಂಗೀಯ ಸಂಘರ್ಷ!

ವಾಷಿಂಗ್ಟನ್: ದೊಡ್ಡಣ್ಣನ ನಾಡು ಅಕ್ಷರಶಃ ರಕ್ತದ ಮಡುವಿನಲ್ಲಿ ಮಿಂದೆದ್ದಿದೆ. ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಹತ್ಯೆ ನಂತರ ಜನ ನಡೆಸುತ್ತಿರುವ ಹೋರಾಟ ಭೀಕರ ಸ್ವರೂಪ ಪಡೆದಿದ್ದು, ಎಲ್ಲೆಲ್ಲೂ ಹೋರಾಟದ ಕಿಚ್ಚು ಹೊತ್ತಿದೆ. ಪ್ರತಿಭಟನಾಕಾರರು ಹಿಂಸೆಗೆ ಇಳಿದು, ಕಂಡ ಕಂಡ ಕಡೆ ಬೆಂಕಿ ಹಚ್ಚಿ ಸಿಕ್ಕ ಸಿಕ್ಕಿದ್ದನ್ನೆಲ್ಲಾ ಲೂಟಿ ಮಾಡ್ತಿದ್ದಾರೆ. ಅಬ್ಬಬ್ಬಾ ಧಗಧಗನೆ ಹೊತ್ತಿ ಉರಿಯುತ್ತಿರುವ ಕಟ್ಟಡ. ಮತ್ತೊಂದ್ಕಡೆ ಏನೂ ಮಾಡಲಾಗದೆ ಅಸಹಾಯಕರಾಗಿ ನಿಂತಿರುವ ಭದ್ರತಾ ಸಿಬ್ಬಂದಿ.ಅಷ್ಟಕ್ಕೂ ಇದು ಬಡ ರಾಷ್ಟ್ರದಲ್ಲೋ ಅಥವಾ ಅಭಿವೃದ್ಧಿಶೀಲ ದೇಶದಲ್ಲೋ ನಡೀತಿರೋ ಘಟನೆ […]

ಆಫ್ರಿಕಾ ಮೂಲದ ವ್ಯಕ್ತಿಯ ಹತ್ಯೆ ಬೆನ್ನಲ್ಲೇ ಅಮೆರಿಕದಲ್ಲಿ ಹೆಚ್ಚಾಯ್ತು ಜನಾಂಗೀಯ ಸಂಘರ್ಷ!
Follow us
ಸಾಧು ಶ್ರೀನಾಥ್​
| Updated By:

Updated on: Jun 02, 2020 | 7:44 AM

ವಾಷಿಂಗ್ಟನ್: ದೊಡ್ಡಣ್ಣನ ನಾಡು ಅಕ್ಷರಶಃ ರಕ್ತದ ಮಡುವಿನಲ್ಲಿ ಮಿಂದೆದ್ದಿದೆ. ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಹತ್ಯೆ ನಂತರ ಜನ ನಡೆಸುತ್ತಿರುವ ಹೋರಾಟ ಭೀಕರ ಸ್ವರೂಪ ಪಡೆದಿದ್ದು, ಎಲ್ಲೆಲ್ಲೂ ಹೋರಾಟದ ಕಿಚ್ಚು ಹೊತ್ತಿದೆ. ಪ್ರತಿಭಟನಾಕಾರರು ಹಿಂಸೆಗೆ ಇಳಿದು, ಕಂಡ ಕಂಡ ಕಡೆ ಬೆಂಕಿ ಹಚ್ಚಿ ಸಿಕ್ಕ ಸಿಕ್ಕಿದ್ದನ್ನೆಲ್ಲಾ ಲೂಟಿ ಮಾಡ್ತಿದ್ದಾರೆ.

ಅಬ್ಬಬ್ಬಾ ಧಗಧಗನೆ ಹೊತ್ತಿ ಉರಿಯುತ್ತಿರುವ ಕಟ್ಟಡ. ಮತ್ತೊಂದ್ಕಡೆ ಏನೂ ಮಾಡಲಾಗದೆ ಅಸಹಾಯಕರಾಗಿ ನಿಂತಿರುವ ಭದ್ರತಾ ಸಿಬ್ಬಂದಿ.ಅಷ್ಟಕ್ಕೂ ಇದು ಬಡ ರಾಷ್ಟ್ರದಲ್ಲೋ ಅಥವಾ ಅಭಿವೃದ್ಧಿಶೀಲ ದೇಶದಲ್ಲೋ ನಡೀತಿರೋ ಘಟನೆ ಅಲ್ಲ. ವಿಶ್ವವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಬುಗುರಿಯಂತೆ ಆಟವಾಡಿಸುವ ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಎದುರಾಗಿರುವ ದುಃಸ್ಥಿತಿ ಇದು. ಇನ್​ಫ್ಯಾಕ್ಟ್ ಜನಾಂಗೀಯ ಸಂಘರ್ಷದ ಮತ್ತೊಂದು ಮುಖ.

ಇಡೀ ಅಮೆರಿಕಗೆ ಕಿಚ್ಚು ಹಚ್ಚುತ್ತಿದೆ ಆ ಒಂದು ಹತ್ಯೆ: ಭೀಕರ.. ರಣಭೀಕರ.. ಒಂದೊಂದು ದೃಶ್ಯವೂ ಬೆಚ್ಚಿಬೀಳಿಸುವ ಅನುಭವ ನೀಡುತ್ತಿವೆ. ಆರ್ಥಿಕವಾಗಿ ಅದೆಷ್ಟೇ ಬಲಿಷ್ಠವಾಗಿದ್ದರೂ, ಇದೊಂದು ಪ್ರತಿಭಟನೆಯನ್ನ ಹತ್ತಿಕ್ಕಲು ಅಥವಾ ಹಿಂಸಾಚಾರ ತಡೆಯಲು ಅಮೆರಿಕದ ಕೈಯಲ್ಲಿ ಸಾಧ್ಯವೇ ಆಗ್ತಿಲ್ಲ. ಅಷ್ಟಕ್ಕೂ ಇದಕ್ಕೆ ಕಾರಣ ಬೇರೇನು ಅಲ್ಲ, ಒನ್ಸ್ ಅಗೈನ್ ಅದೇ ವರ್ಣಬೇಧ ನೀತಿ. ಶತಮಾನಗಳ ಕಾಲ ವರ್ಣಬೇಧ ನೀತಿಗೆ ಸಾಕ್ಷಿಯಾಗಿದ್ದ ಅಮೆರಿಕದಲ್ಲಿ ಮತ್ತೆ ಅದೇ ಜನಾಂಗೀಯ ಸಂಘರ್ಷ ಏರ್ಪಟ್ಟಿದೆ. ಆದರೆ ಪರಿಸ್ಥಿತಿ ನಿಯಂತ್ರಿಸಲು ಅಮೆರಿಕದ ಕೈಯಲ್ಲಿ ಆಗ್ತಿಲ್ಲ. ಅಮೆರಿಕದ 1 ರಾಜ್ಯಕ್ಕೆ ಹತ್ತಿದ್ದ ಕಿಚ್ಚು ಈಗ ಹತ್ತಾರು ರಾಜ್ಯಗಳಿಗೆ ಹಬ್ಬಿದೆ. ಅಷ್ಟಕ್ಕೂ ಈ ಹೋರಾಟ, ಹಂಗೆ ಹಿಂಗೆ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಅಮೆರಿಕಗೆ ಶಾಕ್ ನೀಡಿದೆ.

ಅಷ್ಟಕ್ಕೂ ನಡೆದಿದ್ದು ಏನು ಗೊತ್ತಾ..? ಅಂದಹಾಗೆ ಕೆಲ ದಿನಗಳ ಹಿಂದೆ ಅಮೆರಿಕದ ಮಿನ್ನೆಸೋಟ ಸ್ಟೇಟ್​ನ, ಮಿನ್ನೆಪೊಲೀಸ್ ಸಿಟಿಯಲ್ಲಿ ಪೊಲೀಸ್ ಅಧಿಕಾರಿ ಡೆರೆಕ್ ಎಂಬಾತನಿಂದ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಕೊಲೆಯಾಗಿದ್ದ. ಈ ಹಿನ್ನೆಲೆಯಲ್ಲಿ ಇಡೀ ಅಮೆರಿಕದಲ್ಲಿ ಬೆಂಕಿ ಹೊತ್ತಿದೆ. ಫ್ಲಾಯ್ಡ್ ಬಂಧನಕ್ಕೆ ಬಂದ ಡೆರೆಕ್ ಏನೋ ಕ್ರಿಮಿನಲ್ ಪ್ಲ್ಯಾನ್ ಮಾಡಿದಂತೆ ಕಾಣ್ತಿತ್ತು. ಮೃತ ಫ್ಲಾಯ್ಡ್​ನ ಕೈಗೆ ಕೋಳ ತೊಡಿಸಿ ನೆಲಕ್ಕೆ ಕೆಡವಿದ್ದಾಗ ಫ್ಲಾಯ್ಡ್ ವಿಲವಿಲನೇ ಒದ್ದಾಡಿದ್ದ.

ಆದರೂ ಸುಮಾರು 5 ನಿಮಿಷ ಕಾಲ ಆತನ ಕುತ್ತಿಗೆ ಮೇಲೆ ಮೊಣಕಾಲನ್ನು ಇಟ್ಟು ಉಸಿರುಗಟ್ಟಿಸಿದ್ದ ಸೈಕೋ ಡೆರೆಕ್. ನೋಡ ನೋಡುತ್ತಿದ್ದಂತೆಯೇ ಜಾರ್ಜ್ ಫ್ಲಾಯ್ಡ್​​ನ ಕೊಂದೇ ಬಿಟ್ಟಿದ್ದ ಪಾಪಿ. ಉಸಿರಾಡಲು ಆಗುತ್ತಿಲ್ಲ ಅಂತಾ ನೆಲಕ್ಕೆ ಬಿದ್ದಿದ್ದ ಫ್ಲಾಯ್ಡ್ ಅಂಗಲಾಚಿದ್ರೂ ಡೆರೆಕ್ ಮನಸು ಕರಗಿರಲಿಲ್ಲ. ಕೊನೆಗೆ ಮೂತ್ರ ವಿಸರ್ಜಿಸಿಕೊಂಡರೂ ಆತನ ಬಗ್ಗೆ ಡೆರೆಕ್ ಎಂಬ ಮಾನವ ರೂಪಿ ರಾಕ್ಷಸನಿಗೆ ಕನಿಕರ ಬಂದಿಲ್ಲ. ಕಡೆಗೂ ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಫ್ಲಾಯ್ಡ್ ನರಳಿ ನರಳಿ ಅಲ್ಲೇ ಪ್ರಾಣಬಿಟ್ಟಿದ್ದಾನೆ. ಈ ವಿಡಿಯೋ ವಿಶ್ವದಾದ್ಯಂತ ವೈರಲ್ ಆಗಿ, ಆಕ್ರೋಶದ ಕಿಚ್ಚು ಹೊತ್ತಿತ್ತು.

ಪ್ರತಿಭಟನೆ ನೆಪದಲ್ಲಿ ಅಂಗಡಿ ದೋಚಿದ ಖದೀಮರು: ಅತ್ತ ವರ್ಣಬೇಧ ನೀತಿ ವಿರುದ್ಧ ಆಕ್ರೋಶದ ಕಿಚ್ಚು ಮೊಳಗಿರುವ ಸಂದರ್ಭದಲ್ಲೇ ತಮ್ಮ ಸ್ವಾರ್ಥ ಸಾಧನೆಗಾಗಿ ದರೋಡೆಗೆ ಇಳಿದಿರುವ ಕಿರಾತಕರು ಅಮೆರಿಕದಲ್ಲಿ ಕಳ್ಳತನಕ್ಕೆ ಇಳಿದಿದ್ದಾರೆ. ಪ್ರತಿಭಟನೆ ನೆಪದಲ್ಲಿ ಕೆಲವು ಖದೀಮರು ಹೋರಾಟಗಾರರ ಜೊತೆ ಸೇರಿ ಅಂಗಡಿ ದೋಚುತ್ತಿದ್ದಾರೆ. ಒಂದಿಡೀ ಐಫೋನ್ ಶಾಪ್ ಅನ್ನ ಕ್ಷಣಮಾತ್ರದಲ್ಲಿ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟೇ ಏಕೆ ಒಂದು ಶೂ ಅಂಗಡಿ ಕಂಡರೂ ಬಿಡದೆ ಕದ್ದು ಪರಾರಿಯಾಗ್ತಿದ್ದಾರೆ.

ಇದಿಷ್ಟೂ ಅಮಾನವೀಯ ದೃಶ್ಯಗಳ ಸರಮಾಲೆಯಾದ್ರೆ, ಮಾನವೀಯ ಘಟನೆಗಳಿಗೂ ಈ ಹೋರಾಟ ಸಾಕ್ಷಿ ಆಗಿದೆ. ಅತ್ತ ಪ್ರತಿಭಟನಾಕಾರರ ಬೆಂಕಿಗೆ ಅದೆಷ್ಟೋ ಮಾಲ್​ಗಳು, ಮಾರ್ಟ್​ಗಳು ಹೊತ್ತಿ ಉರಿದಿವೆ. ಇನ್ನೋಂದ್ಕಡೆ ದರೋಡೆಕೋರರ ಅಟ್ಟಹಾಸಕ್ಕೆ ಸೂಪರ್ ಮಾರ್ಕೆಟ್​ಗಳು ಖಾಲಿಯಾಗಿವೆ. ಇದರಿಂದ ಮಾಲೀಕರು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಇದನ್ನೆಲ್ಲಾ ಅರಿತಿರುವ ಸ್ಥಳೀಯರು ಬೆಂಕಿಬಿದ್ದ ಅಂಗಡಿಗಳನ್ನ ಸ್ವಚ್ಛಗೊಳಿಸುತ್ತಿದ್ದಾರೆ. ಇನ್ನು ಈ ಕಾರ್ಯಕ್ಕೆ ಪುಟಾಣಿಯೊಬ್ಬಳು ಕೂಡ ಸಾಥ್ ನೀಡಿ ಗಮನ ಸೆಳೆದಳು

ಒಟ್ನಲ್ಲಿ ಒಂದೇ ಒಂದು ಕೊಲೆ ದೊಡ್ಡಣ್ಣನ ನಾಡಿನಲ್ಲಿ ಹೋರಾಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಇದನ್ನೆಲ್ಲಾ ಸರಿಪಡಿಸಲು ಟ್ರಂಪ್ ಸರ್ಕಾರದ ಕೈಯಲ್ಲಿ ಆಗ್ತಿಲ್ಲ. ಇದ್ರಿಂದ ಚುನಾವಣೆ ಹೊಸ್ತಿಲಲ್ಲೆ ಟ್ರಂಪ್​ಗೆ ಮುಖಭಂಗವಾಗಿದೆ.

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ