Greece: ದೋಣಿ ಮುಳುಗಿ 79 ವಲಸಿಗರ ಸಾವು, ನೂರಾರು ಮಂದಿ ನಾಪತ್ತೆಯಾಗಿರುವ ಶಂಕೆ
ದಕ್ಷಿಣ ಗ್ರೀಸ್‌ನ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿ ಕನಿಷ್ಠ 79 ವಲಸಿಗರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ಗ್ರೀಸ್‌ನ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿ ಕನಿಷ್ಠ 79 ವಲಸಿಗರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಬುಧವಾರ ಈ ಮಾಹಿತಿ ನೀಡಿದ್ದಾರೆ, ಘಟನಾ ಸ್ಥಳದಲ್ಲಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ದಕ್ಷಿಣ ಪೆಲೋಪೊನೀಸ್ ಪ್ರದೇಶದ ನೈಋತ್ಯಕ್ಕೆ 75 ಕಿಲೋಮೀಟರ್ ದೂರದಲ್ಲಿ ರಾತ್ರಿ ವೇಳೆ ಘಟನೆ ಸಂಭವಿಸಿದ ನಂತರ ಇದುವರೆಗೆ 104 ಜನರನ್ನು ರಕ್ಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಆದರೆ ಅಧಿಕೃತವಾಗಿ ಇನ್ನೂ ತಿಳಿದುಬಂದಿಲ್ಲ.
79 ಮೃತದೇಹಗಳನ್ನು ಸಮುದ್ರದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಗ್ರೀಕ್ ಕೋಸ್ಟ್ ಗಾರ್ಡ್ ತಿಳಿಸಿದೆ, ಆದರೆ ದೋಣಿಯಲ್ಲಿ ಎಷ್ಟು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂಬುದನ್ನು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ.
ಪ್ರಾಥಮಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಆರು ಕೋಸ್ಟ್ ಗಾರ್ಡ್ ಹಡಗುಗಳು, ನೌಕಾಪಡೆಯ ಹಡಗು, ಆರ್ಮಿ ಸಾರಿಗೆ ವಿಮಾನ ಮತ್ತು ವಾಯುಪಡೆಯ ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳು ಸಹಾಯ ಮಾಡುತ್ತಿವೆ.
ಮತ್ತಷ್ಟು ಓದಿ: Nigeria Boat Capsized: ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ದೋಣಿ ಮಗುಚಿ 103 ಮಂದಿ ಸಾವು
ಘಟನೆಯಲ್ಲಿ ರಕ್ಷಿಸಲ್ಪಟ್ಟ ಹತ್ತಾರು ವಲಸಿಗರನ್ನು ಆಂಬ್ಯುಲೆನ್ಸ್ ಸೇವೆಯಿಂದ ಸ್ಥಾಪಿಸಲಾದ ಶಿಬಿರಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಈವರೆಗೆ 79 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.
ಬದುಕುಳಿದವರಲ್ಲಿ 30 ಈಜಿಪ್ಟಿನವರು, 10 ಪಾಕಿಸ್ತಾನಿಗಳು, 35 ಸಿರಿಯನ್ನರು ಮತ್ತು ಇಬ್ಬರು ಪ್ಯಾಲೆಸ್ಟೀನಿಯಾದವರು ಸೇರಿದ್ದಾರೆ ಎಂದು ಅದು ಹೇಳಿದೆ. ಇಟಲಿಗೆ ಹೊರಟಿದ್ದ ದೋಣಿ ಪೂರ್ವ ಲಿಬಿಯಾದ ಟೊಬ್ರುಕ್ ಪ್ರದೇಶದಿಂದ ಹೊರಟಿತ್ತು ಎನ್ನಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ