ಒತ್ತೆಯಾಳು ಇಸ್ರೇಲ್​​ ಯುವತಿಯ ವಿಡಿಯೋ ಬಿಡುಗಡೆ ಮಾಡಿದ ಹಮಾಸ್​​, ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ

|

Updated on: Oct 17, 2023 | 12:11 PM

ಇಸ್ರೇಲ್​​ನ ಕಿಬ್ಬುಟ್ಜ್‌ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್‌ ಸಂಗೀತ ಉತ್ಸವದ ಮೇಲೆಯೂ ದಾಳಿ ಮಾಡಿದ್ದಾರೆ. ಅಲ್ಲಿದ್ದ ಇಸ್ರೇಲ್​​ ನಾಗರಿಕರನ್ನು ಅಪಹರಣ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಈ ಒತ್ತೆಯಾಳುಗಳಲ್ಲಿ 21 ವರ್ಷದ ಇಸ್ರೇಲಿ ಯುವತಿ ಶೋಹಮ್‌ ಕೂಡ ಒಬ್ಬರು. ಇದೀಗ ಈಕೆಯ ಒಂದು ವಿಡಿಯೋವನ್ನು ಹಮಾಸ್​​ ಉಗ್ರರು ಬಿಡುಗಡೆ ಮಾಡಿದ್ದಾರೆ.

ಒತ್ತೆಯಾಳು ಇಸ್ರೇಲ್​​ ಯುವತಿಯ ವಿಡಿಯೋ ಬಿಡುಗಡೆ ಮಾಡಿದ ಹಮಾಸ್​​, ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ
ವಿಡಿಯೋ ವೈರಲ್
Follow us on

ಇಸ್ರೇಲ್ (Israel)​​​ ಮತ್ತು ಹಮಾಸ್ (Hamas)​​ ಭಯೋತ್ಪಾದಕ ನಡುವೆ ನಡೆದ ಭಾರೀ ಯುದ್ಧದಿಂದ ಅನೇಕ ನಾಗರಿಕರ ಸಾವು-ನೋವುಗಳ ಸಂಭವಿಸಿದೆ. ಅಕ್ಟೋಬರ್​​ 7ರಂದು ಇಸ್ರೇಲ್​​ ಮೇಲೆ ದಾಳಿ ಮಾಡಿ ಹಮಾಸ್​​ ಉಗ್ರರು, ಇಸ್ರೇಲ್​​ನ ಕಿಬ್ಬುಟ್ಜ್‌ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್‌ ಸಂಗೀತ ಉತ್ಸವದ ಮೇಲೆಯೂ ದಾಳಿ ಮಾಡಿದ್ದಾರೆ. ಅಲ್ಲಿದ್ದ ಇಸ್ರೇಲ್​​ ನಾಗರಿಕರನ್ನು ಅಪಹರಣ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಈ ಒತ್ತೆಯಾಳುಗಳಲ್ಲಿ 21 ವರ್ಷದ ಇಸ್ರೇಲಿ ಯುವತಿ ಶೋಹಮ್‌ ಕೂಡ ಒಬ್ಬರು. ಇದೀಗ ಈಕೆಯ ಒಂದು ವಿಡಿಯೋವನ್ನು ಹಮಾಸ್​​ ಉಗ್ರರು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಮಾಸ್​​ ದಾಳಿ ಮಾಡಿದ ವೇಳೆ ಆಕೆಯ ಕೈಗೆ ಗಂಭೀರ ಗಾಯಗಳಾಗಿತ್ತು. ಇದೀಗ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಮಾಸ್​​​ ಉಗ್ರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹಮಾಸ್​​​ ಉಗ್ರರು ಶೋಹಮ್‌ಗೆ ಚಿಕಿತ್ಸೆ ನೀಡುತ್ತಿದ್ದು, ಆಕೆ ಕಾಳಜಿಯನ್ನು ವಹಿಸಿದೆ ಎಂದು ಈ ವಿಡಿಯೋ ಮೂಲಕ ಇಸ್ರೇಲ್​​ಗೆ ತಿಳಿಸಿದೆ. ಇನ್ನು ಶೋಹಮ್‌ ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ. ನನ್ನ ಕುಟುಂಬವನ್ನು ನೋಡಬೇಕು. ಅದಷ್ಟು ಬೇಗ ನನ್ನನ್ನು ಇಲ್ಲಿಂದ ಹೊರಗೆ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾಳೆ. ಈಗಾಗಲೇ ಶೋಹಮ್‌ ಅವರ ಮನೆಯವರಿಗೆ ಆಕೆ ಅಪಹರಣ ಆಗಿರುವ ಬಗ್ಗೆ ಇಸ್ರೇಲ್​​ ಸೇನೆ ತಿಳಿಸಿದೆ.

ಇದನ್ನೂ ಓದಿ:ಇಸ್ರೇಲ್​ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕನ್ನರು ಸಾವು

ಹಮಾಸ್​​ ಉಗ್ರರು ಬಿಡುಗಡೆ ಮಾಡಿದ ವಿಡಿಯೋ 

ಇಸ್ರೇಲ್​​ ಸೈನ್ಯ ಈಗಾಗಲೇ ಹಮಾಸ್​​ ಭಯೋತ್ಪಾದಕ ಒತ್ತೆಯಾಳುಗಳಾಗಿರುವ ಇಸ್ರೇಲಿಗರನ್ನು ರಕ್ಷಣೆ ಮಾಡುವ ಕಾರ್ಯಚರಣೆ ಮುಂದುವರಿದಿದೆ ಎಂದು ಸೈನ್ಯ ಹೇಳಿದೆ. ಇದಕ್ಕೆ ಅನೇಕ ಕಾರ್ಯಚರಣೆ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇಸ್ರೇಲ್​​ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಮಾಸ್​​ನ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅಮಾಯಕ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡುತ್ತಿದೆ. ಹಮಾಸ್​​ ಭಯೋತ್ಪಾದಕರು ಈಗ ಈ ವಿಡಿಯೋವನ್ನು ಏಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಹಮಾಸ್​​ ಯಾವುದೇ ವಿವರಣೆ ನೀಡಿಲ್ಲ. ಈಗಾಗಲೇ 200 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ. ಇನ್ನು 50 ಮಂದಿ ಹಮಾಸ್​​ನ ಬೇರೆ ಬೇರೆ ಸಂಘಟನೆಯ ಕೈಯಲ್ಲಿದ್ದಾರೆ ಎಂದು ಇಸ್ರೇಲ್​​ ಸೇನೆ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ