ಗಾಜಾ ಪಟ್ಟಿಯಲ್ಲಿ ಹಮಾಸ್​ 16 ವರ್ಷಗಳ ಆಳ್ವಿಕೆ ಅಂತ್ಯ, ಗಾಜಾ ನಮ್ಮ ವಶ: ಇಸ್ರೇಲ್​​ ರಕ್ಷಣಾ ಸಚಿವ

|

Updated on: Nov 14, 2023 | 1:03 PM

ಗಾಜಾ ಪಟ್ಟಿಯನ್ನು 16 ವರ್ಷಗಳಿಂದ ಆಳ್ವಿಕೆ ನಡೆಸಿದೆ. ಆದರೆ ಇದೀಗ ಇಸ್ರೇಲ್​​ ವಶವಾಗಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ. ಹಮಾಸ್​​ ಗಾಜಾ ಪಟ್ಟಿ ಅಧಿಕಾರಿವನ್ನು ಕಳೆದುಕೊಂಡಿದೆ. ಉಗ್ರರರು ದಕ್ಷಿಣದ ಕಡೆ ಪಲಾಯವಾಗುತ್ತಿದ್ದಾರೆ. ನಾಗರಿಕರು ಹಮಾಸ್​​​​ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿಡಿಯೋವೊಂದು ಬಿಡುಗಡೆ ಮಾಡಿದ್ದಾರೆ.

ಗಾಜಾ ಪಟ್ಟಿಯಲ್ಲಿ ಹಮಾಸ್​ 16 ವರ್ಷಗಳ ಆಳ್ವಿಕೆ ಅಂತ್ಯ, ಗಾಜಾ ನಮ್ಮ ವಶ: ಇಸ್ರೇಲ್​​ ರಕ್ಷಣಾ ಸಚಿವ
ಸಾಂದರ್ಭಿಕ ಚಿತ್ರ (ಟಿವಿ9 ಕನ್ನಡ ಫೋಟೋ)
Follow us on

ಗಾಜಾ ಪಟ್ಟಿಯನ್ನು(Gaza Strip) 16 ವರ್ಷಗಳಿಂದ ಆಳ್ವಿಕೆ ನಡೆಸಿದೆ. ಆದರೆ ಇದೀಗ ಇಸ್ರೇಲ್​​ ವಶವಾಗಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದ್ದಾರೆ. ಹಮಾಸ್​​ ಗಾಜಾ ಪಟ್ಟಿ ಅಧಿಕಾರಿವನ್ನು ಕಳೆದುಕೊಂಡಿದೆ. ಉಗ್ರರರು ದಕ್ಷಿಣದ ಕಡೆ ಪಲಾಯವಾಗುತ್ತಿದ್ದಾರೆ. ನಾಗರಿಕರು ಹಮಾಸ್​​​​ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿಡಿಯೋವೊಂದು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ಪ್ರಕಟ ಮಾಡಲಾಗಿದೆ. ಅಲ್ಲಿನ ಜನರಿಗೆ ಹಮಾಸ್​​​ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್​ 6ರಂದು ಹಮಾಸ್​​​ ಇಸ್ರೇಲ್​​​ ಮೇಲೆ ದಾಳಿ ಮಾಡಿತ್ತು. ಈ ದಾಳಿಯಿಂದ 1,200 ಇಸ್ರೇಲ್​​ ನಾಗರಿಕರು ಸಾವನ್ನಪ್ಪಿದರು. ಜತೆಗೆ ಇಸ್ರೇಲ್​​​ ಸೇರಿ ಬೇರೆ ಬೇರೆ ದೇಶದ ನಾಗರಿಕರನ್ನು ಒತ್ತೆಯಾಳುಗಾಗಿ ಇಟ್ಟುಕೊಂಡಿದ್ದರು. ಇದು ಇಸ್ರೇಲ್​​​ನ 75 ವರ್ಷದ ಇತಿಹಾಸದಲ್ಲಿ ನಡೆದ ಮಾರಣಾಂತಿಕ ಘಟನೆ ಎಂದು ಯೋವ್ ಗ್ಯಾಲಂಟ್ ಹೇಳಿದ್ದಾರೆ.

ಹಮಾಸ್​​ ಪ್ರಾರಂಭಿಸಿದನ್ನು ಇಸ್ರೇಲ್​​ ಅಂತ್ಯ ಮಾಡಲು ಮುಂದಾಗಿದೆ. ಇಸ್ರೇಲ್​​​ ಹಮಾಸ್​​ಗೆ ಪ್ರತ್ಯುತ್ತರ ನೀಡಿದೆ. 4000 ಕ್ಕೂ ಹೆಚ್ಚು ಹಮಾಸ್​​​​ ಉಸಿರು ನಿಲ್ಲಿಸಿದೆ. ಹಮಾಸ್​​​ ತಾಣಗಳ ಮೇಲೆ ಇಸ್ರೇಲ್​​ ದಾಳಿ ಮಾಡಿ ಧ್ವಂಸ ಮಾಡಿದೆ. ಒತ್ತೆಯಾಳುಗಳನ್ನು ರಕ್ಷಣೆ ಮಾಡಿ ಇಸ್ರೇಲ್​​​ಗೆ ಕರೆದುಕೊಂಡು ಬಂದಿದ್ದಾರೆ. ಇದೀಗ ಹಮಾಸ್​​​ ದೊಡ್ಡ ಬಲವಾಗಿದ್ದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆ ಮೇಲೆ ಇಸ್ರೇಲ್​​ ದಾಳಿ ಮಾಡಿದೆ. ಅಲ್ಲಿರುವ ಒತ್ತೆಯಾಳುಗಳನ್ನು ಕಾಪಾಡುವ ಕೆಲಸ ಮಾಡುತ್ತಿದೆ. ಹಮಾಸ್​​ನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೆ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್​​ ಹೇಳಿದೆ.

ಇನ್ನು ಇಸ್ರೇಲ್​​​​ ಗಾಜಾದಲ್ಲಿರುವ ಹಮಾಸ್​​ ತಾಣಗಳ ಮೇಲೆ ದಾಳಿ ಮಾಡಿತ್ತು. ಇದಕ್ಕೂ ಮುನ್ನ ಗಾಜಾ ಪಟ್ಟಿ ನಾಗರಿಕರನ್ನು ಜಾಗ ಖಾಲಿ ಮಾಡುವಂತೆ ಎಚ್ಚರಿಕೆಯನ್ನು ನೀಡಿತ್ತು. ಇನ್ನು ಅನೇಕರು ಗಾಜಾದಲ್ಲಿರುವ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾದಲ್ಲಿ ಆಶ್ರಯ ಪಡೆದರು. ಆದರೆ ಅಲ್ಲಿ ಈಗಾಗಲೇ ಔಷಧಿ, ಆಹಾರ, ವಿದ್ಯುತ್​​ ಇಲ್ಲದೆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಕದನ ವಿರಾಮ ಒಪ್ಪಂದದ ಬಳಿಕ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್​

ಇನ್ನು ಅನೇಕ ದೇಶಗಳು ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡುವಂತೆ ಹೇಳಿತ್ತು. ಆದರೆ ಈ ಒತ್ತಡವನ್ನು ಇಸ್ರೇಲ್​​​ ವಿರೋಧಿಸಲೇ ಬಂದಿದೆ. ಒಂದು ವೇಳೆ ಕದನ ವಿರಾಮವನ್ನು ಪರಿಗಣಿಸಬೇಕಾದರೆ ಹಮಾಸ್ ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ 240 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಂದಿರುಗಿಸಬೇಕೆಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್​​​ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ