Gaza Strip ಗಾಜಾ ಪಟ್ಟಿ ಮೇಲೆ ಇಸ್ರೇಲ್ ಮಿಲಿಟರಿ ವೈಮಾನಿಕ ದಾಳಿ

"ಐಡಿಎಫ್ (ಇಸ್ರೇಲಿ ಮಿಲಿಟರಿ) ಪ್ರಸ್ತುತ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುತ್ತಿದೆ. ಇಸ್ರೇಲಿ ಸೇನಾಪಡೆ ನೆಲೆಸಿರುವಲ್ಲಿ ವಿಶೇಷ ಪರಿಸ್ಥಿತಿಯನ್ನು ಘೋಷಿಸಲಾಗಿದೆ"

Gaza Strip  ಗಾಜಾ ಪಟ್ಟಿ ಮೇಲೆ ಇಸ್ರೇಲ್ ಮಿಲಿಟರಿ ವೈಮಾನಿಕ ದಾಳಿ
ಗಾಜಾ ಮೇಲೆ ವೈಮಾನಿಕ ದಾಳಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 05, 2022 | 8:40 PM

ಗಾಜಾ: ಇಸ್ರೇಲಿ ಮಿಲಿಟರಿ (Israeli military) ಶುಕ್ರವಾರ ಗಾಜಾದ (Gaza) ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ಸೆಂಟ್ರಲ್ ಗಾಜಾ ನಗರದಲ್ಲಿ ಪ್ಯಾಲೆಸ್ತೀನ್ ಜನರು ಇದನ್ನು ನೋಡಿದ್ದಾರೆ. “ಐಡಿಎಫ್ (ಇಸ್ರೇಲಿ ಮಿಲಿಟರಿ) ಪ್ರಸ್ತುತ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುತ್ತಿದೆ. ಇಸ್ರೇಲಿ ಸೇನಾಪಡೆ ನೆಲೆಸಿರುವಲ್ಲಿ ವಿಶೇಷ ಪರಿಸ್ಥಿತಿಯನ್ನು ಘೋಷಿಸಲಾಗಿದೆ” ಎಂದು ಹೇಳಿಕೆ ತಿಳಿಸಿದೆ. ಸೆಂಟ್ರಲ್ ರಿಮಲ್ ನೆರೆಹೊರೆಯ ಅಪಾರ್ಟ್ಮೆಂಟ್ ಮೇಲೆ ವಾಯುದಾಳಿ ನಡೆದಿದೆ ಎಂದು ಗಾಜಾ ನಗರದಲ್ಲಿನ ಪ್ಯಾಲೆಸ್ಟೀನಿಯಾದವರು ಸುದ್ದಿಸಂಸ್ಥೆ ಎಎಫ್​​ಪಿಗೆ ತಿಳಿಸಿದ್ದಾರೆ. ಪ್ಯಾಲೆಸ್ತೀನಿಯನ್ ಎನ್‌ಕ್ಲೇವ್‌ನ ಭದ್ರತಾ ಮೂಲಗಳು ಭೂಪ್ರದೇಶದ ಹಲವಾರು ಭಾಗಗಳಲ್ಲಿ ವಾಯುದಾಳಿ ನಡೆದಿದೆ ಎಂದು ತಿಳಿಸಿವೆ. ಇಸ್ರೇಲ್ ಗಾಜಾದೊಂದಿಗಿನ ತನ್ನ ಎರಡು ಗಡಿ ಕ್ರಾಸಿಂಗ್ ಮುಚ್ಚಿದ ನಾಲ್ಕು ದಿನಗಳ ನಂತರ ಮತ್ತು ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಗಡಿ ಸಮೀಪ ವಾಸಿಸುವ ಇಸ್ರೇಲಿ ನಾಗರಿಕರ ಸಂಚಾರ ನಿರ್ಬಂಧಿಸಿದ ನಾಲ್ಕು ದಿನಗಳ ನಂತರ ಈ ದಾಳಿ ನಡೆದಿದೆ.

ಈ  ದಾಳಿಯಲ್ಲಿ   ಹಲವಾರು ಸಾವು ನೋವುಗಳು ಸಂಭವಿಸಿವೆ ಮತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಹೆಚ್ಚು ಜನನಿಬಿಡ ಪ್ರದೇಶದಲ್ಲಿರುವ ಕಟ್ಟಡದ ಛಾವಣಿಯಿಂದ ಕಪ್ಪು ಹೊಗೆ ಬರುತ್ತಿರುವ ವಿಡಿಯೊಗಳನ್ನು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ಆಕ್ರಮಿತ ವೆಸ್ಟ್ ಬ್ಯಾಂಕ್ ನಗರ ಜೆನಿನ್‌ನಲ್ಲಿ ನಡೆದ ದಾಳಿಯ ಸಮಯದಲ್ಲಿ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಗುಂಪಿನ ಹಿರಿಯ ನಾಯಕ ಬಸ್ಸಮ್ ಅಲ್-ಸಾದಿಯನ್ನು ಇಸ್ರೇಲ್ ಬಂಧಿಸಿದ ನಂತರ ಈ ವೈಮಾನಿಕ ದಾಳಿ ನಡೆದಿದೆ. ಗಾಜಾದಲ್ಲಿ ಭದ್ರಕೋಟೆಯನ್ನು ಹೊಂದಿರುವ ಗುಂಪಿನಿಂದ ಪ್ರತೀಕಾರದ ದಾಳಿಯ ಭಯದಿಂದ ಎಲ್ಲಾ ಗಾಜಾ ಕ್ರಾಸಿಂಗ್‌ಗಳು ಮತ್ತು ಕೆಲವು ಹತ್ತಿರದ ರಸ್ತೆಗಳನ್ನು ಮುಚ್ಚಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗಾಜಾದ ಹೊರಗೆ ಚಿಕಿತ್ಸೆ ಅಗತ್ಯವಿರುವ ಪ್ರತಿದಿನ 50 ರೋಗಿಗಳ ಮೇಲೆ ಇದು ಪರಿಣಾಮ ಬೀರಿದೆ.

ಶತ್ರುಗಳು ನಮ್ಮ ಜನರ ವಿರುದ್ಧ ಮತ್ತು ನಮ್ಮ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ್ದಾರೆ. ನಾವು ನಮ್ಮನ್ನು ಮತ್ತು ನಮ್ಮ ಜನರನ್ನು ರಕ್ಷಿಸಿಕೊಳ್ಳುತ್ತೇವೆ” ಎಂದು ಇಸ್ಲಾಮಿಕ್ ಜಿಹಾದ್ ಹೇಳಿಕೆಯಲ್ಲಿ ತಿಳಿಸಿದೆ.  2007 ರಲ್ಲಿ ಹಮಾಸ್ ಗಾಜಾವನ್ನು ಆಳಲು ಪ್ರಾರಂಭಿಸಿದಾಗಿನಿಂದ, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಇಸ್ರೇಲ್ ಗಾಜಾಪಟ್ಟಿಯ ಭೂಮಿ, ವಾಯು ಮತ್ತು ಸಮುದ್ರ ದಿಗ್ಬಂಧನ ಮಾಡಿದೆ.

ಇತ್ತೀಚಿನ ಮುಚ್ಚುವಿಕೆಯು ಗಾಜಾದ ಏಕೈಕ ವಿದ್ಯುತ್ ಸ್ಥಾವರವನ್ನು ಪೂರೈಸುವ ಇಂಧನ ಟ್ರಕ್‌ಗಳಿಗೆ ಪ್ರವೇಶವನ್ನು ಅಡ್ಡಪಡಿಸಿದೆ.ಕ್ರಾಸಿಂಗ್‌ಗಳನ್ನು ಮತ್ತೆ ತೆರೆಯದಿದ್ದರೆ 48 ಗಂಟೆಗಳ ಒಳಗೆ ಅದನ್ನು ಮುಚ್ಚಬೇಕಾಗುತ್ತದೆ ಎಂದು ಅಧಿಕಾರಿಗಳು ಗುರುವಾರ ಎಚ್ಚರಿಸಿದ್ದಾರೆ. ಈಗಾಗಲೇ ದಿನಕ್ಕೆ ಕೇವಲ 10 ಗಂಟೆಗಳ ವಿದ್ಯುತ್ ಮಾತ್ರ ಲಭಿಸುತ್ತಿರುವ ಗಾಜಾ ನಿವಾಸಿಗಳು ಸ್ಥಾವರವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಮತ್ತಷ್ಟು ವಿದ್ಯುತ್ ಕೊರತೆ ಎದುರಿಸಬೇಕಾಗುತ್ತದೆ.ಇದು ಎರಡು ದಶಲಕ್ಷಕ್ಕೂ ಹೆಚ್ಚು ಜನರ ದೈನಂದಿನ ಜೀವನ ಮತ್ತು ಪ್ರಮುಖ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಗಾಜಾದ ವಿದ್ಯುತ್ ವಿತರಣಾ ಕಂಪನಿಯ ಮೊಹಮ್ಮದ್ ಥಾಬಿತ್ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ

Published On - 8:11 pm, Fri, 5 August 22

ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?