Viral Video: ನಿರೂಪಕಿಯ ಪ್ರಶ್ನೆಗೆ ನೇರ ಪ್ರಸಾರದಲ್ಲೇ ಎಂಜಲು ಉಗುಳಿದ ಪಾಕ್ ಮಾಜಿ ಸಚಿವ; ವಿಡಿಯೋ ವೈರಲ್
Pakistan News: ಟಿವಿ ನಿರೂಪಕಿ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಬಗ್ಗೆ ಮಾತನಾಡುವಾಗ ಶೇಖ್ ರಶೀದ್ ಅಹ್ಮದ್ ನೇರ ಪ್ರಸಾರದ ವೇಳೆ ಉಗುಳಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ (Sheikh Rasheed Ahmad) ಟಿವಿ ಚರ್ಚೆಯ ನೇರ ಪ್ರಸಾರದ ವೇಳೆ ಕ್ಯಾಮೆರಾದ ಎದುರು ಉಗುಳಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಟಿವಿ ನಿರೂಪಕಿ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ (Rana Sanaullah) ಬಗ್ಗೆ ಮಾತನಾಡುವಾಗ ಶೇಖ್ ರಶೀದ್ ಅಹ್ಮದ್ ನೇರ ಪ್ರಸಾರದ ವೇಳೆ ಉಗುಳಿದ್ದಾರೆ. ಲೈವ್ ಟಿವಿ ಪ್ರಸಾರದಲ್ಲಿ ಈ ರೀತಿ ವರ್ತಿಸಿರುವುದಕ್ಕೆ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಟಿವಿಯಲ್ಲಿ ಚರ್ಚೆ ವೇಳೆ ಅಹ್ಮದ್ ಅವರಿಗೆ ಫೋನ್ ಮಾಡಿದ ನಿರೂಪಕಿ ಪಾಕಿಸ್ತಾನದ ಸಚಿವ ರಾಣಾ ಸನಾವುಲ್ಲಾ ಬಗ್ಗೆ ಪ್ರಶ್ನೆ ಕೇಳಿದರು. ಆಗ ಮಾಜಿ ಸಚಿವ ಅಹ್ಮದ್ ಸನಾವುಲ್ಲಾ ವಿರುದ್ಧ ವಾಗ್ದಾಳಿ ನಡೆಸಿದರು. “ರಾಣಾ ಸನಾವುಲ್ಲಾನನ್ನು ನಿಯಂತ್ರಿಸಲು ನಾನು ಜನರಲ್ ಕಮರ್ ಬಾಜ್ವಾ ಅವರನ್ನು ಒತ್ತಾಯಿಸುತ್ತೇನೆ. ಯಾರಾದರೂ ಅವನಿಗೆ ಗೌರವದಿಂದ ಸೆಲ್ಯೂಟ್ ಮಾಡಲು ಸಾಧ್ಯವೇ? ಭದ್ರತಾ ಪಡೆಗಳು ಅವನಿಗೆ ಸೆಲ್ಯೂಟ್ ಮಾಡುತ್ತಾರೆಯೇ? ಭದ್ರತಾ ಪಡೆಗಳು ಕೂಡ ಸನಾವುಲ್ಲಾಗೆ ಥೂ ಎಂದು ಉಗುಳುತ್ತವೆ” ಎಂದು ಹೇಳುತ್ತಾ ಅಹ್ಮದ್ ಟಿವಿ ಕ್ಯಾಮೆರಾ ಎದುರು ಎಂಜಲನ್ನು ಉಗುಳಿದ್ದಾರೆ.
His new portfolio should be: minister for spitting on live TV. pic.twitter.com/lLudonNcux
— Naila Inayat (@nailainayat) August 3, 2022
ಇದನ್ನೂ ಓದಿ: Viral Video: ಅಪ್ಪನ ಸಾವಿನ ಬಳಿಕ ಜೊಮ್ಯಾಟೋ ಡೆಲಿವರಿ ಬಾಯ್ ಆದ 7 ವರ್ಷದ ಬಾಲಕ; ವಿಡಿಯೋ ವೈರಲ್
ಈ ಘಟನೆಯ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ 25,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 700ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಈ ಘಟನೆಯನ್ನು ನೆಟಿಜನ್‌ಗಳು ಖಂಡಿಸಿದ್ದಾರೆ.