ಬೈಕ್, ಕಾರುಗಳಲ್ಲಿ ಓಡಾಡುವಾಗ ನಾಯಿಗಳು ಅಡ್ಡ ಬರೋದು ಸಾಮಾನ್ಯ. ಆದರೆ ಕಳೆದವಾರ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಹೌಸ್ಟನ್ ನಗರ (Houston City) ನಿವಾಸಿಗಳು ರಸ್ತೆಯ ಮೇಲೆ ಒಬ್ಬ ಅಪರೂಪದ ಪಾದಾಚಾರಿಯನ್ನು (pedestrian) ಕಂಡು ಸೋಜಿಗಕ್ಕೊಳಗಾದರು. ಈ ಪಾದಾಚಾರಿ ಹಲವಾರು ಕಡೆ ಟ್ರಾಫಿಕ್ ಸಂಚಾರಕ್ಕೂ ಅಡಚಣೆಯನ್ನುಂಟು ಮಾಡಿತು. ಅಂದಹಾಗೆ, ಅದು ಯಾರು ಅಂತ ನಿಮಗೆ ಇಲ್ಲಿನ ಟ್ವಿಟರ್ ಪೋಸ್ಟ್ಗಳಲ್ಲಿ ಕಾಣಿಸುತ್ತದೆ. ಹೌದು, ಮಾರಾಯ್ರೇ, ಈಮು ಪಕ್ಷಿಯು (Emu bird) ಹೌಸ್ಟನ್ ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ತಿರುಗಾಡಿದೆ. ವಾಹನಗಳು ತನ್ನ ಹತ್ತಿರಕ್ಕೆ ಬಂದಾಗ ಢಿಕ್ಕಿಯಾಗದ ಹಾಗೆ ತಪ್ಪಿಸಿಕೊಂಡು ಓಡಿದೆ, ಕೆಲ ಸಮಯದವರೆಗೆ ಪೊಲೀಸರನ್ನೂ ಆಟವಾಡಿಸಿದೆ ಎಂದು ಹೌಸ್ಟನ್ ಕ್ರಾನಿಕಲ್ ಪತ್ರಿಕೆ ವರದಿ ಮಾಡಿದೆ.
Yall it’s a WHOLE ostrich on the Northside (Beltway8 & Imperial Valley) ????? pic.twitter.com/MzLLzQMIJZ
— Vaccine Shaw, Atty At Law ⚖️ ?? (@RatchetNerd_) July 14, 2022
ಸ್ವಲ್ಪ ಸಮಯದ ಬಳಿಕ ಹಾರಲಾಗದ ಈ ಪಕ್ಷಿಯನ್ನು ಪೊಲೀಸರು ಹಿಡಿದು ಅದನ್ನು ಸಾಕಿದ ಮಾಲೀಕರಿಗೆ ಒಪ್ಪಿಸಿದರು.
ಈಮು ರಸ್ತೆ ಮೇಲೆ ನಡೆಯುವ, ವಾಹನಗಳಿಂದ ತಪ್ಪಿಸಿಕೊಂಡು ಓಡುವ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪೊಲೀಸ್ ವ್ಯಾನ್ಗಳು ಆಮೆಗತಿಯಲ್ಲಿ ಅದರ ಹಿಂದೆ ಹೋಗುತ್ತಿರುವುದನ್ನು ಕೂಡ ವಿಡಿಯೋಗಳಲ್ಲಿ ನೋಡಬಹುದು. ಜನ ಮೊದಲಿಗೆ ಇದನ್ನು ಆಸ್ಟ್ರಿಚ್ ಅಂದುಕೊಂಡಿದ್ದರು ಅಂತ ಕಾಣುತ್ತೆ.
ಯಾಕೆಂದರೆ ಒಂದು ಪೋಸ್ಟ್ ನ ಶೀರ್ಷಿಕೆ ‘ನಗರದ ಉತ್ತರ ಭಾಗದಲ್ಲಿ ಓಡಾಡುತ್ತಿರುವ ಆಸ್ಟ್ರಿಚ್’ ಅಂತ ಬರೆದುಕೊಂಡಿದ್ದಾರೆ.
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಿಹೋದ ಈಮುವನ್ನು ಆ ಭಾಗದ ಜನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಕೀಟಲೆ ಸ್ವಭಾವದ ಪಕ್ಷಿಯ ಇಮೇಜನ್ನು ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವ ವ್ಯಕ್ತಿಯೊಬ್ಬ, ‘350 ನಾರ್ಥ್ ಸ್ಯಾಮ್ ಹೌಸ್ಟನ್ ಪಾರ್ಕ್ವೇ ಬಳಿ ತಪ್ಪಿಸಿಕೊಂಡಿರುವ ಈಮುವೊಂದು ಓಡಾಡುತ್ತಿದೆ. ತೊಂದರೆಯಲ್ಲಿರುವ ಇದಕ್ಕೆ ಯಾರಾದರೂ ಸಹಾಯ ಮಾಡಬಲ್ಲಿರಾ? ಮ್ಯಾಕ್ಡೊನಾಲ್ಡ್ ಔಟ್ ಲೆಟ್ ಬಳಿ ಅದು ಇರಬಹುದು ಅಂತ ಭಾವಿಸುತ್ತೇನೆ,’ ಅಂತ ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ.
@KHOU there is an emu loose near 350 North Sam Houston Parkway. Can someone get this guy some help. Not sure he should be hanging around a McDonald’s ? pic.twitter.com/SFscCeuWmu
— Shy LaBeef (@TheEthelBeavers) July 14, 2022
ಈಮು ತನ್ನ ಪಾಡಿಗೆ ತಾನು ನಗರ ಪ್ರದಕ್ಷಿಣೆ ಹಾಕುತ್ತಿದ್ದರೆ, ದಾರಿಹೋಕರು ಅವಾಕ್ಕಾಗಿ ಅದನ್ನು ನೋಡುತ್ತಾ ನಿಂತುಬಿಟ್ಟಿದ್ದಾರೆ. ಅಂತಿಮವಾಗಿ ಹೌಸ್ಟನ್ ಪೊಲೀಸರು ಕಾರ್ಯಾಚರಣೆ ಇಳಿದು ತಮ್ಮ ಕಾರುಗಳಲ್ಲಿ ಅದರ ಬೆನ್ನಟ್ಟಿದ್ದಾರೆ.
ಫೇಸ್ಬುಕ್ ನಲ್ಲಿ ವ್ಯಕ್ತಿಯೊಬ್ಬರು ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಪೊಲೀಸರ ಕಾರುಗಳು ಈಮುವನ್ನು ನಿಧಾನಗತಿಯಲ್ಲಿ ಬೆನ್ನಟ್ಟಿರುವುದು ಕಾಣುತ್ತದೆ.
ಆದರೆ ಪೊಲೀಸರ ಕಾರುಗಳು ಹತ್ತಿರ ಬಂದ ತಕ್ಷಣ ಅದು ಪುನಃ ಓಡಲಾರಂಭಿಸುತ್ತದೆ!
ಈಮುವೊಂದನ್ನು ಪೊಲೀಸರು ಚೇಸ್ ಅಪರೂಪದ ವಿಡಿಯೋಗಳಿ ನಿಮಗೆ ಮನರಂಜನೆ ನೀಡಬಹುದು.