ಮೂಗಿನ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ರಷ್ಯನ್ ಮಹಿಳೆಯೊಬ್ಬಳು ತನ್ನ 5-ದಿನದ ಶಿಶುವನ್ನು ಮಾರಾಟ ಮಾಡಿದಳು
ಮಾನವ ಕಳ್ಳಸಾಗಣೆ ಭಾಗಿಯಾಗಿರುವ ಸಂಶಯದ ಮೇರೆಗೆ ಪೊಲೀಸರು ಮೇ ತಿಂಗಳಲ್ಲಿ ಅವಳನ್ನು ವಶಕ್ಕೆ ಪಡೆದಿದ್ದರು. ದಿ ಡೈಲಿ ಸ್ಟಾರ್ ಪತ್ರಿಕೆಯ ವರದಿಯ ಪ್ರಕಾರ ಆಕೆ ರಷ್ಯಾದ ಡಾಗೆಸ್ತಾನ್ ಗಣತಂತ್ರದ ದಕ್ಷಿಣ ಬಾಗಕ್ಕಿರುವ ಕಸ್ಪಿಸ್ಕ್ ನಗರದಲ್ಲಿ ಮಗುವಿಗೆ ಜನ್ಮ ನೀಡಿದಳು.

ಮೂಗನ್ನು ಸುಂದರಗೊಳಿಸಿಕೊಳ್ಳಲು (ರಿನೋಪ್ಲಾಸ್ಟಿ) (rhinoplasty) ಅಗತ್ಯವಿದ್ದ ಕಾಸ್ಮೆಟಿಕ್ ಸರ್ಜರಿಯ ಸುಮಾರು 3 ಲಕ್ಷ ರೂ. ಗಳ (₹ 3,581) ವೆಚ್ಚ ಭರಿಸಲು ತನ್ನ 5 ದಿನದ ಶಿಶುವನ್ನು (infant) ಮಾರಾಟ ಮಾಡಿದ ರಷ್ಯನ್ ಮಹಿಳೆ (Russian woman) ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಹೆಸರು ಬಹಿರಂಗಪಡಿಸಿರದ 33-ವರ್ಷ ವಯಸ್ಸಿನ ಮಹಿಳೆಯನ್ನು ಮಾನವ ಕಳ್ಳಸಾಗಾಣಿಕೆ ಅರೋಪದಲ್ಲಿ ಬಂಧಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್ 25 ರಂದು ಗಂಡುಮಗುವೊಂದಕ್ಕೆ ಜನ್ಮ ನೀಡಿದ ಮಹಿಳೆಯು ಕೇವಲ 5 ದಿನಗಳ ಬಳಿಕ ಮಗುವನ್ನು ದತ್ತು ಸ್ವೀಕರಿಸಿ ಪೋಷಕರೆನಿಸಿಕೊಳ್ಳುವ ತವಕದಲ್ಲಿದ್ದ ಸ್ಥಳೀಯ ದಂಪತಿಗೆ ಮಾರಿ ಬಿಟ್ಟಿದ್ದಾಳೆ.
ಮಾನವ ಕಳ್ಳಸಾಗಣೆ ಭಾಗಿಯಾಗಿರುವ ಸಂಶಯದ ಮೇರೆಗೆ ಪೊಲೀಸರು ಮೇ ತಿಂಗಳಲ್ಲಿ ಅವಳನ್ನು ವಶಕ್ಕೆ ಪಡೆದಿದ್ದರು. ದಿ ಡೈಲಿ ಸ್ಟಾರ್ ಪತ್ರಿಕೆಯ ವರದಿಯ ಪ್ರಕಾರ ಆಕೆ ರಷ್ಯಾದ ಡಾಗೆಸ್ತಾನ್ ಗಣತಂತ್ರದ ದಕ್ಷಿಣ ಬಾಗಕ್ಕಿರುವ ಕಸ್ಪಿಸ್ಕ್ ನಗರದಲ್ಲಿ ಮಗುವಿಗೆ ಜನ್ಮ ನೀಡಿದಳು. ಆದರೆ 5 ದಿನಗಳ ಬಳಿಕ ಮಗುವೊಂದಕ್ಕಾಗಿ ಹಪಹಪಿಸುತ್ತಿದ್ದ ಸ್ಥಳೀಯ ದಂಪತಿಯನ್ನು ಭೇಟಿಯಾಗಿ ಮಗುವನ್ನು 200,000 ರೂಬಲ್ ಗಳಿಗೆ (₹3,200) ಅವರಿಗೆ ಮಾರಲು ಒಪ್ಪಿಕೊಂಡಳು.
ಪತ್ರಿಕೆಯ ವರದಿ ಪ್ರಕಾರ ಮಗುವನ್ನು ಹಸ್ತಾಂತರಿಸುವ ದಿನ ಅವಳು ಮಗುವಿನ ಮೇಲಿನ ತನ್ನ ಹಕ್ಕನ್ನು ಅವರಿಗೆ ಒಪ್ಪಿಸಿ ಅದಕ್ಕಾಗಿ ₹360 ಪ್ರತ್ಯೇಕವಾಗಿ ಪಡೆದಳು. ಮಗುವನ್ನು ಪಡೆದ ದಂಪತಿಯಿಂದ ಮೇ 26 ರಂದು ಪೂರ್ತಿ ಹಣ ಪಡೆದಳೆಂದು ಪತ್ರಿಕೆಯ ವರದಿ ತಿಳಿಸುತ್ತದೆ. ಆದರೆ ಕೆಲವೇ ದಿನಗಳ ನಂತರ ಪೊಲೀಸರಿಗೆ ಇದರ ಬಗ್ಗೆ ಸುಳಿವು ಸಿಕ್ಕಿದೆ. ರಷ್ಯನ್ ಮಹಿಳೆಯ ಜೊತೆಗೆ ಕಾನೂನು ಬಾಹಿರವಾಗಿ ದತ್ತುಪಡೆದ ದಂಪತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ರಷ್ಯನ್ ಮಹಿಳೆ ತಮಗೆ ಮಗುವಿನ ಜೊತೆ ಅದರ ಜನ್ಮ ಪ್ರಮಾಣ ಪತ್ರವನ್ನು ಕೂಡ ನೀಡಿದಳೆಂದು ಬಂಧನ ಬಳಿಕ ಹೊಸ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಮಗುವನ್ನು ಖರೀದಿಸಲು ತಾವು ಆಕೆಗೆ ಹಂಣ ನೀಡಲಿಲ್ಲ ಅದರೆ ಸರಾಗವಾಗಿ ಉಸಿರಾಡಲು ಮೂಗಿನ ಸರ್ಜರಿ ಮಾಡಿಸಬೇಕಿದೆ ಎಂದು ಆಕೆ ಹೇಳಿದ್ದಕ್ಕೆ ಸಂತೋಷದಿಂದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ.
ಡಾಗೆಸ್ತಾನ್ ಗಣತಂತ್ರಕ್ಕೋಸ್ಕರ ರಷ್ಯನ್ ಫೆಡರೇಶನ್ನಿನ ತನಿಖಾ ತಂಡವು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ರಷ್ಯನ್ ಕ್ರಿಮಿನಲ್ ಕೋಡ್ ಅನುಚ್ಛೇದ ಹೆಚ್ ಭಾಗ 2ರ ಅಡಿಯಲ್ಲಿ ಮಹಿಳೆ ಅಪರಾಧವೆಸಗಿದ್ದಾಳೆ.
ಶಂಕಿತ ಮಹಿಳೆಯನ್ನು ರಷ್ಯನ್ ಫೆಡರೇಶನ್ನಿನ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ 91 ಮತ್ತು 92 ರ ಅಡಿಯಲ್ಲಿ ಬಂಧಿಸಲಾಗಿದೆ, ಎಂದು ಹೇಳಿಕೆ ತಿಳಿಸುತ್ತದೆ.