AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಯಿ ಕಾಡ್ಗಿಚ್ಚು: ಮೃತರ ಸಂಖ್ಯೆ 53ಕ್ಕೆ ಏರಿಕೆ, ಬದುಕುಳಿದವರಿಗಾಗಿ ಶೋಧ

Hawaii Wildfire : ಅಮೆರಿಕದ ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿರುವ ಹವಾಯಿ ಪ್ರಾಂತ್ಯದ ದ್ವೀಪಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅಮೆರಿಕದ ಹವಾಯಿಯಲ್ಲಿರುವ ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ

ಹವಾಯಿ ಕಾಡ್ಗಿಚ್ಚು: ಮೃತರ ಸಂಖ್ಯೆ 53ಕ್ಕೆ ಏರಿಕೆ, ಬದುಕುಳಿದವರಿಗಾಗಿ ಶೋಧ
ಕಾಡ್ಗಿಚ್ಚು Image Credit source: Jagaran
ನಯನಾ ರಾಜೀವ್
|

Updated on: Aug 11, 2023 | 9:39 AM

Share

ಅಮೆರಿಕದ ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿರುವ ಹವಾಯಿ ಪ್ರಾಂತ್ಯದ ದ್ವೀಪಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಅಮೆರಿಕದ ಹವಾಯಿಯಲ್ಲಿರುವ ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ವೇಗವಾಗಿ ಅರಣ್ಯದ ತುಂಬೆಲ್ಲಾ ಹಬ್ಬುತ್ತಿದೆ. ಜನರನ್ನು ಸ್ಥಳಾಂತರಿಸುವ ಸಮಯದಲ್ಲಿ ಬೆಂಕಿಗೆ ಸಿಲುಕಿ ಲಾಹೈನಾ ಪಟ್ಟಣದಲ್ಲಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದಾರೆ, ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ.

ಕಾಡಿನಲ್ಲಿ ಭೀಕರ ಬೆಂಕಿಯಿಂದಾಗಿ 14000 ಕ್ಕೂ ಹೆಚ್ಚು ಜನರನ್ನು ಮಾಯಿ ದ್ವೀಪದಿಂದ ಸ್ಥಳಾಂತರಿಸಲಾಗಿದೆ. ಲಹೈನಾದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಮತ್ತು ಮಾಯಿಯಲ್ಲಿ ಸುಮಾರು 11,000 ಜನರು ಕತ್ತಲೆಯಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೇ ಅಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

1961 ರಲ್ಲಿ ಸುನಾಮಿಯು ಬಿಗ್ ಐಲ್ಯಾಂಡ್‌ನಲ್ಲಿ 61 ಜನರ ಸಾವಿಗೆ ಕಾರಣವಾಗಿತ್ತು, ಇದಿಗ ಅಂಥದ್ದೇ ನೈಸರ್ಗಿಕ ವಿಕೋಪ ಸಂಭವಿಸಿದೆ. ಬಂದರಿನಲ್ಲಿರುವ ಹಡಗುಗಳು ಸುಟ್ಟು ಕರಕಲಾಗಿವೆ, ಇಡೀ ಪಟ್ಟಣದ ತುಂಬೆಲ್ಲಾ ದಟ್ಟ ಹೊಗೆ ಆವರಿಸಿಕೊಂಡಿದೆ.

ಅಂಗಡಿ ಮುಂಗಟ್ಟುಗಳು, ಮನೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲವೂ ನಾಶವಾಗಿ ಹೋಗಿವೆ. ತುಂಬಾ ಬೇಸಿಗೆ ಇತ್ತು, ಚಂಡಮಾರುತದ ಬಲವಾದ ಚಂಡಮಾರುತದ ಗಾಳಿಯಿಂದಾಗಿ ಇಡೀ ಕಾಡಿಗೆ ಬೆಂಕಿ ಹಬ್ಬಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More