Mexico Heat Wave: ಮೆಕ್ಸಿಕೋದಲ್ಲಿ ಉಷ್ಣ ಅಲೆಯಿಂದಾಗಿ 100ಕ್ಕೂ ಅಧಿಕ ಮಂದಿ ಸಾವು

ಮೆಕ್ಸಿಕೋದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದ್ದು, ಉಷ್ಣ ಅಲೆ(Heat Wave)ಯಿಂದಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Mexico Heat Wave: ಮೆಕ್ಸಿಕೋದಲ್ಲಿ ಉಷ್ಣ ಅಲೆಯಿಂದಾಗಿ 100ಕ್ಕೂ ಅಧಿಕ ಮಂದಿ ಸಾವು
ಉಷ್ಣ ಅಲೆ

Updated on: Jun 30, 2023 | 8:54 AM

ಮೆಕ್ಸಿಕೋದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದ್ದು, ಉಷ್ಣ ಅಲೆ(Heat Wave)ಯಿಂದಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಕ್ಸಿಕೊದಲ್ಲಿ ಕಳೆದ ಎರಡು ವಾರಗಳಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬಹಳಷ್ಟು ಮಂದಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.

ಮೂರನೇ ಎರಡರಷ್ಟು ಸಾವುಗಳು ಜೂನ್ 18-24 ರ ವಾರದಲ್ಲಿ ಸಂಭವಿಸಿವೆ, ಉಳಿದವು ಹಿಂದಿನ ವಾರದಲ್ಲಿ ಸಂಭವಿಸಿವೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಶಾಖದ ಅಲೆಯಿಂದಾಗಿ ಓರ್ವ ಮೃತಪಟ್ಟಿದ್ದರು.

ಬಹುತೇಕ ಎಲ್ಲಾ ಸಾವುಗಳು ಹೀಟ್ ಸ್ಟ್ರೋಕ್‌ಗೆ ನಿಂದಲೇ ಸಂಭವಿಸಿದ್ದು, ಬೆರಳೆಣಿಕೆಯಷ್ಟು ನಿರ್ಜಲೀಕರಣದಿಂದ ಸಂಭವಿಸಿವೆ. ಸುಮಾರು ಶೇ. 64ರಷ್ಟು ಸಾವುಗಳು ಟೆಕ್ಸಾಸ್‌ನ ಗಡಿಯಲ್ಲಿರುವ ಉತ್ತರ ರಾಜ್ಯವಾದ ನ್ಯೂವೊ ಲಿಯಾನ್‌ನಲ್ಲಿ ಸಂಭವಿಸಿವೆ.

ಮತ್ತಷ್ಟು ಓದಿ: ಉಷ್ಣ ಅಲೆ ಏಳುವ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ; ಬಿಸಿಲಿನಿಂದ ರಕ್ಷಿಸಿಕೊಳ್ಳಿ, ಈ ಅಂಶಗಳನ್ನು ತಪ್ಪದೆ ಪಾಲಿಸಿ

ಉಳಿದವುಗಳಲ್ಲಿ ಹೆಚ್ಚಿನವು ಗಲ್ಫ್ ಕರಾವಳಿಯ ನೆರೆಯ ತಮೌಲಿಪಾಸ್ ಮತ್ತು ವೆರಾಕ್ರಜ್‌ನಲ್ಲಿವೆ. ಇನ್ನೂ ಶಾಖದ ಅಲೆ ಕಡಿಮೆಯಾಗಿಲ್ಲ, ಸೊನೊರಾ ರಾಜ್ಯದಲ್ಲಿ, ಅಕೊಂಚಿ ಪಟ್ಟಣದಲ್ಲಿ ಬುಧವಾರದಂದು 49 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ