ಫ್ರಾನ್ಸ್‌ನಲ್ಲಿ ಚಾಲಕನ ಹತ್ಯೆ ಖಂಡಿಸಿ ಜನಾಕ್ರೋಶ; ಬ್ಯಾಂಕ್ ಧ್ವಂಸ, ಕಾರು ಸುಟ್ಟು ಹಾಕಿದ ಪ್ರತಿಭಟನಾಕಾರು
ಟ್ರಾಫಿಕ್ ತಪಾಸಣೆ ವೇಳೆ ಅಲ್ಜೀರಿಯನ್ ಮತ್ತು ಮೊರೊಕನ್ ಮೂಲದ 17 ವರ್ಷದ ಹದಿಹರೆಯದ ನಹೆಲ್ ಎಂ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು ಆತನ ಎದೆಗೆ ತಗುಲಿದೆ
ಫ್ರಾನ್ಸ್‌ನಲ್ಲಿ (France) ಹದಿಹರೆಯದ ಚಾಲಕನೊಬ್ಬ ಹತ್ಯೆಯಿಂದ ಪ್ರಚೋದಿಸಲ್ಪಟ್ಟ ಗಲಭೆಗಳು ಮೂರನೇ ದಿನವೂ ಮುಂದುವರಿದಿದೆ. ಪ್ರತಿಭಟನಾಕಾರರು (Protest) ಹಲವಾರು ಸ್ಥಳಗಳಲ್ಲಿ ಬೆಂಕಿ ಹಚ್ಚಿದ್ದು ಪೊಲೀಸ್ ವಾಹನಗಳನ್ನು ಪ್ರತಿಭಟನಾಕಾರರು ಲೂಟಿ ಮಾಡಿದ್ದಾರೆ. ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಬ್ಯಾಂಕ್, ಅಂಗಡಿಗಳನ್ನು ಧ್ವಂಸ ಮಾಡಿದ ಪ್ರತಿಭಟನಾಕಾರರು, ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿದ್ದಾರೆ. ದೇಶದಲ್ಲಿ ರಾತ್ರೋರಾತ್ರಿ 667 ಜನರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ. ಟ್ರಾಫಿಕ್ ತಪಾಸಣೆ ವೇಳೆ ಅಲ್ಜೀರಿಯನ್ ಮತ್ತು ಮೊರೊಕನ್ ಮೂಲದ 17 ವರ್ಷದ ಹದಿಹರೆಯದ ನಹೆಲ್ ಎಂ (Nahel M) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು ಆತನ ಎದೆಗೆ ತಗುಲಿದೆ. ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯನ್ನು ಸ್ವಯಂಪ್ರೇರಿತ ನರಹತ್ಯೆಯ ಬಗ್ಗೆ ಔಪಚಾರಿಕ ತನಿಖೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಅದೇ ವೇಳೆ ಮುಂಜಾಗ್ರತಾ ಕ್ರಮವಾಗಿ ಅವರನ್ನು ಜೈಲಿನಲ್ಲಿ ಇರಿಸಲಾಗುವುದು ಎಂದು ರಾಯಿಟರ್ಸ್ ವರದಿ ಮಾಡಿದೆ.
ಹದಿಹರೆಯದ ಯುವಕ ಹಲವಾರು ಬಾರಿ ಸಂಚಾರ ಉಲ್ಲಂಘನೆಗಳನ್ನು ಮಾಡಿದ ನಂತರ ತನಗೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಗಾಯವಾಗಬಹುದೆಂಬ ಭಯದಿಂದ ಪೊಲೀಸ್ ಅಧಿಕಾರಿ ಕಾರ್ ಚೇಸ್ ಅನ್ನು ತಡೆಯಲು ಬಯಸಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ.
BREAKING: Massive fire at bus depot in Aubervilliers, France, amid ongoing riots.pic.twitter.com/KPDKChYyo1
— The Spectator Index (@spectatorindex) June 30, 2023
ತೀವ್ರಗೊಂಡ ಪ್ರತಿಭಟನೆ
ಫ್ರಾನ್ಸ್‌ನ ಮಾರ್ಸಿಲ್ಲೆ, ಲಿಯಾನ್, ಪೌ, ಟೌಲೌಸ್ ಮತ್ತು ಲಿಲ್ಲೆ ಮುಂತಾದ ಭಾಗಗಳಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಪ್ಯಾರಿಸ್‌ನ ಉತ್ತರದ ಉಪನಗರದಲ್ಲಿರುವ ಬಸ್ ಡಿಪೋ ಮತ್ತು ಪೂರ್ವ ನಗರದ ಲಿಯಾನ್‌ನಲ್ಲಿರುವ ಟ್ರಾಮ್ ಗೆ ಕೂಡಾ ಬೆಂಕಿ ಹಚ್ಚಲಾಗಿದೆ. ಟೌಲೌಸ್‌ನಲ್ಲಿರುವ ಕ್ರೇನ್ ಮತ್ತು ಆಬರ್‌ವಿಲಿಯರ್ಸ್‌ನಲ್ಲಿರುವ ಬಸ್ ಡಿಪೋ ಕೂಡ ಬೆಂಕಿಗೆ ಆಹುತಿಯಾಗಿದೆ.
ಸೆಂಟ್ರಲ್ ಪ್ಯಾರಿಸ್‌ನಲ್ಲಿ, ನೈಕಿ ಶೂ ಅಂಗಡಿ ದೋಚಿದ 14 ಮಂದಿಯನ್ನು ಬಂಧಿಸಲಾಗಿದೆ. ರೂ ಡಿ ರಿವೋಲಿ ಶಾಪಿಂಗ್ ಸ್ಟ್ರೀಟ್‌ನಲ್ಲಿ ಅಂಗಡಿಯ ಕಿಟಕಿಗಳನ್ನು ಒಡೆದು ಹಾಕಿದ ಪ್ರಕರಣದಲ್ಲಿ 16 ಜನರನ್ನು ಕದ್ದ ವಸ್ತುಗಳೊಂದಿಗೆ ಬಂಧಿಸಲಾಯಿತು ಎಂದು ಪ್ಯಾರಿಸ್ ಪೊಲೀಸರು ತಿಳಿಸಿದ್ದಾರೆ.
Rioters in France burning down the largest public library in the city of Marseille. pic.twitter.com/uPl6n82zFT
— Visegrád 24 (@visegrad24) June 30, 2023
ಫ್ರಾನ್ಸ್‌ನಾದ್ಯಂತ ಸುಮಾರು 40,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಾರ್ಸಿಲ್ಲೆಯ ಪ್ರವಾಸಿ ತಾಣವಾದ ಲೆ ವಿಯುಕ್ಸ್ ಬಂದರಿನಲ್ಲಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಗ್ರೆನೇಡ್ ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: Putin on Make in India: ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಮಂಗಳವಾರ 17 ವರ್ಷದ ಯುವಕನನ್ನು ಗುಂಡಿಕ್ಕಿ ಕೊಂದ ಪ್ಯಾರಿಸ್‌ನ ಪಶ್ಚಿಮ ಹೊರವಲಯದಲ್ಲಿರುವ ಪಟ್ಟಣವಾದ ನಾಂಟೆರ್ರೆಯಲ್ಲಿನ ಕಟ್ಟಡಗಳಾದ್ಯಂತ ‘ನಹೆಲ್‌ಗಾಗಿ ಪ್ರತೀಕಾರ’ ಎಂದು ಬರೆಯುವ ಟೆಕ್ಸ್ಟ್ ಅಂಟಿಸಲಾಗಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಸ್ಪೋಟಕಗಳನ್ನು ಎಸೆದರು, ಕೆಲವು ಕಾರುಗಳಿಗೆ ಬೆಂಕಿ ಹಚ್ಚಿದರು ಮತ್ತು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿದರು.
Footage from France reportedly showing looting of police vehicles stocked with weapons. pic.twitter.com/ILN0BiRxsB
— The Spectator Index (@spectatorindex) June 30, 2023
ನಹೆಲ್ ಎಂ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯ ವಕೀಲರು, ತನ್ನ ಕಕ್ಷಿದಾರ ಸಂತ್ರಸ್ತರ ಕುಟುಂಬದಲ್ಲಿ ಕ್ಷಮೆ ಕೇಳಿದ್ದಾರೆ. ಅಧಿಕಾರಿಯು ಚಾಲಕನ ಕಾಲಿನ ಕಡೆಗೆ ಗುರಿಯಿಟ್ಟುಕೊಂಡಿದ್ದನಾದರೂ ಅದು ಗುರಿತಪ್ಪಿ ಆತನ ಎದೆಗೆ ತಾಗಿತ್ತು ಎಂದು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Fri, 30 June 23