ಏಳು ರಾತ್ರಿಯಿಂದ ಕರಡಿಯಿಂದ ಹಿಂಸೆಗೆ ಒಳಗಾದ ವ್ಯಕ್ತಿಯೊಬ್ಬನನ್ನು ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ (Coast Guard Helicopter)ವೊಂದು ರಕ್ಷಣೆ ಮಾಡಿದೆ. ಅಂದಹಾಗೆ ಈ ಘಟನೆ ನಡೆದದ್ದು ಯುಎಸ್ನ ಅಲೆಸ್ಕಾ ನಗರದ ನೊಮೆ ಸಮೀಪದ ಟಂಡ್ರಾ ಪ್ರದೇಶದಲ್ಲಿ. ಈ ವ್ಯಕ್ತಿ ಒಬ್ಬ ಗಣಿಗಾರನಾಗಿದ್ದು, ಟಂಡ್ರಾ ಪ್ರದೇಶದಲ್ಲಿರುವ ಗಣಿಗಾರಿಕೆ ಕ್ಯಾಂಪ್ನ ಮೇಲ್ಭಾಗಕ್ಕೆ ಬಂದು ಸಹಾಯಕ್ಕಾಗಿ ಎದುರು ನೋಡುತ್ತಿದ್ದರು.
ಈ ಹೆಲಿಕಾಪ್ಟರ್ ಕೊಟ್ಜೆಬ್ಯೂದಿಂದ ಕೊಡಿಯಾಕ್ಗೆ ಹೋಗುತ್ತಿತ್ತು. ಗಣಿಗಾರ ತನ್ನ ಕ್ಯಾಂಪ್ ಮೇಲ್ಭಾಗದಲ್ಲಿ SOS (ಅಂತಾರಾಷ್ಟ್ರೀಯ ಆರೋಗ್ಯ ಮತ್ತು ಭದ್ರತಾ ಸೇವೆಗಳ ಸಂಸ್ಥೆ) ಮಾರ್ಕ್ ಹಾಕಿದ್ದ. ಅಂದರೆ ತಾನು ಅಪಾಯದಲ್ಲಿದ್ದೇನೆ..ರಕ್ಷಿಸಿ ಎಂಬ ಅರ್ಥದಲ್ಲಿ ಗುರುತು ಹಾಕಿಕೊಂಡಿದ್ದ. ಅದನ್ನು ನೋಡಿದ ಹೆಲಿಕಾಪ್ಟರ್ ಸಿಬ್ಬಂದಿ ಆ ಕ್ಯಾಂಪ್ನ ಸುತ್ತಲೂ ರೌಂಡ್ ಹಾಕಿದರು. ಆಗ ಅಲ್ಲಿ ಈ ವ್ಯಕ್ತಿ ತನ್ನ ಕೈ ಬೀಸುತ್ತ ನಿಂತಿರುವುದು ಕಂಡು, ಹೆಲಿಕಾಪ್ಟರ್ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ.
ಹೆಲಿಕಾಪ್ಟರ್ನ್ನು ಅಲ್ಲಿ ಲ್ಯಾಂಡ್ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ. ಬೇರಿಂಗ್ ಸಮುದ್ರದ ಕರಾವಳಿ ಅಂಚಾಗಿರುವ ನೋಮೆ, ಅಲಸ್ಕಾದ ಅಂಕಾರೇಜ್ನ ವಾಯುವ್ಯಕ್ಕೆ 535 ಮೈಲು ದೂರದಲ್ಲಿದೆ.
ಇದನ್ನೂ ಓದಿ: ‘ಮನೋಜ್ ಬಾಜ್ಪೇಯಿ ಪಾರ್ನ್ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್ ಕಾಮಿಡಿಯನ್
Helicopter rescues man after 7 days struggle with bear In Alaska