16ನೇ ವಯಸ್ಸಿನಿಂದಲೇ ಜನರನ್ನು ಅಪಹರಿಸುತ್ತಾ ಅಪರಾಧ ಲೋಕ ಪ್ರವೇಶಿಸಿದ್ದ ಹೆಂಡರ್ಸನ್ ಶಿಶುವಿಹಾರದ ಶಿಕ್ಷಕಿಯೊಬ್ಬಳನ್ನು ಅಪಹರಿಸಿ ಕೊಂದನೇ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಿಯೋಥಾ ಹೆಂಡರ್ಸನ್ ಅಲಿಯಾಸ್ ಕ್ಲಿಯೋಥಾ ಆಬ್ಸಟನ್ ಹೆಸರಿನ ವ್ಯಕ್ತಿಯ ಮೇಲೆ ಪ್ರಥಮ-ಡಿಗ್ರಿ ಕೊಲೆ ಮತ್ತು ಅಪಹರಣದ ಆರೋಪ ಹೊರಿಸಲಾಗಿದೆ. ಅವನ ಪರವಾಗಿ ನ್ಯಾಯಾಲಯಕ್ಕೆ ಇನ್ನೂ ಮನವಿಯನ್ನು ಸಲ್ಲಿಸಲಾಗಿಲ್ಲ
ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಅಮೆರಿಕದ ಟೆನೆಸ್ಸೀಯಲ್ಲಿ (Tennessee) ಬೆಳಗಿನ ಜಾಗಿಂಗ್ ನಲ್ಲಿ ತೊಡಗಿದ್ದಾಗ ಅಪಹರಣಕ್ಕೊಳಗಾಗಿ ನಂತರ ಶವವಾಗಿ ಸಿಕ್ಕ ಶಿಶುವಿಹಾರದ (kindergarten) ಶಿಕ್ಷಕಿಯ ಸಾವು ಗುಂಡೇಟಿನಿಂದ ಸಂಭವಿಸಿದೆ ಎಂದು ಗುರುವಾರ ಬಿಡುಗಡೆಯಾಗಿರುವ ಅವಳ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ. 34-ವರ್ಷ ವಯಸ್ಸಿನವಳಾಗಿದ್ದ ಎಲಿಜಾ ಫ್ಲೆಚರ್ (Eliza Fletcher) ತಲೆಯ ಹಿಂಭಾಗಕ್ಕೆ ಗುಂಡೇಟು ಬಿದ್ದಿದೆ ಮತ್ತು ಒಂದು ಮೊಂಡು ವಸ್ತುವಿನಿಂದ ಥಳಿಸಿದ ಗಾಯಗಳು ಅವಳ ಬಲಗಾಲ ಮೇಲಿರುವುದರ ಜೊತೆಗೆ ದವಡೆ ಹಲ್ಲುಗಳು ಮುರಿದಿವೆ ಎಂದು ಮೆಂಫಿಸ್ ನಲ್ಲಿರುವ ವೆಸ್ಟ್ ಟೆನಿಸ್ಸೀ ಫೋರೆನ್ಸಿಕ್ ಸೆಂಟರ್ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅವಳ ತಲೆಬುರಡೆಯಲ್ಲಿ ಒಂದು ಗುಂಡೇಟಿನಿಂದಾಗಿರುವ ಅರ್ಧವೃತ್ತಾಕಾರದ ಗುರುತುಗಳಿವೆ, ಗುಂಡು ಅವಳ ತಲೆಯ ಹಿಂಭಾಗದಿಂದ ಮುಂದಕ್ಕೆ ಎಡಭಾಗದಿಂದ ಬಲಭಾಗಕ್ಕೆ ಚಲಿಸಿದೆ, ಎಂದು ವರದಿ ಹೇಳುತ್ತದೆ.
ಸೆಪ್ಟೆಂಬರ್ 2 ರಂದು ಮೆಂಫಿಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಬೆಳಗಿನ ಜಾವ 4 ಗಂಟೆಗೆ ಜಾಗ್ ಮಾಡುತ್ತಿದ್ದಾಗ ಫ್ಲೆಚರ್ಳನ್ನು ಬಲವಂತವಾಗಿ ಒಂದು ವಾಹನದೊಳಗೆ ತಳ್ಳಿ ಹೊತ್ತೊಯ್ಯಲಾಗಿತ್ತು. ಅವಳನ್ನು ಪತ್ತೆ ಮಾಡಲು ಭಾರೀ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಮೂರು ದಿನಗಳ ನಂತರ ಅಂದರೆ ಸೆಪ್ಟೆಂಬರ್ 5 ರಂದು ಅವಳ ದೇಹ ಖಾಲಿ ಮನೆಯೊಂದರ ಹಿತ್ತಲಲ್ಲಿ ಸಿಕಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಿಯೋಥಾ ಹೆಂಡರ್ಸನ್ ಅಲಿಯಾಸ್ ಕ್ಲಿಯೋಥಾ ಆಬ್ಸಟನ್ ಹೆಸರಿನ ವ್ಯಕ್ತಿಯ ಮೇಲೆ ಪ್ರಥಮ-ಡಿಗ್ರಿ ಕೊಲೆ ಮತ್ತು ಅಪಹರಣದ ಆರೋಪ ಹೊರಿಸಲಾಗಿದೆ. ಅವನ ಪರವಾಗಿ ನ್ಯಾಯಾಲಯಕ್ಕೆ ಇನ್ನೂ ಮನವಿಯನ್ನು ಸಲ್ಲಿಸಲಾಗಿಲ್ಲ ಮತ್ತು ಅವನ ವಕೀಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಫ್ಲೆಚರ್ ಅಪಹರಣವಾದ ಒಂದು ದಿನದ ನಂತರ ಅವಳು ಕೊನೆಯದಾಗಿ ಕಾಣಿಸಿದ ಸ್ಥಳದಲ್ಲಿ ಸಿಕ್ಕ ಪಾದರಕ್ಷೆಗಳ ಜೋಡಿಯೊಂದರ ಮೇಲೆ ಹೆಂಡರ್ಸನ್ ಡಿಎನ್ ಎ ಪತ್ತೆಯಾಗಿದ್ದರಿಂದ ಅಮೆರಿಕ ಪೊಲೀಸರು ಅದೇ ದಿನ ಅವನನ್ನು ವಶಕ್ಕೆ ಪಡೆದ್ದಿದ್ದರು, ಎಂದು ಕೋರ್ಟಿಗೆ ಸಲ್ಲಿಸಲಾಗಿರುವ ಅಫಿಡವಿಟ್ ನಲ್ಲಿ ಹೇಳಲಾಗಿದೆ. ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತೊಂದು ಅಫಿಡವಿಟ್ ಪ್ರಕಾರ ಫ್ಲೆಚರ್ ದೇಹ ಪತ್ತೆಯಾದ ಬಳಿಕ ಡ್ಯೂಪ್ಲೆಕ್ಸ್ ಮನೆಯ ಡ್ರೈವ್ ವೇನಲ್ಲಿ ವಾಹನವೊಂದು ಓಡಾಡಿದ ಗುರುತುಗಳು ಪತ್ತೆಯಾಗಿವೆ ಮತ್ತು ಪೊಲಿಸರಿಗೆ ಕೊಳೆತ ದೇಹದ ವಾಸನೆ ಮೂಗಿಗೆ ಅಡರಿದೆ.
ಫ್ಲೆಚರ್ ನಿಯಮಿತವಾಗಿ ಜಾಗಿಂಗ್ ಮಾಡುವಾಗ ಬಳಸುತ್ತಿದ್ದ ನೇರಳೆ ಬಣ್ಣದ ರನ್ನಿಂಗ್ ಶಾರ್ಟ್ಸ್ ಹತ್ತಿರದಲ್ಲೇ ಬಿದ್ದಿದ್ದ ಕಸದ ಚೀಲವೊಂದರಲ್ಲಿ ಪತ್ತೆಯಾಗಿವೆ ಎಂದು ಅಫಿಡವಿಟ್ ಹೇಳಿದೆ.
ಫ್ಲೆಚರ್ ದೇಹ ಪತ್ತೆಯಾದ ಜಾಗದಲ್ಲಿ ಶೆಲ್ ಕೇಸಿಂಗೊಂದನ್ನು ವಶಪಡಿಸಿಕೊಳ್ಳಲಾಗಿದೆ ಅಂತಲೂ ಶವಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ.
ಎರಡು ಮಕ್ಕಳ ತಾಯಿಯಾಗಿದ್ದ ಫ್ಲೆಚರ್‌ನ ಹತ್ಯೆ ಮೆಂಫಿಸ್ ಸಮುದಾಯವನ್ನು ದಿಗ್ಭ್ರಾಂತರನ್ನಾಗಿಸಿದೆ ಮತ್ತು ಅವಳ ಹಾಗೂ ಅವಳ ಕುಟುಂಬಕ್ಕೆ ಬೆಂಬಲದ ಮಹಾಪೂರ ಹರಿದು ಬರುತ್ತಿದೆ. ಅವಳಿಗಾಗಿ ಮತ್ತು ಅವಳ ಕುಟುಂಬಕ್ಕಾಗಿ ಚರ್ಚ್ ಒಂದರಲ್ಲಿ ರಾತ್ರಿ-ಜಾಗರಣೆ ಪ್ರಾರ್ಥನೆ ನಡೆಸಲಾಯಿತು. ಮೆಂಫಿಸ್ ಮತ್ತು ಹಲವಾರು ಅಮೆರಿಕದ ಬೇರೆ ಬೇರೆ ನಗರಗಳಲ್ಲಿನ ಓಟಗಾರರು ಫ್ಲೆಚರ್ಳನ್ನು ಅಪಹರಿಸಿದ ಒಂದು ವಾರದ ನಂತರ ಅವಳ ಗೌರವಾರ್ಥವಾಗಿ ಒಂದು ಬೆಳಗಿನ ಓಟದ ಕಾರ್ಯಕ್ರಮವನ್ನು ಆಯೋಜಿಸಿದರು.
ಫ್ಲೆಚರ್‌ಳನ್ನು ಕೊಂದ ಆರೋಪದ ಹೊತ್ತಿರುವ ಹೆಂಡರ್ಸನ್ ಸೆಪ್ಟೆಂಬರ್ 2021 ರಲ್ಲಿ ಅಂದರೆ ಫ್ಲೆಚರ್ ಳನ್ನು ಅಪಹರಿಸುವುದಕ್ಕಿಂತ ಸರಿಯಾಗಿ ಒಂದು ವರ್ಷ ಮೊದಲು ಅವನು ಇನ್ನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ ಅಂತ ಆರೋಪಿಸಲಾಗಿದೆ.
ಫ್ಲೆಚರ್ ಳನ್ನು ಕೊಲ್ಲುವ ಮೊದಲು ಹೆಂಡರ್ಸನ್ ಮಹಿಳೆಯ ಅತ್ಯಾಚಾರ ನಡೆಸಿದ ಸಮಯದಲ್ಲಿ ಲೈಂಗಿಕ ದೌರ್ಜನ್ಯವನ್ನು ನಡೆದಿರುವುದನ್ನು ದೃಢೀಕರಿಸುವ ಕಿಟ್ ಲಭ್ಯವಿರದ ಕಾರಣ ಆ ಅಪರಾಧದಲ್ಲಿ ಅವನನ್ನು ಬಂಧಿಸಲಾಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2000 ರಲ್ಲಿ ಹೆಂಡರ್ಸನ್ ಕೇವಲ 16 ವರ್ಷದನಾಗಿದ್ದಾಗ ಮೆಂಫಿಸ್ ನಗರದ ಪ್ರಮುಖ ವಕೀಲರೊಬ್ಬರನ್ನು ಅಪಹರಿಸಿದ್ದ. ಆ ಅಪರಾಧಕ್ಕಾಗಿ ಅವವಿಗೆ 20 ವರ್ಷಗಳ ಕಾಲ ಸೆರೆವಾಸದ ಶಿಕ್ಷೆಯಾಗಿಯತ್ತು.