ಯುಕೆ ಮೂಲದ ಸ್ಕೈಟ್ರಾಕ್ಸ್ ಸಂಸ್ಥೆಯು ಈ ವರ್ಷದ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಒಟ್ಟು 20 ವಿಮಾನ ನಿಲ್ದಾಣಗಳನ್ನು ಹೆಸರಿಸಲಾಗಿದೆ. ಸಿಂಗಾಪುರದ ಚಾಂಗಿ ವಿಶ್ವದ ಅತ್ಯಂತ ಸುಂದರ ಮತ್ತು ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊರೊನಾ ಅವಧಿಯಲ್ಲಿ ವಿಮಾನಗಳ ಹಾರಾಟ ನಿಷೇಧಿಸಿದ ಅವಧಿಯಲ್ಲಿ ಎರಡು ವರ್ಷಗಳ ಕಾಲ ಈ ಕಿರೀಟ ಕತಾರ್ ಹೆಸರಿನಲ್ಲಿತ್ತು. ಯುಕೆ ಮೂಲದ ಸ್ಕೈಟ್ರ್ಯಾಕ್ಸ್ ಸಂಸ್ಥೆಯು ವಿಮಾನ ನಿಲ್ದಾಣದ ವಿಮರ್ಶೆ ಮಾಡಿದ್ದು, ಪ್ರಯಾಣಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಬಳಿಕ ಫಲಿತಾಂಶ ಘೋಷಣೆ ಮಾಡುತ್ತದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆದುಕೊಂಡಿದೆ.
ಚಾಂಗಿ ವಿಮಾನ ನಿಲ್ದಾಣವು 12ನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರಿಸಲ್ಪಟ್ಟಿದೆ. ಅದೇ ಸಮಯದಲ್ಲಿ, ದೋಹಾದ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ವರ್ಷ ಸ್ಕೈಟ್ರಾಕ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವಿಮಾನ ನಿಲ್ದಾಣದಲ್ಲಿ ವಿವಿಧ ರೀತಿಯ ಸೌಲಭ್ಯಗಳು ಲಭ್ಯವಿದೆ. ಇದರೊಂದಿಗೆ ಟೋಕಿಯೊದ ಹನೇಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಮತ್ತಷ್ಟು ಓದಿ: Bengaluru: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ
ಇದರೊಂದಿಗೆ ದಕ್ಷಿಣ ಕೊರಿಯಾದ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದ ಫ್ಯಾಷನ್ ರಾಜಧಾನಿ ಎಂದು ಕರೆಯಲ್ಪಡುವ ಪ್ಯಾರಿಸ್ನ ಚಾರ್ಲ್ಸ್ ಡಿ ಗೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ಇಸ್ತಾನ್‌ಬುಲ್ ವಿಮಾನ ನಿಲ್ದಾಣವು 6 ನೇ ಸ್ಥಾನವನ್ನು ಪಡೆದುಕೊಂಡಿರುವುದು ಟರ್ಕಿಗೆ ಸಂತೋಷದ ವಿಷಯವಾಗಿದೆ. ಟಾಪ್ 10 ರಲ್ಲಿ 7 ನೇ ಸ್ಥಾನದಲ್ಲಿದೆ.
ನೈಸರ್ಗಿಕ ಸೌಂದರ್ಯ ಮತ್ತು ಹಿಮಭರಿತ ಪರ್ವತಗಳನ್ನು ಹೊಂದಿರುವ ದೇಶವಾದ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ವಿಮಾನ ನಿಲ್ದಾಣಕ್ಕೆ 8 ನೇ ಸ್ಥಾನವನ್ನು ನೀಡಲಾಗಿದೆ. ಮತ್ತೊಂದೆಡೆ ಬುಲೆಟ್ ರೈಲುಗಳ ಪ್ರಾಬಲ್ಯವಿರುವ ದೇಶದಲ್ಲಿ ಜಪಾನ್ನ ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 9ನೇ ಸ್ಥಾನ ಪಡೆದಿದೆ. ಇದರೊಂದಿಗೆ ಸ್ಪೇನ್‌ನ ಮ್ಯಾಡ್ರಿಡ್-ಬರಾಜಾಸ್ ವಿಮಾನ ನಿಲ್ದಾಣವು 10ನೇ ಸ್ಥಾನಕ್ಕೇರಿದೆ.
2023 ರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳಿವು
1. ಸಿಂಗಾಪುರ ಚಾಂಗಿ
2. ದೋಹಾ ಹಮದ್
3. ಟೋಕಿಯೋ ಹನೆಡಾ
4. ಸಿಯೋಲ್ ಇಂಚಿಯಾನ್
5. ಪ್ಯಾರಿಸ್ ಚಾರ್ಲ್ಸ್ ಡಿ ಗಾಲೆ
6. ಇಸ್ತಾಂಬುಲ್
7. ಮ್ಯೂನಿಚ್
8. ಜ್ಯೂರಿಚ್
9. ಟೋಕಿಯೋ ನರಿಟಾ
10. ಮ್ಯಾಡ್ರಿಡ್ ಬರಾಜಾಸ್
11. ವಿಯೆನ್ನಾ
12. ಹೆಲ್ಸಿಂಕಿ-ವಂಟಾ
13. ರೋಮ್ ಫಿಯುಮಿಸಿನೊ
14. ಕೋಪನ್ ಹ್ಯಾಗನ್
15. ಕನ್ಸಾಯ್
16. ಸೆಂಟ್ರೇರ್ ನಗೋಯಾ
17. ದುಬೈ
18. ಸಿಯಾಟಲ್-ಟಕೋಮಾ
19. ಮೆಲ್ಬೋರ್ನ್
20. ವ್ಯಾಂಕೋವರ್
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ