ಮಹಿಳೆಯ ಹೃದಯ ಕಿತ್ತು ಅಡುಗೆ ಮಾಡಿ ಕುಟುಂಬದವರಿಗೆ ಬಡಿಸಿ ಅವರನ್ನೂ ಕೊಂದ ಅಮೆರಿಕದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಬಿಡುಗಡೆಯಾದ ವಾರಗಳ ನಂತರ ಆಂಡರ್ಸನ್, ಆಂಡ್ರಿಯಾ ಬ್ಲಾಂಕೆನ್‌ಶಿಪ್ ಎಂಬಾಕೆಯನ್ನು ಕೊಂದು ಆಕೆಯ ಹೃದಯ ಹೊರ ತೆಗೆದಿದ್ದ. ಅದನ್ನು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ಕೊಂಡೊಯ್ದು ಆಲೂಗಡ್ಡೆ ಜತೆ ಬೇಯಿಸಿದ್ದ...
ಮಹಿಳೆಯನ್ನು ಕೊಂದು, ಆಕೆಯ ಹೃದಯವನ್ನು ಕಿತ್ತು ಅದನ್ನು ಬೇಯಿಸಿ ಕುಟುಂಬದವರಿಗೆ ಬಡಿಸಿದ. ನಂತರ 4 ವರ್ಷದ ಮಗು ಸೇರಿದಂತೆ ಇಬ್ಬರನ್ನು ಕೊಂದ ವ್ಯಕ್ತಿಯೊಬ್ಬನಿಗೆ ಅಮೆರಿಕದ ಒಕ್ಲಹೋಮ(Oklahoma) ರಾಜ್ಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ದಿ ಇಂಡಿಪೆಂಡೆಂಟ್ ಪ್ರಕಾರ, 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ (Lawrence Paul Anderson) ಎಂಬಾತ 2021ರಲ್ಲಿ ಜೈಲಿನಿಂದ ಮುಂಚಿತವಾಗಿ ಬಿಡುಗಡೆಯಾದ ಒಂದು ತಿಂಗಳ ನಂತರ ಈ ಕೊಲೆ ಕೃತ್ಯವೆಸಗಿದ್ದಾನೆ. ಬಿಡುಗಡೆಯಾದ ವಾರಗಳ ನಂತರ ಆಂಡರ್ಸನ್, ಆಂಡ್ರಿಯಾ ಬ್ಲಾಂಕೆನ್‌ಶಿಪ್ ಎಂಬಾಕೆಯನ್ನು ಕೊಂದು ಆಕೆಯ ಹೃದಯ ಹೊರ ತೆಗೆದಿದ್ದ. ಅದನ್ನು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ಕೊಂಡೊಯ್ದು ಆಲೂಗಡ್ಡೆ ಜತೆ ಬೇಯಿಸಿದ್ದ. ನಂತರ ಅದನ್ನು ಆ ದಂಪತಿಗಳಿಗೆ ಉಣಬಡಿಸಲು ಯತ್ನಿಸಿದ್ದ. ಇದಾದ ನಂತರ 67 ವರ್ಷದ ಲಿಯಾನ್ ಪೇಯ್ ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ್ ನ್ನು ಇರಿದು ಕೊಲೆ ಮಾಡಿದ್ದ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಒಕ್ಲಹೋಮದ ಗವರ್ನರ್ ಕೆವಿನ್ ಸ್ಟಿಟ್ ನ್ಯಾಯಾಂಗ ಶಿಕ್ಷೆಯನ್ನು ಬದಲಿಸಿದಾಗ ಡ್ರಗ್ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೊಳಗಾಗಿದ್ದ ಆಂಡರ್ಸನ್ ಕೇವಲ ಮೂರು ವರ್ಷಗಳ ಶಿಕ್ಷೆ ಪೂರ್ಣಗೊಳಿಸಿದ್ದ. ಆಂಡರ್ಸನ್ ನ ಬಿಡುಗಡೆಯು ರಾಜ್ಯದಿಂದ ಸಾಮೂಹಿಕ ವರ್ಗಾವಣೆಯ ಪ್ರಯತ್ನದ ಭಾಗವಾಗಿತ್ತು. ಆದರೆ ತನಿಖೆಯ ನಂತರ ಆಕ ತಪ್ಪಾಗಿ ಕಮ್ಯುಟೇಶನ್ ( ನ್ಯಾಯಾಂಗ ಶಿಕ್ಷೆಯನ್ನು ಬದಲಿಸುವ ಪ್ರಕ್ರಿಯೆ)ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ:ISRO Space Tourism: 2030ರಲ್ಲಿ ಇಸ್ರೋದಿಂದ ಬಾಹ್ಯಾಕಾಶ ಪ್ರವಾಸ ಯೋಜನೆ: ಟಿಕೆಟ್ ದರ ಅಬ್ಬಾ ಇಷ್ಟೊಂದಾ!
ಆಂಡರ್ಸನ್ ಕೊಲೆ, ಆಕ್ರಮಣ ಮತ್ತು ಅಂಗವೈಕಲ್ಯತೆ ಮಾಡಿದ್ದಕ್ಕೆ ತಪ್ಪಿತಸ್ಥರೆಂದು ಒಪ್ಪಿಕೊಂಡ ನಂತರ ಸತತ ಐದು-ಜೀವಾವಧಿ ಶಿಕ್ಷೆಗೊಳಗಾಗಿದ್ದಾನೆ. ದಾಳಿಯಲ್ಲಿ ಗಾಯಗೊಂಡಿರುವ ಆಂಡರ್ಸನ್ ಚಿಕ್ಕಮ್ಮ ಮತ್ತು ಇತರ ಸಂತ್ರಸ್ತರ ಕುಟುಂಬಗಳು ಒಕ್ಲಹೋಮ ಗವರ್ನರ್ ಮತ್ತು ಜೈಲು ಪೆರೋಲ್ ಮಂಡಳಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ