2019ರಲ್ಲಿ ಯಾವ ದೇಶದಿಂದ ಅತಿ ಶ್ರೀಮಂತರು ಹೆಚ್ಚು ಆಚೆ ಹೋಗಿದ್ದಾರೆ ಗೊತ್ತಾ? ಇಲ್ಲಿದೆ ಟಾಪ್ 10 ಪಟ್ಟಿ

High Net Worth Individuals: 2019ರಲ್ಲಿ ಯಾವ ದೇಶಗಳಿಂದ ಅತಿ ಸಿರಿವಂತರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೋಗಿದ್ದಾರೆ? ಆ ಬಗ್ಗೆ ಈ ವರದಿಯಲ್ಲಿದೆ ಆಸಕ್ತಿಕರವಾದ ಅಂಕಿ- ಅಂಶ.

2019ರಲ್ಲಿ ಯಾವ ದೇಶದಿಂದ ಅತಿ ಶ್ರೀಮಂತರು ಹೆಚ್ಚು ಆಚೆ ಹೋಗಿದ್ದಾರೆ ಗೊತ್ತಾ? ಇಲ್ಲಿದೆ ಟಾಪ್ 10 ಪಟ್ಟಿ
ಸಾಂದರ್ಭಿಕ ಚಿತ್ರ
Edited By:

Updated on: Jun 16, 2021 | 1:11 PM

ವಿಶ್ವದ ಯಾವ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅತಿ ಸಿರಿವಂತರು (High Net Worth Individuals) 2019ರಲ್ಲಿ ಬೇರೆ ಕಡೆಗೆ ಶಾಶ್ವತವಾಗಿ ವಲಸೆ ಹೋಗಿದ್ದಾರೆ ಗೊತ್ತಾ? ಆ ಬಗ್ಗೆ ಆಸಕ್ತಿಕರವಾದ ಅಂಕಿ- ಅಂಶಗಳು ಇಲ್ಲಿವೆ. ಯಾವ ಉದ್ದೇಶದಿಂದ ಆ ದೇಶಗಳಿಂದ ಹೊರ ಹೋಗಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಆ ದೇಶದ ಒಟ್ಟಾರೆ ಅತಿ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿರುವ ಸಂಖ್ಯೆಯನ್ನು ಆಧರಿಸಿ, ಶೇಕಡಾವಾರು ಲೆಕ್ಕಾಚಾರವನ್ನೂ ನಿಮ್ಮ ಮುಂದಿಡಲಾಗಿದೆ. ವಿಶ್ವದ ಟಾಪ್ ಟೆನ್ ದೇಶಗಳನ್ನು ಇಲ್ಲಿ ಹೆಸರಿಸಲಾಗಿದೆ.

1. ಚೀನಾ: 16,000 -2%
2. ಭಾರತ: 7,000 -2%
3. ರಷ್ಯಾ: 5,500 -6%
4. ಹಾಂಕಾಂಗ್: 4,200 -3%
5. ಟರ್ಕಿ: 2,100 -8%
6. ಯು.ಕೆ: 2,000 +/-0%
7. ಫ್ರಾನ್ಸ್: 1,800 -1%
8. ಬ್ರೆಜಿಲ್: 1,400 -1%
9. ಸೌದಿ ಅರೇಬಿಯಾ: 1,200 -3%
10. ಇಂಡೋನೇಷ್ಯಾ: 1,000 -3%

High Net Worth Individuals ಅಂದರೆ ಯಾರು, ಅದಕ್ಕೆ ಏನಾದರೂ ಮಾನದಂಡಗಳು ಇವೆಯಾ? ಈ ಬಗ್ಗೆ ಆರ್ಥಿಕ ಜಗತ್ತು ಏನು ಹೇಳುತ್ತದೆ ಅಂತ ನೋಡಿದರೆ ಅದಕ್ಕೆ ಉತ್ತರ ದೊರೆಯುತ್ತದೆ. ಮೊದಲಿಗೆ ನೆಟ್​ವರ್ತ್ ಅಂದರೆ ನಿವ್ವಳ ಮೌಲ್ಯ, ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಅಂತ ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯ ಆಸ್ತಿ ಮೌಲ್ಯದಿಂದ, ಸಾಲದ ಮೊತ್ತವನ್ನು ಕಳೆದರೆ ಉಳಿಯುವುದೇ ನಿವ್ವಳ ಮೌಲ್ಯ ಅಥವಾ ನೆಟ್​ವರ್ತ್​. High Net Worth Individuals ಅನ್ನು ಅಳೆಯುವುದು ಒಬ್ಬ ವ್ಯಕ್ತಿಯ ಬಳಿಯ ಎಷ್ಟು ಲಿಕ್ವಿಡ್ ಅಸೆಟ್ ಇದೆ ಎಂಬುದರ ಮೇಲೆ ಮಾತ್ರ. ಆ ವ್ಯಕ್ತಿಗೆ ಬ್ಯಾಂಕ್​ ಖಾತೆಯಲ್ಲಿ ಅಥವಾ ಬ್ರೋಕರೇಜ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದು ಮುಖ್ಯವಾಗುತ್ತದೆ. ಇದರಲ್ಲಿ ಮನೆಯಾಗಲೀ ಮತ್ಯಾವುದಾದರೂ ಆಸ್ತಿ- ಪಾಸ್ತಿ, ವಸ್ತುಗಳಾಗಲೀ ಗಣನೆಗೆ ತೆಗೆದುಕೊಳ್ಳಲ್ಲ.

ಯಾರ ಬಳಿ ಹೀಗೆ ಹೂಡಿಕೆ ಮಾಡಬಹುದಾದ ನಗದು 1 ಮಿಲಿಯನ್ ಯುಎಸ್​ಡಿಯಿಂದ 5 ಮಿಲಿಯನ್ ಯುಎಸ್​ಡಿ ಇರುತ್ತದೋ ಅಂಥವರು High Net Worth Individuals (HNWIs).

ಯಾರ ಬಳಿ ಲಿಕ್ವಿಡ್ ಅಸೆಟ್ಸ್ 5 ಮಿಲಿಯನ್​ ಯುಎಸ್​ಡಿಯಿಂದ 30 ಮಿಲಿಯನ್​ ಯುಎಸ್​ಡಿ ಮಧ್ಯೆ ಇರುತ್ತದೋ ಅಂಥವರು Very High Net Worth Individuals (VHNWIs).

ಇನ್ನು ಯಾರ ಬಳಿ 30 ಮಿಲಿಯನ್ ಡಾಲರ್​ಗೂ ಹೆಚ್ಚು ನಗದು ಇರುತ್ತದೋ ಅಂಥವರು Ultra High Net Worth Individuals (UHNWIs).

ಭಾರತದ ಲೆಕ್ಕಾಚಾರದಲ್ಲಿ ನಿಮಗೆ ಸರಳವಾಗಿ ವಿವರಿಸುವ ಪ್ರಯತ್ನ ಮಾಡುವುದಾದರೆ, ಯಾವ ವ್ಯಕ್ತಿಗೆ ಇವತ್ತಿಗೆ ತನ್ನ ಸಾಲವನ್ನು ತೀರಿಸಿದ ಮೇಲೂ ಮನೆ, ಆಸ್ತಿ- ಪಾಸ್ತಿ, ವಸ್ತು, ವಾಹನಗಳನ್ನು ಹೊರತಪಡಿಸಿದಂತೆ ಇವತ್ತಿಗೆ ಕನಿಷ್ಠ 7,33,78,500 (7.34 ಕೋಟಿ) ರೂಪಾಯಿ ನಗದು ಇರುತ್ತದೋ ಅವರು High Net Worth Individuals.

ಇದನ್ನೂ ಓದಿ: Bernard Arnault: ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

ಇದನ್ನೂ ಓದಿ: Forbes Richest Billionaires List: ಸತತ ನಾಲ್ಕನೇ ವರ್ಷ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಬೆಜೋಸ್ ನಂಬರ್ 1 ಶ್ರೀಮಂತ

(Here is the list of top 10 countries or territories from where highest number of High Net Worth Individuals (HNWIs) emigrate in 2019)

Published On - 1:00 pm, Wed, 16 June 21