ವಿದೇಶಗಳಲ್ಲಿ ಹಿಂದೂ(Hindu) ದೇವಸ್ಥಾನ(Temple) ಗಳ ಮೇಲಿನ ದಾಳಿ ಮುಂದುವರೆದಿದೆ. ಖಲಿಸ್ತಾನಿಗಳು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದಾರೆ. ಗೋಡೆ ಮೇಲೆ ಕಪ್ಪು ಬಣ್ಣ ಬಳಿದಿದ್ದಾರೆ, ಆಸ್ಟ್ರೇಲಿಯಾದಲ್ಲಿ ಸುಮಾರು ಎರಡು ತಿಂಗಳ ಖಾಲಿಸ್ತಾನಿಗಳ ಚಟುವಟಿಕೆಗಳು ಸ್ವಲ್ಪ ಶಾಂತವಾದಂತೆ ಕಂಡಿತ್ತು, ಆದರೆ ಮತ್ತೀಗ ಪರಿಸ್ಥಿತಿ ಹದಗೆಟ್ಟಿದೆ. ಇತ್ತೀಚೆಗೆ ನಡೆದ ಮತ್ತೊಂದು ಘಟನೆ: ಆಸ್ಟ್ರೇಲಿಯಾದಲ್ಲಿ ದೇಗುಲಗಳ ಮೇಲಿನ ದಾಳಿ ಮುಂದುವರೆದಿದೆ.
ಬ್ರಿಸ್ಬೇನ್ ನಗರದಲ್ಲಿ ಶ್ರೀಲಕ್ಷ್ಮೀ ನಾರಾಯಣ ದೇಗುಲದ ಮೇಲೆ ದಾಳಿ ನಡೆದಿದೆ, ದೇಗುಲದ ಮೇಲೆ ದಾಳಿ ನಡೆಸಿದ ಖಲಿಸ್ತಾನ್ ಸಂಘಟನೆ ಬೆಂಬಲಿಗರು, ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಎರಡು ತಿಂಗಳಲ್ಲಿ ಆಸ್ಟ್ರೇಲಿಯದ ದೇವಸ್ಥಾನದಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿತ್ತು. ಬೆಳಗ್ಗೆ ಭಕ್ತರು ಪೂಜೆ ಸಲ್ಲಿಸಲು ಆಗಮಿಸಿದಾಗ ವಿಧ್ವಂಸಕ ಕೃತ್ಯ ನಡೆದಿರುವುದು ಗಮನಕ್ಕೆ ಬಂದಿದೆ.
ಮತ್ತಷ್ಟು ಓದಿ:Hindu Temple Vandalised In Australia: ಖಲಿಸ್ತಾನಿ ಬೆಂಬಲಿಗರಿಂದ ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯ ಧ್ವಂಸ
ಬ್ರಿಸ್ಬೇನ್‌ನ ದಕ್ಷಿಣ ಭಾಗದಲ್ಲಿರುವ ಬರ್ಬ್ಯಾಂಕ್ ಉಪನಗರದಲ್ಲಿರುವ ಬ್ರಿಸ್ಬೇನ್‌ನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ ಎಂದು ಆಸ್ಟ್ರೇಲಿಯ ಟುಡೇ ವರದಿ ಮಾಡಿತ್ತು.
ದೇವಸ್ಥಾನದ ಅರ್ಚಕರು ಮತ್ತು ಭಕ್ತರು ಇಂದು ಬೆಳಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಮೇಲೆ ನಡೆದಿರುವ ವಿಧ್ವಂಸಕ ಕೃತ್ಯಗಳ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ಹೇಳಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ