Sign In

By signing in or creating an account, you agree with Associated Broadcasting Company's Terms & Conditions and Privacy Policy.

SCO Foreign Minister’s meeting: ಗೋವಾದಲ್ಲಿ ಎಸ್‌ಸಿಒ ಸಭೆಗೂ ಮುನ್ನ ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಸಂದೇಶ

ಎಸ್‌ಸಿಒಗೆ ಪಾಕ್‌ನ ಬದ್ಧತೆಯನ್ನು ಒತ್ತಿ ಹೇಳಿದ ಅವರು ಈ ಭೇಟಿಯು ಆ ಬದ್ಧತೆಯ ಸೂಚನೆಯಾಗಿದೆ ಎಂದಿದ್ದಾರೆ.ಇಂದು ಮತ್ತು ನಾಳೆ ಗೋವಾದಲ್ಲಿ ವಿದೇಶಾಂಗ ಸಚಿವರ ಎಸ್‌ಸಿಒ ಸಭೆ ನಡೆಯಲಿದೆ.

SCO Foreign Minister’s meeting: ಗೋವಾದಲ್ಲಿ ಎಸ್‌ಸಿಒ ಸಭೆಗೂ ಮುನ್ನ ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಸಂದೇಶ
ಬಿಲಾವಲ್ ಭುಟ್ಟೋ ಜರ್ದಾರಿ
Follow us
ರಶ್ಮಿ ಕಲ್ಲಕಟ್ಟ
|

Updated on: May 04, 2023 | 4:40 PM

ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಅವರು ಶಾಂಘೈ ಸಹಕಾರ ಸಂಘಟನೆಯ (Shanghai Cooperation Organisation) ವಿದೇಶಾಂಗ ಸಚಿವರ ಕೌನ್ಸಿಲ್ ಸಭೆಗಾಗಿ ಗೋವಾ ತಲುಪಿದ್ದಾರೆ. 2011ರಲ್ಲಿ ಹಿನಾ ರಬ್ಬಾನಿ ಖಾರ್ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಪಾಕ್ ವಿದೇಶಾಂಗ ಮಂತ್ರಿಯಾಗಿದ್ದಾರೆ ಜರ್ದಾರಿ. ಎಸ್‌ಸಿಒಗೆ ಪಾಕ್‌ನ ಬದ್ಧತೆಯನ್ನು ಒತ್ತಿ ಹೇಳಿದ ಅವರು ಈ ಭೇಟಿಯು ಆ ಬದ್ಧತೆಯ ಸೂಚನೆಯಾಗಿದೆ ಎಂದಿದ್ದಾರೆ.ಇಂದು ಮತ್ತು ನಾಳೆ ಗೋವಾದಲ್ಲಿ ವಿದೇಶಾಂಗ ಸಚಿವರ ಎಸ್‌ಸಿಒ ಸಭೆ ನಡೆಯಲಿದೆ.

ನಾನು ಇಂದು ಭಾರತಕ್ಕೆ ಹೋಗುತ್ತಿದ್ದೇನೆ, ಅಲ್ಲಿ ನಾನು ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಮಂತ್ರಿಗಳ ಕೌನ್ಸಿಲ್ (CFM) ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ನಿಯೋಗದ ನೇತೃತ್ವ ವಹಿಸಿದ್ದೇನೆ. ನನ್ನ ಉಪಸ್ಥಿತಿಯು ಪಾಕಿಸ್ತಾನಕ್ಕೆಎಸ್‌ಸಿಒ ಎಷ್ಟು ಮುಖ್ಯವಾಗಿದೆ ಮತ್ತು ಅದರ ಸದಸ್ಯತ್ವವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ. ಇತರ ವಿದೇಶಾಂಗ ಮಂತ್ರಿಗಳೊಂದಿಗೆ ದ್ವಿಪಕ್ಷೀಯವಾಗಿ ತೊಡಗಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ ಅವರು ಮಿತ್ರ ರಾಷ್ಟ್ರಗಳ ಸಹವರ್ತಿಗಳೊಂದಿಗೆ ಚರ್ಚೆಗಳನ್ನು ನಡೆಸುವ ನಿರೀಕ್ಷೆಯಲ್ಲಿದ್ದಾರೆ.

ಚೀನಾದ ಕ್ವಿನ್ ಗ್ಯಾಂಗ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದಾಗ್ಯೂ, ಭಾರತಕ್ಕೆ ತಮ್ಮ ಭೇಟಿಯನ್ನು ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ನೋಡಬಾರದು ಎಂದು ಜರ್ದಾರಿ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ: ಮೋದಿ, ಅಮಿತ್ ಶಾಗೆ ಮೇರಿ ಕೋಮ್ ಮನವಿ

ನಾವು ಎಸ್ ಸಿಒಗೆ ಬದ್ಧರಾಗಿದ್ದೇವೆ ಮತ್ತು ಈ ಭೇಟಿಯನ್ನು ದ್ವಿಪಕ್ಷೀಯವಾಗಿ ನೋಡಬಾರದು ಎಂದಿದ್ದರು ಅವರು. 2011 ರ ಹಿನಾ ರಬ್ಬಾನಿ ಖಾರ್ ಅವರ ಪ್ರವಾಸದ ನಂತರ ಪಾಕ್ ವಿದೇಶಾಂಗ ಸಚಿವ ಜರ್ದಾರಿ ಅವರ ಮೊದಲ ಭಾರತದ ಭೇಟಿ ಇದಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಔಪಚಾರಿಕ ಭೇಟಿ ಇರುವುದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್