ಅನೇಕ ಯುವತಿಯರನ್ನು ಆಮಿಷವೊಡ್ಡಿ ಲೈಂಗಿಕ ಅತ್ಯಾಚಾರ ನಡೆಸಿದ ಅರೋಪದಲ್ಲಿ ಹಾಲಿವುಡ್ ಟಿವಿ ನಿರ್ಮಾಪಕ ವೀನ್ಬರ್ಗ್ ಬಂಧನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2022 | 7:33 PM

ಪ್ರಸ್ತುತವಾಗಿ ಅವರನ್ನು 2012 ರಿಂದ 2019 ರವರೆಗೆ ನಡೆಸಿದ ಲೈಂಗಿಕ ಅತ್ಯಾಚಾರಗಳ ಆರೋಪಗಳಲ್ಲಿ ಬಂಧಿಸಲಾಗಿದೆಯಾದರೂ 1990 ರಿಂದಲೇ ಅವರು ಇಂಥ ಕೃತ್ಯಗಳ ತೊಡಗಿರಬಹುದೆಂದು ಪೊಲೀಸರು ಭಾವಿಸಿದ್ದಾರೆ. ಅವರಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತರೊಂದಿಗೆ ಇನ್ನೂ ಮಾತಾಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನೇಕ ಯುವತಿಯರನ್ನು ಆಮಿಷವೊಡ್ಡಿ ಲೈಂಗಿಕ ಅತ್ಯಾಚಾರ ನಡೆಸಿದ ಅರೋಪದಲ್ಲಿ ಹಾಲಿವುಡ್ ಟಿವಿ ನಿರ್ಮಾಪಕ ವೀನ್ಬರ್ಗ್ ಬಂಧನ
ಎರಿಕ್ ವೀನ್ಬರ್ಗ್
Follow us on

ಲಾಸ್​ ಏಂಜಲೀಸ್​: ಸುಮಾರು 7 ವರ್ಷಗಳ ಕಾಲ ಅಂದರೆ 2012 ರಿಂದ 2019 ರವರೆಗೆ ಹಲವಾರು ಯುವತಿಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪಗಳ ಹಿನ್ನೆಲೆಯಲ್ಲಿ ಸುದೀರ್ಘ ಅವಧಿಯಿಂದ ಹಾಲಿವುಡ್ (Hollywood) ಟಿವಿ ಸೀರಿಯಲ್ ಗಳನ್ನು ತಯಾರಿಸುತ್ತಿರುವ ನಿರ್ಮಾಪನನ್ನು ಲಾಸ್ ಏಂಜಲೀಸ್ ಪೊಲೀಸರು ಬಂಧಿಸಿದ್ದಾರೆ. ‘ಸ್ಕ್ರಬ್ಸ್’ ಹೆಸರಿನ ಟಿವಿ ಸರಣಿಯ ಸಹ ಕಾರ್ಯನಿರ್ವಾಹಕ ನಿರ್ಮಾಪಕ ಎರಿಕ್ ವೀನ್ಬರ್ಗ್ ರನ್ನು (Eric Weinberg) ಅವರ ಲಾಸ್ ಫೀಜ್ ಮನೆಯಲ್ಲಿ ಗುರುವಾರ ಬಂಧಿಸಲಾಯಿತು ಎಂದು ನಗರ ಪೊಲೀಸ್ ಇಲಾಖೆಯು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಒಬ್ಬ ವೃತ್ತಿಪರ ಫೋಟೋಗ್ರಾಫರ್ ಸೋಗಿನಲ್ಲಿ ವೀನ್ಬರ್ಗ್ ಕಾಫೀ ಶಾಪ್ ಮತ್ತು ಮಾರ್ಕೆಟ್ ಸ್ಥಳಗಳಲ್ಲಿ 20 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಫೋಟೋಶೂಟ್ ನೆಪದದಲ್ಲಿ ಅವರನ್ನು ತನ್ನ ಮನೆಗೆ ಕರೆಸಿ ಅವರ ಮೇಲೆ ಲೈಂಗಿಕ ಅತ್ಯಾಚಾರ ನಡೆಸುತ್ತಿದ್ದರು.

ವೀನ್ಬರ್ಗ್ನ ನೆರೆಮನೆಯ ನಿವಾಸಿಯೊಬ್ಬರಿಗೆ ಅವರ ಗೆಳೆಯ, ‘ನನಗೆ ಪರಿಚಯವಿರುವ ಅನೇಕ ಯುವತಿಯರು ಆಮಿಶಕ್ಕೊಳಪಟ್ಟು ಅವನ ಮನೆಗೆ ಬಂದು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ, ಎಂದು ಹೇಳಿರುವುದನ್ನು ಆ ಪಕ್ಕದ ಮನೆಯವರು ಸಿಬಿಎಸ್ ಲಾಸ್ ಏಂಜಲೀಸ್ ಗೆ ತಿಳಿಸಿದ್ದಾರೆ.

ಪ್ರಸ್ತುತವಾಗಿ ಅವರನ್ನು 2012 ರಿಂದ 2019 ರವರೆಗೆ ನಡೆಸಿದ ಲೈಂಗಿಕ ಅತ್ಯಾಚಾರಗಳ ಆರೋಪಗಳಲ್ಲಿ ಬಂಧಿಸಲಾಗಿದೆಯಾದರೂ 1990 ರಿಂದಲೇ ಅವರು ಇಂಥ ಕೃತ್ಯಗಳ ತೊಡಗಿರಬಹುದೆಂದು ಪೊಲೀಸರು ಭಾವಿಸಿದ್ದಾರೆ. ಅವರಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತರೊಂದಿಗೆ ಇನ್ನೂ ಮಾತಾಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಇದು ಭೀತಿ ಹುಟ್ಟಿಸುವ ಸಂಗತಿಯಾಗಿದೆ ಎಂದು ವೀನ್ಬರ್ಗ್ ನೆರೆಮನೆಯವರೊಬ್ಬರು ಸಿವಿಎಸ್ ಲಾಸ್ ಏಂಜಲೀಸ್ ಗೆ ಹೇಳಿದ್ದಾರೆ. ‘ಯುವ ಮಹಿಳೆಯರಿಗೆ ಯಾರಿಂದಲಾದರೂ ಅಪಾಯ ಬಂದೊದಗಬಹುದಾಗಿದೆ,’ ಎಂದು ಅವರು ಹೇಳಿದ್ದಾರೆ.

ವೀನ್ಬರ್ಗ್ ರನ್ನು $3,225,000 ಬೇಲ್ ಆಧಾರದಲ್ಲಿ ಬಂಧಿಸಲಾಗಿದೆ.
ಒಬ್ಬ ನಿರ್ಮಾಪಕ ಮತ್ತು ರೈಟರ್ ಆಗಿ ವೀನ್ಬರ್ಗ್ ಗೆ ಹಾಲಿವುಡ್ ನಲ್ಲಿ ದೊಡ್ಡ ಹೆಸರಿದೆ.

ಅವರ IMDB ಐಎಮ್ ಡಿಬಿ ಪೇಜ್ಗಳ ಪ್ರಕಾರ, ‘ಸ್ಕ್ರಬ್ಸ್’ ಜೊತೆಗೆ, ಅವರು ‘ಕ್ಯಾಲಿಫೋರ್ನಿಕೇಶನ್,’ ‘ಆಂಗರ್ ಮ್ಯಾನೇಜ್ಮೆಂಟ್’ ಮತ್ತು ‘ಪೊಲಿಟಿಕಲ್ಲೀ ಇನ್ಕರೆಕ್ಟ್’ ಸೇರಿದಂತೆ ಹಲವಾರು ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದಾರೆ.

‘ದೌರ್ಜನ್ಯಕ್ಕೊಳಗಾದ ಜನರು ತಮ್ಮ ವಿಷಾದಕರ ಕತೆಗಳನ್ನು ಹೇಳಿಕೊಳ್ಳಲು ಮುಂದಾಗುತ್ತಿರುವುದರಿಂದ, ಈ ವಿಷಯಗಳು ಕೊನೆಗೂ ಬೆಳಕಿಗೆ ಬರುತ್ತಿವೆ’ ಎಂದು ನೆರೆಮನೆಯಯವರು ಸಿಬಿಎಸ್ ಲಾಸ್ ಏಂಜಲೀಸ್‌ಗೆ ತಿಳಿಸಿದ್ದಾರೆ. ‘ಆದರೆ ಈ ಕತೆ ಇಲ್ಲಿಗೆ ಮುಗಿಯುವುದಿಲ್ಲ, ಇದು ತುಂಬಾ ದೊಡ್ಡದಾಗಿದೆ.’