ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ, ವಿವರ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​

ಇತ್ತೀಚಿಗೆ ಬಾಹ್ಯಾಕಾಶದಿಂದ ಭೂಮಿಗೆ ಹಿಂದಿರುಗಿರುವ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಸಾಧನೆಯೊಂದಿಗೆ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಮಾರ್ಚ್​ 18 ರಂದು ಭೂಮಿಗೆ ಬಂದ ಸುನಿತಾ ವಿಲಿಯಮ್ಸ್ ಕೆಲವೊಂದು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂಬ ಪ್ರಶ್ನೆಗೆ ಸುನಿತಾ ವಿಲಿಯಮ್ಸ್ ಚೆನ್ನಾಗಿ ಉತ್ತರ ನೀಡಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯ ಪರ್ವತಗಳನ್ನು ನೋಡುವುದೇ ನಮಗೊಂದು ಎಲ್ಲಿಲ್ಲದ ಖುಷಿ ಎಂದಿದ್ದಾರೆ.

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ, ವಿವರ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​
ಸುನಿತಾ ವಿಲಿಯಮ್ಸ್​
Image Credit source: The Economic Times

Updated on: Apr 01, 2025 | 9:38 AM

ವಾಷಿಂಗ್ಟನ್, ಏಪ್ರಿಲ್ 1: ಭಾರತ ಮೂಲದ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್(Sunita Williams)  ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ಈ ಸಮಯದಲ್ಲಿ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯದ ನೋಟ ಅದ್ಭುತವಾಗಿದೆ . ನಾವು ಹಿಮಾಲಯದ ಮೇಲೆ ಹಾದು ಹೋದಾಗಲೆಲ್ಲಾ ಬುಚ್ ವಿಲ್ಮರ್ ಅವುಗಳ ಅದ್ಭುತ ಛಾಯಾಚಿತ್ರಗಳನ್ನು ತೆಗೆದಿದ್ದಾರೆ ಎಂದು ಸುನಿತಾ ವಿಲಯಮ್ಸ್ ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರೂ ಗಗನಯಾತ್ರಿಗಳು ಅಧ್ಯಕ್ಷ ಟ್ರಂಪ್ ಮತ್ತು ಎಲಾನ್ ಮಸ್ಕ್ ಅವರಿಗೆ ಧನ್ಯವಾದ ಅರ್ಪಿಸಿದರು. ಹಗಲಿನಲ್ಲಿ ಹಿಮಾಲಯವನ್ನು ನೋಡುವುದು ಅದ್ಭುತವಾಗಿತ್ತು. ಭಾರತದಲ್ಲಿ, ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ, ರಾತ್ರಿಯಲ್ಲಿ ಅದ್ಭುತವಾಗಿ ಕಾಣುವ ದೀಪಗಳನ್ನು ಕಾಣುವುದು ಮತ್ತಷ್ಟು ಸುಂದರವಾಗಿತ್ತು.

ಭಾರತವು ಒಂದು ಮಹಾನ್ ದೇಶ ಮತ್ತು ಅದ್ಭುತ ಪ್ರಜಾಪ್ರಭುತ್ವವಾಗಿದ್ದು, ಅದು ಬಾಹ್ಯಾಕಾಶದಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದು 2026 ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸಲು ಸಜ್ಜಾಗಿದೆ. ಇದರಲ್ಲಿ ಭಾಗವಾಗುವ ಮೂಲಕ ನಾವು ಭಾರತಕ್ಕೆ ಸಹಾಯ ಮಾಡಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡುತ್ತೇನೆ, ಅಲ್ಲಿಯ ಜನರೊಂದಿಗೆ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಳ್ಳುತ್ತೇನೆ ಎಂದು ಸುನಿತಾ ಹೇಳಿದ್ದಾರೆ.

ಇದನ್ನೂ ಓದಿ
ಸುನಿತಾ ವಿಲಿಯಮ್ಸ್​ ಹಿಂದಿರುಗಿದ ಬಳಿಕ ಟ್ರಂಪ್ ಏನಂದ್ರು?
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್​ಗೆ ಪ್ರಧಾನಿ ಮೋದಿ ಭಾವುಕ ಪತ್ರ
ಭೂಮಿಗೆ ಬರುವುದಿನ್ನು ಕನಸು ಎಂದುಕೊಂಡಿದ್ದ ಸುನಿತಾ ವಿಲಿಯಮ್ಸ್​

ಮತ್ತಷ್ಟು ಓದಿ: Fact Check: ಅಂತರಿಕ್ಷದಿಂದ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್ ಎಂದು ಹಳೆಯ ವಿಡಿಯೋ ವೈರಲ್

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದರಿಂದ ದೈಹಿಕ ಸವಾಲುಗಳನ್ನು ಎದುರಿಸುತ್ತಾರೆ ಎಂದು ಸುನೀತಾ ವಿಲಿಯಮ್ಸ್ ಹೇಳಿದರು. ಸ್ನಾಯು ದೌರ್ಬಲ್ಯ ಮತ್ತು ಮೂಳೆ ನಷ್ಟವನ್ನು ಕಡಿಮೆ ಮಾಡಲು ತಜ್ಞರ ತಂಡವಿದೆ ಎಂದು ವಿಲ್ಮೋರ್ ವಿವರಿಸಿದರು. ನಾವು ಇರುವ ಕಕ್ಷಯಿಂದ ಅತ್ಯಂತ ರಂಗು ರಂಗಾಗಿ ಭಾರತ ಗೋಚರಿಸುತ್ತದೆ.

ಪ್ರಮುಖವಾಗಿ ಗುಜರಾತ್ ಮತ್ತು ಮುಂಬೈನ ಭೂಮಿಗಳು ಅದ್ಭುತವಾಗಿ ಕಾಣುತ್ತವೆ. ದೊಡ್ಡ ದೊಡ್ಡ ಸಿಟಿಗಳು ಪುಟ್ಟ ಪುಟ್ಟ ಹಳ್ಳಿಗಳಂತೆ ಅಲ್ಲಿ ನಮಗೆ ಗೋಚರಿಸುತ್ತವೆ ಎಂದು ಸುನಿತಾ ವಿಲಿಯಮ್ಸ್ ಭಾರತದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:35 am, Tue, 1 April 25