ನಮ್ಮ ನೆರೆಯ ಶತ್ರು ರಾಷ್ಟ್ರ, ಭಯೋತ್ಪಾದನೆಗೆ ಅಡ್ಡಹೆಸರು ಆಗಿರುವ ಪಾಕಿಸ್ತಾನದಲ್ಲಿ ತಂತ್ರಜ್ಞಾನದ ಸ್ಥಿತಿಗತಿ ಹೇಗಿದೆ ಗೊತ್ತಾ? ಅಲ್ಲಿ ಡೇಟಾ ಯೋಜನೆಗಳು ಹೇಗಿವೆ? ಇಂಟರ್ನೆಟ್ ಅಗ್ಗವಾಗಿದೆಯೇ? ಅಥವಾ ದುಬಾರಿಯೇ? ನಮ್ಮ ದೇಶದ ಇಂಟರ್ನೆಟ್ ಪ್ಲಾನ್ (5 GB) ಬೆಲೆಗೆ ಹೋಲಿಸಿದರೆ ಎಷ್ಟು ವ್ಯತ್ಯಾಸಗಳಿವೆ ಗೊತ್ತಾ? ಇನ್ನು ಸೇವೆಗಳು/ ಸ್ಪೀಡು ಪ್ರಮಾಣ ಅಲ್ಲಾಗೆ ಪ್ರೀತಿ ಅನ್ನುತ್ತೀರಿ (Internet Packs In Pakistan). ಅಷ್ಟರಮಟ್ಟಿಗೆ ನಗೆಪಾಟಲಿಗೀಡಾಗಿದೆ ಪಾಕಿಸ್ತಾನ. ಅಂತಹ ವಿಷಯಗಳನ್ನು ಈಗ ತಿಳಿಯೋಣ..
ನಮ್ಮ ಭಾರತ ದೇಶದಲ್ಲಿ ಇಂಟರ್‌ನೆಟ್ ಬಳಕೆ ಹೆಚ್ಚಾದಾಗಿನಿಂದ ಹಲವರು ತಮ್ಮ ತಮ್ಮ ಮನೆಗಳಲ್ಲೇ ಕುಳಿತು ಮೊಬೈಲ್ ಫೋನ್ ಮೂಲಕ ತಮಗೆ ಇಷ್ಟವಾದ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಆಹಾರದಿಂದ ಪೀಠೋಪಕರಣಗಳವರೆಗೆ, ಲ್ಯಾಪ್‌ಟಾಪ್‌ನಿಂದ ಮೊಬೈಲ್ ಚಾರ್ಜರ್‌ಗಳವರೆಗೆ ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಮನೆಯಲ್ಲಿಯೇ ಲಭ್ಯವಾಗುತ್ತಿದೆ. ಇನ್ನು WFH ಅಂತೂ ಪ್ರಶಸ್ತವಾಗಿದೆ.
ಭಾರತದಲ್ಲಿನ ಸೇವಾ ಪೂರೈಕೆದಾರರು ಜನಸಾಮಾನ್ಯರನ್ನು ಆಕರ್ಷಿಸಲು ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಯೋಜನೆಗಳನ್ನು ನೀಡುತ್ತಿದ್ದಾರೆ. ಇದರೊಂದಿಗೆ, ದೇಶದಲ್ಲಿ ಒಬ್ಬ ಬಳಕೆದಾರರು ತಿಂಗಳಿಗೆ 12 ಜಿಬಿ ಇಂಟರ್ನೆಟ್ ಬಳಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಭಾರತದಲ್ಲಿ 100 Mbps ಇಂಟರ್ನೆಟ್ ಯೋಜನೆಯು ಸುಮಾರು ರೂ. 800. ಪಾಕಿಸ್ತಾನದಲ್ಲಿ, ಅದೇ ಯೋಜನೆಗೆ 1550 ಪಾಕಿಸ್ತಾನಿ ರೂಪಾಯಿ ಪಾವತಿಸಬೇಕು. ಅಲ್ಲಿ ಇಂಟರ್ನೆಟ್ ಎಂಬುದು ಇತರೆ ವಸ್ತು/ಸೇವೆಗಳಂತೆ ತುಂಬಾ ಕಾಸ್ಟ್ಲಿ ದುನಿಯಾ ಆಗಿದೆ.
Also Read: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್: ಎಕ್ಸ್ನಿಂದ ನಮ್ಮ ರಾಷ್ಟ್ರೀಯ ಭದ್ರತೆಗೆ ತೊಂದರೆ
ಅಲ್ಲಿ ಟೆಲಿಕಾಂ ಕಂಪನಿಯೊಂದು ಲಭ್ಯವಿರುವ ಪ್ಲಾನ್ ಗಳನ್ನು ಪರಿಶೀಲಿಸಿದರೆ… 12 GB ಇಂಟರ್ ನೆಟ್, 350 ನಿಮಿಷಗಳ ಕಾಲಿಂಗ್ ಪ್ಯಾಕ್ 950 ಪಾಕಿಸ್ತಾನಿ ರೂಪಾಯಿ… ಈ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿಯಲ್ಲಿ ಲಭ್ಯವಿದೆ. 1500 ಪಾಕಿಸ್ತಾನ ರೂಪಾಯಿ ಸಾಪ್ತಾಹಿಕ ಯೋಜನೆಯಲ್ಲಿ 40 GB ಇಂಟರ್ನೆಟ್ ಮತ್ತು 600 ನಿಮಿಷಗಳ ಕರೆ ಲಭ್ಯವಿದೆ. ಹಾಗೆಯೇ ಮತ್ತೊಂದು ಕೇವಲ ಇಂಟರ್ನೆಟ್ ಪ್ಲಾನ್ ನೋಡಿದರೆ.. 100 ಜಿಬಿ ಇಂಟರ್ನೆಟ್ 250 ಪಾಕಿಸ್ತಾನಿ ರೂಪಾಯಿಗಳಷ್ಟಿದೆ. ಜೊತೆಗೆ ತುಂಬಾ ಸ್ಲೋ ಕಣ್ರಿ ಎಂಬ ಮಾತೂ ಕೇಳಿಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ