AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಟ್ವಿಟರ್​​ ಬ್ಯಾನ್: ಎಕ್ಸ್​​​ನಿಂದ ನಮ್ಮ​​​ ರಾಷ್ಟ್ರೀಯ ಭದ್ರತೆಗೆ ತೊಂದರೆ

ಪಾಕಿಸ್ತಾನ ಎಕ್ಸ್​​​​ನ್ನು (ಟ್ವಿಟರ್​​) ಬ್ಯಾನ್ ಮಾಡಿದೆ. ತನ್ನ ದೇಶದ ರಾಷ್ಟ್ರೀಯ ಭದ್ರತೆಗೆ ತೊಂದರೆ ಇದೆ ಎಂದು ಈ ಕ್ರಮವನ್ನು ತೆಗೆದುಕೊಂಡಿದೆ. ಆದರೆ ಇದಕ್ಕೆ ಅಲ್ಲಿ ಕೋರ್ಟ್​​ ವಿರೋಧ ವ್ಯಕ್ತಪಡಿಸಿದೆ. ಈ ಆದೇಶವನ್ನು ಒಂದು ವಾರದೊಳಗೆ ಹಿಂಪಡೆಯುವಂತೆ ಹೇಳಿದೆ.

ಪಾಕಿಸ್ತಾನದಲ್ಲಿ ಟ್ವಿಟರ್​​ ಬ್ಯಾನ್: ಎಕ್ಸ್​​​ನಿಂದ ನಮ್ಮ​​​ ರಾಷ್ಟ್ರೀಯ ಭದ್ರತೆಗೆ ತೊಂದರೆ
ಎಕ್ಸ್​​ ಬ್ಯಾನ್
ಅಕ್ಷಯ್​ ಪಲ್ಲಮಜಲು​​
|

Updated on: Apr 17, 2024 | 5:30 PM

Share

ಪಾಕಿಸ್ತಾನ (Pakistan) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪಾಕ್​ನಲ್ಲಿ ಎಕ್ಸ್​​​ ಬ್ಯಾನ್​​​ ಮಾಡಲಾಗಿದೆ. ರಾಷ್ಟ್ರೀಯ ಭದ್ರತೆ ಕಾರಣವನ್ನು ಹೇಳಿ ಅಲ್ಲಿ ಎಕ್ಸ್​​​ನ್ನು ಬ್ಯಾನ್​​​ ಮಾಡಲಾಗಿದೆ. ಪಾಕಿಸ್ತಾನ ಸರ್ಕಾರವು ಫೆಬ್ರವರಿಯಲ್ಲಿಯೇ ಎಕ್ಸ್​​​ನ್ನು ನಿಷೇಧಿಸುವುದಾಗಿ ಹೇಳಿತ್ತು. ಇದೀಗ ಈ ನಿಷೇಧವನ್ನು ಅಧಿಕೃತವಾಗಿ ದೃಢಪಡಿಸಿದೆ. ಎಲೋನ್ ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್ ಮೇಲಿನ ನಿಷೇಧವನ್ನು ರದ್ದುಗೊಳಿಸುವಂತೆ ಪಾಕಿಸ್ತಾನದ ಸಿಂಧ್ ಹೈಕೋರ್ಟ್ (ಎಸ್‌ಎಚ್‌ಸಿ) ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವರದಿಯ ಪ್ರಕಾರ, ಒಂದು ವಾರದೊಳಗೆ ತನ್ನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ನ್ಯಾಯಾಲಯವು ಪಾಕಿಸ್ತಾನ ಸರ್ಕಾರವನ್ನು ಕೇಳಿದೆ.

ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿದ ಪಾಕಿಸ್ತಾನ ಸರ್ಕಾರ

ಪಾಕಿಸ್ತಾನ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, X ಪ್ಲಾಟ್‌ಫಾರ್ಮ್‌ನ ದುರುಪಯೋಗದ ಬಗ್ಗೆ ತಿಳಿಸಿದೆ. ಪಾಕಿಸ್ತಾನದಲ್ಲಿ ಎಕ್ಸ್ ಜನರಿಗೆ ಸಾಮಾಜಿಕ ಜಾಲತಾಣ ನೀಡುವ ಭದ್ರತೆಯಲ್ಲಿ ವಿಫಲಗೊಂಡಿದೆ. ​​​ ಈ ಹಿಂದೆ ಈ ಬಗ್ಗೆ ಎಕ್ಸ್​​ಗೆ ತಿಳಿಸಿತ್ತು. ಇಲ್ಲಿಯವರೆಗೆ ಇದಕ್ಕೆ ಯಾವುದೇ ಪರಿಹಾರವನ್ನು ತಂದುಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ; ದುಬೈನಲ್ಲಿ ಭಾರಿ ಮಳೆ, ವಿಮಾನಗಳ ಹಾರಾಟ ಸ್ಥಗಿತ, ಒಮಾನ್​ನಲ್ಲಿ 18 ಮಂದಿ ಸಾವು

ಈ ಹಿಂದೆ ಎಕ್ಸ್​​ನಲ್ಲಿ ಯಾವುದೇ ಪೋಸ್ಟ್​​​ನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಾಕ್​​​​ ಜನರು ದೂರ ನೀಡಿದರು. ಆದರೆ ಇದು ಸರ್ಕಾರ ತೆಗೆದುಕೊಂಡ ಕ್ರಮ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಎಲೋನ್ ಮಸ್ಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ