AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ, ಸಾವಿರಾರು ಮಂದಿ ಸ್ಥಳಾಂತರ

Volcano Eruption: ಇಂಡೋನೇಷ್ಯಾದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಜ್ವಾಲಾಮುಖಿ ಸ್ಫೋಟಗೊಂಡಿದೆ. 11,000 ಮಂದಿಯನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸಾವಿ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಯಾವುದೇ ಸಾವು ನೋವಿನ ಕುರಿತು ಮಾಹಿತಿ ಲಭ್ಯವಾಗಿಲ್ಲ. 2018ರ ಜ್ವಾಲಾಮುಖಿ ಸ್ಫೋಟದಲ್ಲಿ 430 ಮಂದಿ ಸಾವನ್ನಪ್ಪಿದ್ದರು.

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ, ಸಾವಿರಾರು ಮಂದಿ ಸ್ಥಳಾಂತರ
ಜ್ವಾಲಾಮುಖಿ ಸ್ಫೋಟ
TV9 Web
| Updated By: ನಯನಾ ರಾಜೀವ್|

Updated on: Apr 18, 2024 | 8:50 AM

Share

ಇಂಡೋನೇಷ್ಯಾ(Indonesia)ದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ(Volcano) ಸ್ಫೋಟಗೊಂಡಿದೆ. ಹೊಗೆ, ಶಾಖದ ಪರಿಣಾಮವು ಬಹು ದೂರದವರೆಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಐದು ಕಡೆ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ, ಇಂಡೋನೇಷ್ಯಾದ ಉತ್ತರ ಸುಲಾವೆಸಿಯಲ್ಲಿ ಪರ್ವತದಲ್ಲಿ ಈ ಸ್ಪೋಟ ಸಂಭವಿಸಿದ್ದು, ಲಾವಾ ಹಾಗೂ ಬಿಸಿ ಬೂಧಿ ಆಕಾಶದೆತ್ತರಕ್ಕೆ ವ್ಯಾಪಿಸಿದೆ.

ರಾಯಧಾನಿ ಮನಾಡೋದ ಸುಮಾರು 100 ಕಿ.ಮೀ ದೂರದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಎಚ್ಚರಿಕೆ ನೀಡಿದೆ.

ಸಮುದ್ರದ ಉತ್ತರ ಬದಿಯಲ್ಲಿ ತಗುಲಂಡಂಗ್‌ ದ್ವೀಪದಲ್ಲಿರುವ 11,000 ಜನರನ್ನು ಸ್ಥಳಾಂತರ ಮಾಡುವಂತೆ ಜನರಿಗೆ ಪರ್ವತದಿಂದ 6 ಕಿ.ಮೀ.ದೂರದಲ್ಲಿರುವಂತೆ ತಿಳಿಸಲಾಗಿದೆ.

ಮತ್ತಷ್ಟು ಓದಿ: ಕಾಂಗೊದಲ್ಲಿ ಸಿಡಿದ ಜ್ವಾಲಾಮುಖಿ, ಆತಂಕದಲ್ಲಿ ಊರುಬಿಟ್ಟು ಓಡುತ್ತಿರುವ ಜನರಿಗೆ ಭಾರತೀಯ ಸೇನೆಯ ನೆರವು

2023ರಲ್ಲೂ ಜ್ವಾಲಾಮುಖಿ ಸ್ಫೋಟ ಸಂಭವಿಸಿತ್ತು ಮೌಂಟ್ ಮರಾಪಿಯಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿತ್ತು ಹಲವರು ಪ್ರಾಣ ಕಳೆದುಕೊಂಡಿದ್ದರು. ಐವರು ಪರ್ವತಾರೋಹಿಗಳ ಮೃತದೇಹಗಳು ಪತ್ತೆಯಾಗಿತ್ತು. 2018ರಲ್ಲಿ ಅನಾಕ್ ಕ್ರಕತಾವ್ ಜ್ವಾಲಾಮುಖಿ ಸ್ಪೋಟದಿಂದಾಗಿ ಸುನಾಮಿ ಸಂಭವಿಸಿ, 430 ಮಂದಿ ಸಾವನ್ನಪ್ಪಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ