ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ, 2ನೇ ಸ್ಥಾನಕ್ಕೆ ಕುಸಿದ ಸಿಂಗಾಪುರದ ಚಾಂಗಿ ನಿಲ್ದಾಣ

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವನ್ನು ಸೋಲಿಸುವ ಮೂಲಕ ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಅಗ್ರ ಐದು ವಿಮಾನ ನಿಲ್ದಾಣಗಳಲ್ಲಿ ಏಷ್ಯಾ ಪ್ರಾಬಲ್ಯ ಹೊಂದಿದೆ. ದಕ್ಷಿಣ ಕೊರಿಯಾದ ಸಿಯೋಲ್ ಇಂಚಿಯಾನ್ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿದೆ. ಇದು ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣ ಎಂಬ ಬಿರುದನ್ನು ಸಹ ಪಡೆದುಕೊಂಡಿದೆ. ಭಾರತದ ನಾಲ್ಕು ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಟಾಪ್ 100 ರಲ್ಲಿ ಸ್ಥಾನ ಪಡೆದಿವೆ.

ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ, 2ನೇ ಸ್ಥಾನಕ್ಕೆ ಕುಸಿದ ಸಿಂಗಾಪುರದ ಚಾಂಗಿ ನಿಲ್ದಾಣ
ಚಾಂಗಿ ಏರ್​ಪೋರ್ಟ್​
Follow us
ನಯನಾ ರಾಜೀವ್
|

Updated on:Apr 18, 2024 | 12:40 PM

ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆನ್ನುವ ಕಿರೀಟ ಈ ಬಾರಿ ದೋಹಾದ ಹಮದ್(Hamad) ನಿಲ್ದಾಣಕ್ಕೆ ಲಭಿಸಿದೆ. ಸದಾ ತಾನೇ ಉತ್ತಮ ಎನಿಸಿಕೊಂಡು ಬೀಗುತ್ತಿದ್ದ ಸಿಂಗಾಪುರ(Singapore)ದ ಚಾಂಗಿ ವಿಮಾನ ನಿಲ್ದಾಣ ಈಗ ಎರಡನೇ ಸ್ಥಾನಕ್ಕೆ ಇಳಿದಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವನ್ನು ಸೋಲಿಸುವ ಮೂಲಕ ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಅಗ್ರ ಐದು ವಿಮಾನ ನಿಲ್ದಾಣಗಳಲ್ಲಿ ಏಷ್ಯಾ ಪ್ರಾಬಲ್ಯ ಹೊಂದಿದೆ.

ದಕ್ಷಿಣ ಕೊರಿಯಾದ ಸಿಯೋಲ್ ಇಂಚಿಯಾನ್ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿದೆ. ಇದು ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣ ಎಂಬ ಬಿರುದನ್ನು ಸಹ ಪಡೆದುಕೊಂಡಿದೆ. ಟೋಕಿಯೊದ ಹನೇಡಾ ನಾಲ್ಕನೇ ಸ್ಥಾನದಲ್ಲಿದ್ದು, ನರಿಟಾ ಐದನೇ ಸ್ಥಾನದಲ್ಲಿದ್ದಾರೆ. ಭಾರತದ ನಾಲ್ಕು ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಟಾಪ್ 100 ರಲ್ಲಿ ಸ್ಥಾನ ಪಡೆದಿವೆ.

ಹಾಂಗ್ ಕಾಂಗ್ ವಿಮಾನ ನಿಲ್ದಾಣ 22 ಸ್ಥಾನ ಜಿಗಿದು 11ನೇ ಸ್ಥಾನಕ್ಕೆ ತಲುಪಿದೆ. ಕುತೂಹಲಕಾರಿಯಾಗಿ, ಅಮೆರಿಕದ ಒಂದೇ ಒಂದು ವಿಮಾನ ನಿಲ್ದಾಣವನ್ನು ಟಾಪ್ 20 ರಲ್ಲಿ ಸೇರಿಸಲಾಗಿಲ್ಲ. ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕತಾರ್ ರಾಜಧಾನಿ ದೋಹಾದ ಪ್ರಮುಖ ವಿಮಾನ ನಿಲ್ದಾಣವಾಗಿದೆ. 600,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು 75 ಫುಟ್‌ಬಾಲ್ ಮೈದಾನಗಳಿಗೆ ಸಮಾನವಾಗಿದೆ.

ಮತ್ತಷ್ಟು ಓದಿ: ಹುಬ್ಬಳ್ಳಿ ವಿಶ್ವದರ್ಜೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಸ್ತು: ಹೊಸ ಟರ್ಮಿನಲ್​ಗೆ ಇನ್ನೆರಡೇ ದಿನದಲ್ಲಿ ಮೋದಿಯಿಂದ ಶಂಕುಸ್ಥಾಪನೆ

ಕಳೆದ ವರ್ಷ ಈ ವಿಮಾನ ನಿಲ್ದಾಣ ಎರಡನೇ ಸ್ಥಾನದಲ್ಲಿತ್ತು. ವಾಸ್ತುಶಿಲ್ಪದ ದೃಷ್ಟಿಯಿಂದ ಇದು ವಿಶ್ವದ ಅತ್ಯಂತ ಪ್ರಮುಖ ವಿಮಾನ ನಿಲ್ದಾಣವೆಂದು ಪರಿಗಣಿಸಲಾಗಿದೆ. ಜತೆಗೆ ಅತ್ಯಂತ ಐಷಾರಾಮಿ ವಿಮಾನ ನಿಲ್ದಾಣ ಎಂಬ ಶೀರ್ಷಿಕೆಯೂ ಇದರ ಖಾತೆಗೆ ಬಂದಿದೆ.

ಈ ಪಟ್ಟಿಯಲ್ಲಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣ ಆರನೇ ಸ್ಥಾನದಲ್ಲಿದ್ದರೆ, ದುಬೈ ಏಳನೇ ಸ್ಥಾನದಲ್ಲಿದೆ, ಜರ್ಮನಿಯ ಮ್ಯೂನಿಚ್ ಎಂಟನೇ ಸ್ಥಾನದಲ್ಲಿ, ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ಒಂಬತ್ತನೇ ಸ್ಥಾನದಲ್ಲಿ ಮತ್ತು ಟರ್ಕಿಯ ಇಸ್ತಾನ್‌ಬುಲ್ ವಿಮಾನ ನಿಲ್ದಾಣ ಹತ್ತನೇ ಸ್ಥಾನದಲ್ಲಿದೆ. . ಅಮೆರಿಕದ ಸಿಯಾಟಲ್-ಟಕೋಮಾ ವಿಮಾನ ನಿಲ್ದಾಣವು ಈ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದೆ.

ದೋಹಾ ಹಮದ್ ಸಿಂಗಾಪುರ ಚಾಂಗಿ ಸಿಯೋಲ್ ಇಂಚಿಯಾನ್ ಟೋಕಿಯೋ ಹನೇಡಾ ಟೋಕಿಯೋ ನರಿಟಾ ಪ್ಯಾರಿಸ್ ಸಿಡಿಜಿ ದುಬೈ ಮ್ಯೂನಿಚ್ ಜ್ಯೂರಿಚ್ ಇಸ್ತಾಂಬುಲ್ ಹಾಂಗ್ ಕಾಂಗ್ ರೋಮ್ ಫಿಯುಮಿಸಿನೊ ವಿಯೆನ್ನಾ ಹೆಲ್ಸಿಂಕಿ-ವಂಟಾ ಮ್ಯಾಡ್ರಿಡ್-ಬರಾಜಸ್ ಸೆಂಟ್ರೇರ್ ನಗೋಯಾ ವ್ಯಾಂಕೋವರ್ ಕನ್ಸಾಯ್ ಮೆಲ್ಬೋರ್ನ್ ಕೋಪನ್ ಹ್ಯಾಗನ್

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:35 pm, Thu, 18 April 24

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು