ಏಲಿಯನ್​ಗಳಿಂದ ಮನುಷ್ಯರ ಫ್ರೆಂಡ್​ಶಿಪ್: ಇದು ಇಸ್ರೇಲಿ ಬಾಹ್ಯಾಕಾಶ ವಿಜ್ಞಾನಿಯ ಖಚಿತ ನುಡಿ

ಇದೀಗ ಅಮೆರಿಕದಲ್ಲಿ ಅಧಿಕಾರ ಬದಲಾವಣೆಯ ಪ್ರಕ್ರಿಯೆ ಆರಂಭವಾಗಿರುವುದರಿಂದ, ನೂತನ ಅಧ್ಯಕ್ಷ ಜೋ ಬಿಡೆನ್ ಮೇಲೆ ಪ್ರಭಾವ ಬೀರಲು ಯೆಶೆದ್ ಈ ಹೇಳಿಕೆ ನೀಡಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಏಲಿಯನ್​ಗಳಿಂದ ಮನುಷ್ಯರ ಫ್ರೆಂಡ್​ಶಿಪ್: ಇದು ಇಸ್ರೇಲಿ ಬಾಹ್ಯಾಕಾಶ ವಿಜ್ಞಾನಿಯ ಖಚಿತ ನುಡಿ
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ

|

Dec 08, 2020 | 2:50 PM

ಜೆರುಸಲೆಂ: ಏಲಿಯನ್​ಗಳು (ಅನ್ಯಗ್ರಹ ಜೀವಿ) ಇರುವುದು ನಿಜ, ಕೆಲ ಸರ್ಕಾರಗಳು ರಹಸ್ಯವಾಗಿ ಅವುಗಳ ಜೊತೆಗೆ ವ್ಯವಹರಿಸುತ್ತಿವೆ. ಕಾಲ ಪಕ್ವವಾದಾಗ ಈ ವಿಷಯ ಬಹಿರಂಗಪಡಿಸುತ್ತವೆ ಎಂದು ಇಸ್ರೇಲ್​ ಸರ್ಕಾರದ ಬಾಹ್ಯಾಕಾಶ ರಕ್ಷಣಾ ಯೋಜನೆಯ ಮುಖ್ಯಸ್ಥರಾಗಿ 1981ರಿಂದ 2010ರವರೆಗೆ ಕಾರ್ಯ ನಿರ್ವಹಿಸುತ್ತಿದ್ದ 87ರ ಹರೆಯದ ವಿಜ್ಞಾನಿ ಹೈಮ್ ಯೆಶೆದ್ ಹೇಳಿಕೆ ನೀಡಿದ್ದಾರೆ.

ಇಸ್ರೇಲಿ ಪ್ರಕಾಶನ ಸಂಸ್ಥೆ ಯೆಡಿಯೊಟ್ ಅಹರೊನೊಟ್​ಗೆ ನೀಡಿದ ಸಂದರ್ಶನದಲ್ಲಿ ಹೈಮ್ ಯೆಶೆದ್ ಅನ್ಯಗ್ರಹ ಜೀವಿಗಳ ಉಪಸ್ಥಿತಿಯನ್ನು ಒಪ್ಪಿಕೊಂಡಿದ್ದಾರೆ. ಅವು ನಮ್ಮೊಂದಿಗೆ ಬಹುಕಾಲದಿಂದ ಇವೆ. ಗಲಕ್ಟಿಕ್ ಫೆಡರೇಶನ್ ಹೆಸರಿನಲ್ಲಿ ತಮ್ಮದೇ ಆದ ಸಂಘಟನೆಯನ್ನೂ ಹೊಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಈ ವಿಚಾರವನ್ನು ಜಗತ್ತಿಗೆ ಸಾರಿ ಹೇಳಲು ಮುಂದಾಗಿದ್ದರು. ಆದರೆ, ಈ ಸತ್ಯ ತಿಳಿಯಲು ಜನರಿನ್ನೂ ಸಿದ್ಧರಿಲ್ಲ ಎಂಬ ಕಾರಣಕ್ಕೆ ಸುಮ್ಮನಾದರು ಎಂದು ಯೆಶೆದ್ ಹೇಳಿದ್ದಾರೆ.

ಭೂಮಿಯ ಮೇಲೆ ಸಂಶೋಧನೆ ನಡೆಸಲು ಅನ್ಯಗ್ರಹ ಜೀವಿಗಳು ಅಮೆರಿಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಅವೂ ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸಹಾಯಬೇಕು ಎಂದು ಅಪೇಕ್ಷಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳ ಗ್ರಹದಲ್ಲಿರುವ ಭೂಗತ ಬಾಹ್ಯಾಕಾಶ ಕೇಂದ್ರದಲ್ಲಿ ಅನ್ಯಗ್ರಹ ಜೀವಿಗಳು ಮನುಷ್ಯರ ಜೊತೆಗೂಡಿ ಸಂಶೋಧನೆ ನಡೆಸುತ್ತಿವೆ. ಪರಸ್ಪರ ವಿಶ್ವಾಸ ವೃದ್ಧಿಗೆ ಎರಡೂ ಕಡೆಯಿಂದ ಶ್ರಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈಗೇಕೆ ಈ ಹೇಳಿಕೆ?

ಈ ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಹ ಅನ್ಯಗ್ರಹ ಜೀವಿಗಳ ಅಸ್ತಿತ್ವ ಒಪ್ಪಿಕೊಂಡಿದ್ದರು. ಆದರೆ ಹೆಚ್ಚೇನೂ ವಿವರ ನೀಡಿರಲಿಲ್ಲ. ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಬಾಹ್ಯಾಕಾಶ ಪಡೆಯನ್ನು ವಿಸರ್ಜಿಸಲು ಮುಂದಾಗಿದ್ದರು.

ಇದೀಗ ಅಮೆರಿಕದಲ್ಲಿ ಅಧಿಕಾರ ಬದಲಾವಣೆಯ ಪ್ರಕ್ರಿಯೆ ಆರಂಭವಾಗಿರುವುದರಿಂದ, ನೂತನ ಅಧ್ಯಕ್ಷ ಜೋ ಬಿಡೆನ್ ಮೇಲೆ ಪ್ರಭಾವ ಬೀರಲು ಯೆಶೆದ್ ಈ ಹೇಳಿಕೆ ನೀಡಿರಬಹುದು. ಈ ಮೂಲಕ ಬಾಹ್ಯಾಕಾಶ ಸಂಶೋಧನೆಗೆ ಹರಿದುಬರುತ್ತಿರುವ ಅನುದಾನ ಉಳಿಸಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಬಾಹ್ಯಾಕಾಶ ಪ್ರವೇಶಿಸಲು ಖಾಸಗಿ ವಲಯಕ್ಕೆ ಅನುಮತಿ! ಪ್ರತ್ಯೇಕ ಏಜೆನ್ಸಿ ಅಸ್ತಿತ್ವಕ್ಕೆ

2024ರಲ್ಲಿ ಚಂದ್ರನತ್ತ ಹಾರಲಿದೆ ಅರಬ್ ರಾಷ್ಟ್ರದ ಬಾಹ್ಯಾಕಾಶ ನೌಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada