ಪಾಕ್ ಪ್ರಧಾನಿಗೆ ಯಾರೂ ಬೇಡ್ವಂತೆ, ಟ್ವಿಟರ್​ನಲ್ಲಿ ಎಲ್ಲರನ್ನೂ ಅನ್​ಫಾಲೋ ಮಾಡಿದ್ರು ಇಮ್ರಾನ್ ಖಾನ್

2010ರಲ್ಲಿ ಟ್ವಿಟರ್ ಖಾತೆ ಆರಂಭಿಸಿದ್ದ ಇಮ್ರಾನ್ ಖಾನ್, ಕಳೆದ ಸೋಮವಾರ ಎಲ್ಲರನ್ನೂ ಅನ್​ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹಲವು ಊಹಾಪೋಹಗಳು ಟ್ವಿಟರ್​ನಲ್ಲಿ ಹರಿದಾಡಿದ್ದು ಇಮ್ರಾನ್ ಖಾನ್ ಸುದ್ದಿಯಲ್ಲಿದ್ದಾರೆ.

ಪಾಕ್ ಪ್ರಧಾನಿಗೆ ಯಾರೂ ಬೇಡ್ವಂತೆ, ಟ್ವಿಟರ್​ನಲ್ಲಿ ಎಲ್ಲರನ್ನೂ ಅನ್​ಫಾಲೋ ಮಾಡಿದ್ರು ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್
TV9kannada Web Team

| Edited By: ganapathi bhat

Apr 07, 2022 | 5:34 PM

ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಟ್ವಿಟರ್ ಖಾತೆಯಿಂದ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣಗಳನ್ನು ಹುಡುಕಿರುವ ಟ್ವಿಟರ್ ಬಂಧುಗಳು ವಿಚಿತ್ರ ವಿಶೇಷ ಊಹೆಗಳನ್ನು ಹರಿಬಿಟ್ಟು ತಮಾಷೆ ಮಾಡಿಕೊಂಡಿದ್ದಾರೆ.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್​ರ ಟ್ವಿಟರ್ ಖಾತೆ ನೋಡಿ ಇಮ್ರಾನ್ ಖಾನ್​ಗೆ ಕೀಳರಿಮೆ ಉಂಟಾಗಿದೆ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಇಮ್ರಾನ್ ಖಾನ್ ತಮ್ಮ ಮೊದಲ ಪತ್ನಿಯನ್ನೂ ಅನ್​ಫಾಲೊ ಮಾಡಿರುವುದನ್ನು ಟ್ರಾಲ್ ಮಾಡಿದ್ದಾರೆ.

ಇಮ್ರಾನ್ ಖಾನ್ ಟ್ವಿಟರ್ ಖಾತೆ

ನವಾಜ್ ಷರೀಫ್ ಟ್ವಿಟರ್ ಖಾತೆ ನೋಡಿ ಖಿನ್ನರಾದ್ರಾ ಇಮ್ರಾನ್ ಖಾನ್? ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಟ್ವಿಟರ್​ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಅದನ್ನು ನೋಡಿದ ಇಮ್ರಾನ್ ಖಾನ್ ನಾನೂ ಹಾಗೇ ಮಾಡಬೇಕು ಎಂದು ಕೊರಗಿ, ಖಿನ್ನರಾಗಿದ್ದಾರಂತೆ. ಕೀಳರಿಮೆ ಪಟ್ಟು ನಂತರ ತಾವು ಹಿಂಬಾಲಿಸುವ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರಂತೆ.

ಹಾಗಂತ ಈ ನೀವು ವಿವರಣೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಇದು ಟ್ವೀಟಿಗರ ಟ್ರಾಲ್ ಕಿತಾಪತಿ ಅಷ್ಟೆ.

ನವಾಜ್ ಶರೀಫ್ ಟ್ವಿಟರ್ ಖಾತೆ

ವಿಚ್ಛೇದಿತ ಮೊದಲ ಪತ್ನಿಯನ್ನೂ ಅನ್​ಫಾಲೊ ಮಾಡಿದ್ರು ಖಾನ್ ಇಮ್ರಾನ್ ಖಾನ್, ತಮ್ಮ ಮೊದಲ ಪತ್ನಿ ಜೆಮಿಮಾ ಗೋಲ್ಡ್​ಸ್ಮಿತ್​​ರನ್ನು ವಿಚ್ಛೇದನದ ಬಳಿಕವೂ ಫಾಲೋ ಮಾಡುತ್ತಿದ್ದರು. ಈಗ ಎಲ್ಲರನ್ನೂ ಅನ್​ಫಾಲೋ ಮಾಡಿರುವ ಪಾಕ್ ಪ್ರಧಾನಿ ತಮ್ಮ ಮೊದಲ ಪತ್ನಿಯನ್ನೂ ಟ್ವಿಟರ್​ನಲ್ಲಿ ಉಳಿಸಿಕೊಂಡಿಲ್ಲ. ಈ ಬಗ್ಗೆ ಟ್ವೀಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಎಲ್ಲರನ್ನೂ ಅನ್​ಫಾಲೋ ಮಾಡಿದ್ದು ಓಕೆ ಬಟ್ ಜೆಮಿಮಾರಿಗೂ ಹಾಗೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ ಟ್ವಿಟ್ ಪಟುಗಳು ಟ್ರಾಲ್ ಸುರಿಮಳೆ ಸುರಿಸಿದ್ದಾರೆ.

ಇಮ್ರಾನ್ ಖಾನ್ ಟ್ವಿಟರ್ ಖಾತೆ ಇತಿಹಾಸ 2010ರಲ್ಲಿ ಟ್ವಿಟರ್ ಖಾತೆ ಆರಂಭಿಸಿದ್ದ ಇಮ್ರಾನ್ ಖಾನ್, ಕಳೆದ ಸೋಮವಾರ ಎಲ್ಲರನ್ನೂ ಅನ್​ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹಲವು ಊಹಾಪೋಹಗಳು ಟ್ವಿಟರ್​ನಲ್ಲಿ ಹರಿದಾಡಿದ್ದು ಇಮ್ರಾನ್ ಖಾನ್ ಸುದ್ದಿಯಲ್ಲಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ಡ್ರಗ್ಸ್​ ತಗೋತಿದ್ದರು: ಪಾಕ್ ಮಾಜಿ ವೇಗಿ ಸರ್ಫ್ರಾಜ್ ನವಾಜ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada