Covid 19 ಲಸಿಕೆ ಪಡೆದವರ ತುಟಿ ಓರೆಯಾಗಿದ್ದೇಕೆ? ಅಡ್ಡ ಪರಿಣಾಮದ ಬಗ್ಗೆ ತಜ್ಞರ ಸಮರ್ಥನೆ?

ತಜ್ಞರು ಹೇಳುವ ಪ್ರಕಾರ ಬೆಲ್ಸ್ ಪಾಲ್ಸಿ ಯಾವ ಸಂದರ್ಭದಲ್ಲಿ ಬೇಕಾದರೂ ಆಗಬಹುದು. ಇದು ಲಸಿಕೆಯಿಂದಲೇ ಆಯಿತು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ, 2001ರಲ್ಲಿ ಜ್ವರಕ್ಕೆ ಬಳಸುವ ಔಷಧಿಯೊಂದು ಇಂಥದ್ದೇ ಅಡ್ಡಪರಿಣಾಮಕ್ಕೆ ಕಾರಣವಾಗಿ ನಂತರ ಅದನ್ನು ಮಾರುಕಟ್ಟೆಯಿಂದಲೇ ಹಿಂಪಡೆಯಲಾಗಿತ್ತು.

Covid 19 ಲಸಿಕೆ ಪಡೆದವರ ತುಟಿ ಓರೆಯಾಗಿದ್ದೇಕೆ? ಅಡ್ಡ ಪರಿಣಾಮದ ಬಗ್ಗೆ ತಜ್ಞರ ಸಮರ್ಥನೆ?
ಸಾಂದರ್ಭಿಕ ಚಿತ್ರ
Follow us
Skanda
| Updated By: ಸಾಧು ಶ್ರೀನಾಥ್​

Updated on: Dec 09, 2020 | 12:02 PM

ಬ್ರಿಟನ್​ನಲ್ಲಿ ಕೊವಿಡ್​ ಲಸಿಕೆ ನೀಡುವ ಪ್ರಕ್ರಿಯೆಗೆ ನಿನ್ನೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಆದರೆ, ಆ ಸುದ್ದಿ ನೋಡಿ ಖುಷಿಪಟ್ಟವರಿಗೆಲ್ಲಾ ಇದೊಂದು ಸಣ್ಣ ಶಾಕಿಂಗ್ ನ್ಯೂಸ್ ಸಹ ಆಗಬಹುದು. ಅಂತೂ ಇಂತೂ ಕೊರೊನಾ ನಿಯಂತ್ರಿಸಲು ಲಸಿಕೆ ಸಿಕ್ಕಿತಲ್ಲಾ ಅಂತಾ ಖುಷಿಪಡುವಷ್ಟರಲ್ಲೇ ತಜ್ಞರು ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿದೆ ಎನ್ನುವ ಸಂದೇಹ ಹೊರಹಾಕಿದ್ದಾರೆ.

ಲಸಿಕೆ ಪಡೆದವರಲ್ಲಿ ಬೆಲ್ಸ್​ ಪಾಲ್ಸಿ? ಫೈಜರ್​ ಲಸಿಕೆ ಪ್ರಯೋಗಕ್ಕೆ ಒಳಪಟ್ಟ ನಾಲ್ವರಲ್ಲಿ ಬೆಲ್ಸ್​ ಪಾಲ್ಸಿ ಕಾಣಿಸಿಕೊಂಡಿತ್ತು ಎಂಬ ಸುದ್ದಿ ಹೊರಬಿದ್ದಿದೆ. ಬೆಲ್ಸ್​ ಪಾಲ್ಸಿ ಒಂದು ಬಗೆಯ ಪಾರ್ಶ್ವವಾಯು ಆಗಿದ್ದು ಇದರಲ್ಲಿ ತುಟಿಯ ಭಾಗ ಕೊಂಚ ಓರೆಯಾಗುತ್ತದೆ. ಲಸಿಕೆ ಪಡೆದವರಲ್ಲಿ ಹೀಗಾಗಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ತಜ್ಞರು ಹೇಳುವ ಪ್ರಕಾರ ಬೆಲ್ಸ್ ಪಾಲ್ಸಿ ಯಾವ ಸಂದರ್ಭದಲ್ಲಿ ಬೇಕಾದರೂ ಆಗಬಹುದು. ಇದು ಲಸಿಕೆಯಿಂದಲೇ ಆಯಿತು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ, 2001ರಲ್ಲಿ ಜ್ವರಕ್ಕೆ ಬಳಸುವ ಔಷಧಿಯೊಂದು ಇಂಥದ್ದೇ ಅಡ್ಡಪರಿಣಾಮಕ್ಕೆ ಕಾರಣವಾಗಿ ನಂತರ ಅದನ್ನು ಮಾರುಕಟ್ಟೆಯಿಂದಲೇ ಹಿಂಪಡೆಯಲಾಗಿತ್ತು. ಆದ್ದರಿಂದ ಈಗ ಫೈಜರ್ ಲಸಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಪರೀಶೀಲನೆ ನಡೆಯಬೇಕಿದೆ.

ಬೆಲ್ಸ್​ಪಾಲ್ಸಿ ಸಮಸ್ಯೆಗೆ ಒಳಗಾದ ನಾಲ್ವರಲ್ಲಿ ಒಬ್ಬರಿಗೆ ಲಸಿಕೆ ಪಡೆದ 3ನೇ ದಿನಕ್ಕೆ ತುಟಿ ಓರೆಯಾಗುವ ಲಕ್ಷಣ ಕಾಣಿಸಿಕೊಂಡು ಮತ್ತೆರೆಡು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳಿದೆ. ಇನ್ನೊಬ್ಬರಲ್ಲಿ ಲಸಿಕೆ ಪಡೆದ 9ನೇ ದಿನಕ್ಕೆ ಈ ಸಮಸ್ಯೆ ಗೋಚರಿಸಿದರೆ, 3 ಮತ್ತು 4ನೇ ವ್ಯಕ್ತಿಯಲ್ಲಿ ಕ್ರಮವಾಗಿ 37 ಮತ್ತು 48ನೇ ದಿನಕ್ಕೆ ಮುಖಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಮೂವರು 10ರಿಂದ 12 ದಿನಗಳಲ್ಲಿ ಗುಣಮುಖರಾಗಿದ್ದಾರೆ.

ತುಟಿ ಓರೆ ಆಗುವುದಕ್ಕೆ ಕೊರೊನಾ ಸೋಂಕು ಸಹ ಕಾರಣವಿರಬಹುದು ಇನ್ನೊಂದು ಅಭಿಪ್ರಾಯದ ಪ್ರಕಾರ ಕೊವಿಡ್​ ಸೋಂಕು ಉಸಿರಾಟ ಪ್ರಕ್ರಿಯೆಗೆ ಅಡಚಣೆ ಉಂಟುಮಾಡುತ್ತದೆ. ಅದೇ ಬೆಲ್ಸ್​ಪಾಲ್ಸಿಗೂ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದರೆ, ಸದ್ಯದ ಮಟ್ಟಿಗೆ ಲಸಿಕೆಯೇ ಸಮಸ್ಯೆಗೆ ಕಾರಣ ಎಂದು ಧೃಡವಾಗಿ ಹೇಳಲು ಆಗುತ್ತಿಲ್ಲವಾದ್ದರಿಂದ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ವರದಿಗಳು ತಿಳಿಸಿವೆ.

ಈ ಗೊಂದಲಗಳ ನಡುವೆ ಇನ್ನೊಂದು ತಜ್ಞರ ತಂಡ ಫೈಜರ್ ಮತ್ತು ಬಯೋ ಎನ್​ ಟೆಕ್​ ಲಸಿಕೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪರಿಣಾಮಕಾರಿ ಲಸಿಕೆಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಲಭಿಸಿರುವ ಮಾಹಿತಿ ಪ್ರಕಾರ ಲಸಿಕೆಗಳಿಂದ ಯಾವುದೇ ರೀತಿಯ ಗಂಭೀರ ಅಡ್ಡಪರಿಣಾಮ ಆಗಿಲ್ಲವಾದ್ದರಿಂದ ಇವುಗಳನ್ನು ಶಿಫಾರಸು ಮಾಡಬಹುದು ಎಂದಿದ್ದಾರೆ.

ಆಕ್ಸ್​ಫರ್ಡ್​ – ಆಸ್ಟ್ರೋಜೆನೆಕಾ ಲಸಿಕೆಯೂ ಪರಿಣಾಮಕಾರಿ ಇನ್ನೊಂದೆಡೆ ಆಕ್ಸ್​ಫರ್ಡ್​ ಮತ್ತು ಆಸ್ಟ್ರೋಜೆನೆಕಾ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಲಸಿಕೆ ಶೇ.70ರಷ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ವರದಿ ಮಾಡಿದೆ. ಕಡಿಮೆ ಬೆಲೆ ಮತ್ತು ಸುಲಭವಾಗಿ ಲಭ್ಯವಾಗಲಿದೆ ಎನ್ನುವ ಕಾರಣಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಸದರಿ ಲಸಿಕೆಯತ್ತ ಮುಖಮಾಡಿ ನಿಂತಿವೆ. ಆದರೆ, ಈ ಲಸಿಕೆ 55 ವರ್ಷ ಮೇಲ್ಪಟ್ಟವರಿಗೆ ಎಷ್ಟರ ಮಟ್ಟಿಗೆ ಉಪಯುಕ್ತ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಆಸ್ಟ್ರೋಜೆನೆಕಾ ಲಸಿಕೆಯನ್ನು 2 ಡೋಸ್ ಕೊಡುವಲ್ಲಿ ಅರ್ಧ ಅಥವಾ 1 ಡೋಸ್ ಕೊಟ್ಟ ಕಾರಣ ಕೆಲವೆಡೆ ಗೊಂದಲಗಳು ಉಂಟಾಗಿವೆ. ಇದರ ಹೊರತಾಗಿಯೂ ಇದುವರೆಗೆ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

Explainer | ಫೈಝರ್ ಲಸಿಕೆ ಹಾಕಿಸಿಕೊಂಡವರು ಕೊರೊನಾ ಸೋಂಕಿನಿಂದ ಎಷ್ಟು ಸೇಫ್?

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ